- Sunday
- October 4th, 2026
ಸೇವಾಜೆ ಹೊನ್ನೆಮೂಲೆ ಮಾವಿನಗೊಡ್ಲು ದೊಡ್ಡಿಕಾನ ಆಗಿ ಮಾವಿನಕಟ್ಟೆ ಸಂಪರ್ಕಿಸುವ ಪಂಚಾಯತ್ ರಸ್ತೆಯು ತೀರಾ ಹದಗೆಟ್ಟಿದ್ದು ಅದನ್ನು ಸರಿಪಡಿಸಿ ಕಾಂಕ್ರೀಟೀಕರಣ ಗೊಳಿಸಬೇಕೆಂಬ ಮನವಿ ಪತ್ರವನ್ನು ರಸ್ತೆಯ ಫಲಾನುಭವಿಗಳು ಶಾಸಕರಿಗೆ ಮನವಿ ಸಲ್ಲಿಸಿದರು.
ಪ್ರಜಾಧ್ವನಿ ಕರ್ನಾಟಕ ಮತ್ತು ಸರಕಾರಿ ಪ್ರೌಢಶಾಲೆ ಎಡಮಂಗಲ ಇವುಗಳ ಸಹಯೋಗದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಮತ್ತು ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಅ. 2ರಂದು ಆಚರಿಸಲಾಯಿತು.ಎಡಮಂಗಲ ಸರಕಾರಿ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ಧನ ಪರ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ...
ದೇವಚಳ್ಳ: ದೇವಚಳ್ಳ ಗ್ರಾಮದಲ್ಲಿ ಸುಮಾರು ₹92 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಗುದ್ದಲಿಪೂಜೆ ನೆರವೇರಿಸಿದರು. ಕಾಮಗಾರಿಗಳ ವಿವರ: ಮುಳಿಯಡ್ಕ–ವಾಲ್ತಾಜೆ ರಸ್ತೆ ಅಭಿವೃದ್ಧಿ – ₹5.50 ಲಕ್ಷ ಹುರುಳಿಯಡ್ಕ–ಮಣಿಯೂರು–ಅಂಬೆಕಲ್ಲು ರಸ್ತೆ – ₹10 ಲಕ್ಷ ಮಣಿಯೂರು–ಪರ್ಲೆಡಿ ರಸ್ತೆ – ₹10 ಲಕ್ಷ ಅಡ್ಕನಪಾರೆ ಎಸ್‌ಸಿ...
ಸುಳ್ಯ ಕುಲಾಲ ಸಮಾಜ ಸೇವಾ ಸಂಘದ ಸಭೆ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಹೇಮನಾಥ ನೆಟ್ಟಾರು, ಕಾರ್ಯದರ್ಶಿ ಯಾಗಿ ಬಾಬು ಕುಲಾಲ್ ಪೇಲತ್ತಮೂಲೆ, ಕೋಶಾಧಿಕಾರಿಯಾಗಿ ಪ್ರಭಾಕರ ನೆಟ್ಟಾರು ಆಯ್ಕೆ ಗೊಂಡಿರುತ್ತಾರೆ. ಸಂಘಟನಾ ಕಾರ್ಯದರ್ಶಿ ಸುಮಿತ್ರಾ ಸರೋಳಿಕನ, ಉಪಾಧ್ಯಕ್ಷರಾಗಿ ಲಲಿತಾ ನೀರಬಿದಿರೆ, ನಿರ್ದೇಶಕರಾಗಿ ಕವಿತಾ ಕಾಯರ್ತಡ್ಕ, ಸುಕುಮಾರ ಸುಬ್ರಹ್ಮಣ್ಯ,...
