ಕೊಂಬಾರು ಶಾಲೆಯಲ್ಲಿ ಸುಳ್ಯ ಎನ್.ಎಸ್.ಎಸ್‌. ನಿಂದ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ, ಕೆ.ವಿ.ಜಿ. ಪಾಲಿಟೆಕ್ನಿಕ್‌ನ ಎನ್.ಎಸ್.ಎಸ್ ಘಟಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಬಾರು ಹಾಗೂ ಅಂಗನವಾಡಿ ಕೇಂದ್ರ ಕೊಂಬಾರು ಇವರ ಸಹಯೋಗದಲ್ಲಿ ಅಕ್ಟೋಬರ್ 2ರಂದು ಕೊಂಬಾರು ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ವಿ.ಜಿ. ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಅಣ್ಣಯ್ಯ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ರೈಲ್ವೆ ಉದ್ಯೋಗಿ ಹಾಗೂ ದಾನಿಗಳಾದ ಹೊನ್ನಪ್ಪ ಗೌಡ ಮಿತ್ತಬೈಲು, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಎ., ದಿವ್ಯ ತಾಯಂದಿರ ಪರಿಷತ್ತಿನ ಅಧ್ಯಕ್ಷರು ಹಾಗೂ ಸೇವಾ ಸಂಗಮದ ಕಾರ್ಯಕಾರಿ ಅಧ್ಯಕ್ಷರಾದ ಯಶವಂತ ಜಯನಗರ ಉಪಸ್ಥಿತರಿದ್ದರು.
ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷೀಯ ಮಾತಿನಲ್ಲಿ ಅಣ್ಣಯ್ಯ ಕೆ. ಅವರು ಕೆ.ವಿ.ಜಿ. ಪಾಲಿಟೆಕ್ನಿಕ್ ಹಾಗೂ ಸೇವಾ ಸಂಗಮ ಟ್ರಸ್ಟ್ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿ, ಸೇವಾ ಸಂಗಮದ ಸಾಮಾಜಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಬಳಿಕ ನಡೆದ ವಿವಿಧ ಅಟೋಟ ಸ್ಪರ್ಧೆಗಳು ಹಾಗೂ ಮನರಂಜನಾ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಹೊನ್ನಪ್ಪ ಗೌಡ ಬಾರ್ಯ ವಹಿಸಿದ್ದರು. ಉಪತಹಶೀಲ್ದಾರರಾದ ಗೋಪಾಲ ಕಲ್ಲುಗುಡ್ಡೆ, ಚಿದಾನಂದ ಗೌಡ ಕೆ. ಹೊಸಬೀಡು, ನಿವೃತ್ತ ಪ್ರಾಂಶುಪಾಲ ಹಾಗೂ ಸೇವಾ ಸಂಗಮದ ಗೌರವ ಸಲಹೆಗಾರರಾದ ಎನ್.ಆರ್. ಗಣೇಶ್, ಸೇವಾ ಸಂಗಮದ ಗೌರವ ಅಧ್ಯಕ್ಷ ಬಾಲಕೃಷ್ಣ ಗೌಡ ಬೊಳ್ಳೂರು, ಗೌರವ ಸಲಹೆಗಾರರಾದ ಜಯಪ್ರಕಾಶ್ ಕೆ., ಫಾಲಚಂದ್ರ, ಕಡಬ ಕ್ಲಸ್ಟರ್‌ನ ಸಿ.ಆರ್.ಪಿ. ಗಣೇಶ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ವೀಣಾಕುಮಾರಿ ಪಿ.ಎನ್. ಉಪಸ್ಥಿತರಿದ್ದರು.

. . . . . . . . .

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳ ಸುರಕ್ಷತೆಗೆ ರೋಡ್ ಹಂಪ್, ಸೈನ್ ಬೋರ್ಡ್ ಅಳವಡಿಕೆ ಕಾರ್ಯಕ್ರಮದ ಅಂಗವಾಗಿ ಸೇವಾ ಸಂಗಮದ ವತಿಯಿಂದ ತೀರ್ಥೇಶ್ ಅವರ ನೇತೃತ್ವದಲ್ಲಿ ಕೊಂಬಾರು ಶಾಲೆಯ ಸಮೀಪದ ರಸ್ತೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರೋಡ್ ಹಂಪ್ ಹಾಗೂ ಸೈನ್ ಬೋರ್ಡ್ ಅಳವಡಿಸಲಾಯಿತು. ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ ಕೈಗೊಂಡ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮವನ್ನು ಸುಶಾಂತ್ ಅಜ್ಜಿಕಲ್ಲು ಹಾಗೂ ಭವ್ಯಶ್ರೀ ಎಂ.ಎಸ್. ನಿರೂಪಿಸಿದರು. ಸೇವಾ ಸಂಗಮದ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು ಹಾಗೂ ಊರಿನ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading