- Friday
- July 24th, 2026
ಸುಬ್ರಹ್ಮಣ್ಯ ಜುಲೈ 19 : ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನೆಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ಬರುವ ಶುದ್ಧ ಷಷ್ಟಿ ಈ ದಿನ ರವಿವಾರದೊಂದಿಗೆ ಬಂದುದರಿಂದ ಅತ್ಯಧಿಕ ಭಕ್ತ ಜನರು ಕುಕ್ಕೆಗೆ ಆಗಮಿಸಿ ಶ್ರೀ ದೇವರ ದರ್ಶನ ಪ್ರಸಾದ ಸ್ವೀಕರಿಸಿದರು. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಇಂದು ಕೂಡ ಇದ್ದು...
ಸುಬ್ರಹ್ಮಣ್ಯ ಜುಲೈ 16 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ಬರುವ ಆಶ್ಲೇಷ ನಕ್ಷತ್ರದಂದು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಬಂದು ಆಶ್ಲೇಷ ಬಲಿ ಸೇವೆ ಸಲ್ಲಿಸುವುದಾಗಿದೆ. ಅದೇ ರೀತಿ ಈ ಬಾರಿ ಮಳೆಗಾಲವಾದರೂ ಮಳೆ ಇಲ್ಲದ ಕಾರಣ ಹೆಚ್ಚಿನ ಭಕ್ತರು ಆಶ್ಲೇಷ ಸೇವೆಗೆಂದೆ ಬಂದು ನಿನ್ನೆ ಬುಧವಾರದಂದು ಕುಕ್ಕೆ ಕ್ಷೇತ್ರದ ದೇವಳದ ವಸತಿ...
ಶ್ರೀ ಜಲದುರ್ಗಾದೇವೀ ದೇವಸ್ಥಾನ ಪೆರುವಾಜೆಯಲ್ಲಿ ಆಷಾಢ ಮಾಸದ ವಿಶೇಷ ಅಂಗವಾಗಿ 48 ದಿನಗಳ ಕಾಲ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ಕಾರ್ಯಕ್ರಮವು ಜುಲೈ 17 ಶುಕ್ರವಾರದಿಂದ ಆರಂಭಗೊಂಡು ಸೆಪ್ಟೆಂಬರ್ 2 ಬುಧವಾರದವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 8:00 ಗಂಟೆಗೆ ಶ್ರೀ ಗಣಪತಿ ಹೋಮ ಹಾಗೂ ರಾತ್ರಿ 7:30 ಗಂಟೆಗೆ ಶ್ರೀ ದುರ್ಗಾಪೂಜೆ ನೆರವೇರಲಿದ್ದು,...
ನಾಲ್ಕೂರು ಗ್ರಾಮದ ನಡುಗಲ್ಲು ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಜು.14 ರಂದು ನಡೆದ ಸಭೆಯಲ್ಲಿ ವೆಂಕಟ್ ವಳಲಂಬೆ ಹಾಗೂ ಕಿರಣ್ ಬುಡ್ಲೆಗುತ್ತು ಅವರನ್ನು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರುಗಳನ್ನಾಗಿ ನೇಮಕ ಮಾಡಲಾಯಿತು.ಈ ಸಂದರ್ಭದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆಯ ದೈವಜ್ಞರು,...
ಸುಬ್ರಹ್ಮಣ್ಯ ಜುಲೈ 13 : ರಾಜ್ಯ ಸರಕಾರದ ಮಾಜಿ ಸಚಿವ ಎಚ್.ಡಿ ರೇವಣ್ಣ ಇಂದು ಸೋಮವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪಂಚಾಮೃತ ಮಹಾಭಿಷೇಕದಲ್ಲಿ ಭಾಗಿಯಾಗಿ, ಮಹಾಮಂಗಳಾರತಿ ವೀಕ್ಷಿಸಿ ತೀರ್ಥ ಪ್ರಸಾದ ಸ್ವೀಕರಿಸಿ, ನಂತರ ಭೋಜನ ಪ್ರಸಾದ ಸ್ವೀಕರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ರೇವಣ್ಣ...
ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಬಂದ ಅನುದಾನ ರೂ.3 ಲಕ್ಷ ರೂಪಾಯಿ ವಿತರಣೆಯನ್ನು ಯೋಜನಾಧಿಕಾರಿಗಳು ಮಾಡಿದರು. “ಸುಳ್ಯ ತಾಲ್ಲೂಕು ಅತೀ ಹೆಚ್ಚು ದೇವಸ್ಥಾನ ದೈವಸ್ಥಾನ ಹೊಂದಿರುವ ತಾಲೂಕಾಗಿದೆ. ಹಾಗೆಯೇ ಸುಳ್ಯ ರಾಜ್ಯದಲ್ಲೇ ಧರ್ಮಸ್ಥಳದಿಂದ ಅತೀ ಹೆಚ್ಚು ಅನುದಾನ ಪಡೆದ ತಾಲೂಕಾಗಿದೆ. ಧರ್ಮಸ್ಥಳ ದಿಂದ ತಾಲೂಕಿನ 118 ದೈವ ದೇವಸ್ಥಾನ ಭಜನಾ ಮಂದಿರ ಗಳಿಗೆ 7.5 ಕೋಟಿ...
ಸುಬ್ರಹ್ಮಣ್ಯ ಜುಲೈ 11 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗ ಪ್ರತಿಷ್ಠ ಮಂಟಪದಲ್ಲಿ ಶೇಖರಣೆಯಾದ ನಾಗ ಶಿಲಾ ಕಲ್ಲುಗಳನ್ನು ಶನಿವಾರ ಕುಮಾರಧಾರ ನದಿಯಲ್ಲಿ ಜಲ ಸ್ತಂಭಗೊಳಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಳದ ಅರ್ಚಕರು, ಸರ್ಪಸಂಸ್ಕಾರ ವಿಭಾಗದ ಅರ್ಚಕರು ಹಾಗೂ ಕ್ರಿಯಾಕರ್ತರು ನಾಗ ಪ್ರತಿಷ್ಠಾ ಶಿಲಾ ಕಲ್ಲುಗಳನ್ನು ಪ್ರತಿಷ್ಟಾ ಮಂಟಪದಿಂದ ತೆರವುಗೊಳಿಸಿ ಕುಮಾರಧಾರ ನದಿಗೆ ಕೊಂಡೊಯ್ಯಲು ಜುಲೈ...
ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನಾಚರಣೆಯ ಅಂಗವಾಗಿ ವರ್ಷಂಪ್ರತಿ ಸುಳ್ಯದಲ್ಲಿ ಆಯೋಜಿಸಲ್ಪಡುವ 13ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವದ ಪೂರ್ವ ಭಾವಿ ಸಭೆಯು ಜು.08 ರಂದು ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಿತು. ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ರಾದ ಶ್ರೀಕಾಂತ್ ಗೋಳ್ವಾಲ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ಸವ ಸಮಿತಿಯ...
ಸುಳ್ಯ : ಗಾಂಧಿನಗರ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಡೆದ ಶ್ರೀ ದೈವಗಳ ಪುನರ್ಪ್ರತಿಷ್ಠಾ ಕಲಶೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಿದ ದಾನಿಗಳು ಹಾಗೂ ಭಗವದ್ಭಕ್ತರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಜೂ. 28ರಂದು ದೇವಸ್ಥಾನದಲ್ಲಿ ಅಭಿನಂದನಾ ಸಭೆ ನಡೆಯಿತು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಜೀರ್ಣೋದ್ಧಾರ ಕಾರ್ಯ ನಡೆದು ಬಂದ ಹಾದಿ...
ಸುಬ್ರಹ್ಮಣ್ಯ ಜೂನ್ 27 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೂ.27 ಶನಿವಾರದಂದು 40 ಸಾವಿರಕ್ಕಿಂತಲೂ ಅಧಿಕ ಭಕ್ತಾಧಿಗಳ ಆಗಮನವಾಗಿದೆ. ಶುಕ್ರವಾರ ರಂಜಾನ್ ರಜೆ, ಶನಿವಾರ ನಾಲ್ಕನೇ ಶನಿವಾರ ರಜೆ ಹಾಗೂ ಆದಿತ್ಯವಾರ ರಜೆಯಾಗಿ ಸರಣಿ ರಜೆಗಳು ಬಂದ ಕಾರಣ ಸರಕಾರಿ ಕಚೇರಿಗಳು ಇನ್ನಿತರ ಸಂಘ-ಸಂಸ್ಥೆಗಳ...
Loading posts...
All posts loaded
No more posts
