ಮಂಗಳೂರು ವಿಶ್ವವಿದ್ಯಾಲಯ ಮಹಿಳಾ ಕಬಡ್ಡಿಯಲ್ಲಿ ಎನ್‌ಎಂಸಿ ದ್ವಿತೀಯ ಸ್ಥಾನ | ವೀಕ್ಷಾಳಿಗೆ ಅತ್ಯುತ್ತಮ ಆಲ್‌ರೌಂಡ್ ಆಟಗಾರ್ತಿ ಪ್ರಶಸ್ತಿ

ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಮಹಿಳಾ ಕಬಡ್ಡಿ ತಂಡವು ಪ್ರಿ-ಚಾಂಪಿಯನ್‌ಶಿಪ್ ಹಂತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

. . . . . . . . .

ಧರ್ಮಸ್ಥಳದ ಎಸ್‌ಡಿಎಂ ಕಾಲೇಜು, ಉಜಿರೆ ಇಲ್ಲಿ ಸೆಪ್ಟೆಂಬರ್ 29ರಿಂದ 30ರವರೆಗೆ ನಡೆದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಎನ್‌ಎಂಸಿ ಮಹಿಳಾ ತಂಡವು ಉತ್ತಮ ಪ್ರದರ್ಶನ ನೀಡಿ ಪ್ರಿ-ಚಾಂಪಿಯನ್‌ಶಿಪ್ ಹಂತದ ಫೈನಲ್‌ಗೆ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು.
ತಂಡದ ಆಟಗಾರ್ತಿ ಹಾಗೂ ಪ್ರಥಮ ವರ್ಷದ ಬಿ.ಎಸ್‌ಸಿ ವಿದ್ಯಾರ್ಥಿನಿ ಕು. ವೀಕ್ಷಾ ಅವರು ಅತ್ಯುತ್ತಮ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದು ಪ್ರಶಸ್ತಿ ಪಡೆದುಕೊಂಡರು.

. . . . . . .

ತಂಡದ ಸಾಧನೆಗೆ ನೆಹರು ಮೆಮೋರಿಯಲ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕ್ಯಾಪ್ಟನ್. ಸೀತಾರಾಮ ಎಂ.ಡಿ. ಇವರ ಮಾರ್ಗದರ್ಶನದಲ್ಲಿ ತಂಡವು ಈ ಸಾಧನೆ ಮಾಡಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading