- Wednesday
- September 16th, 2026
ತೊಡಿಕಾನ ಭಾಗದ ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಸ್ಪಂದಿಸಿದ್ದು ಸೆ.16 ರಂದು ಬೆಳಗ್ಗೆ 7.30ಕ್ಕೆ ಸುಳ್ಯದಿಂದ ಬಸ್ ಗೆ ಚಾಲನೆ ನೀಡಲಾಗುವುದು, ತೊಡಿಕಾನದಲ್ಲಿ 8 ಗಂಟೆಗೆ ಸ್ವಾಗತ ಕಾರ್ಯಕ್ರಮ ನಡೆಯಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಹಾಗೂ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದ್ದಾರೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ವತಿಯಿಂದ ಯುವಕ ಮಂಡಲ ಕಳಂಜ ಕೋಟೆಮುಂಡುಗಾರು ಬಳಿ 35ನೇ ವರ್ಷದ ಶ್ರೀ ಗಣೇಶೋತ್ಸವ ಸೆ.14 ರಂದು ನಡೆಯಿತು. ಸಂಜೆ ವೈಭವದ ಶೋಭಾಯಾತ್ರೆ ನಡೆದು ಮೂರ್ತಿ ಜಲಸ್ತಂಭನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಸೆ.14 ರಂದು ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ ನಡೆದ ಬಳಿಕ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇದರ...
ಸುಳ್ಯ : ಸುಳ್ಯ ತಾಲೂಕು ಮಿಲಾದ್ ಸಮಿತಿಯವರು ವಿನಯ್ ಕುಮಾರ್ ಕಂದಡ್ಕ ಅವರ ಹೇಳಿಕೆಯ ಕುರಿತು ನಡೆಸಿದ ಪತ್ರಿಕಾಗೋಷ್ಠಿಯನ್ನು ಗಮನಿಸಿದಾಗ ಗಲಿಬಿಲಿಯಾಯಿತು. ಕಂದಡ್ಕ ಅವರು ನೀಡಿರುವ ಪತ್ರಿಕಾ ಹೇಳಿಕೆಯನ್ನು ಮೂರು–ನಾಲ್ಕು ಬಾರಿ ಓದಿದರೂ, ಅದರಲ್ಲಿ ಅಸಹಜವಾದ ಅಥವಾ ಕೋಮು ಸೌಹಾರ್ದಕ್ಕೆ ಧಕ್ಕೆ ತಂದು ಅಶಾಂತಿ ಉಂಟುಮಾಡುವಂತಹ ಯಾವುದೇ ಅಂಶ ಕಂಡುಬಂದಿಲ್ಲ ಎಂದು ಬಿಜೆಪಿ ಸುಳ್ಯ ಮಂಡಲದ...
ಸುಳ್ಯ : ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿರುವ ಸುಲಭ ಕಂತು ಯೋಜನೆಯ ಎರಡನೇ ಆವೃತ್ತಿಯ ಬಂಪರ್ ಬಹುಮಾನ ಯೋಜನೆಯ ಮೊದಲನೇ ಡ್ರಾ ಸೆ.15ರಂದು ಸುಳ್ಯದ ಅಂಬೆಟಡ್ಕದಲ್ಲಿರುವ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ನಡೆಯಿತು. ಡ್ರಾದಲ್ಲಿ ಕಾರ್ಡ್ ಸಂಖ್ಯೆ 5570ರ ಚೇತನ್ ಅರಂತೋಡು ಅವರು ₹1 ಲಕ್ಷ ಮೌಲ್ಯದ ಗೃಹೋಪಯೋಗಿ ಇಲೆಕ್ಟ್ರಾನಿಕ್ ಸಾಮಗ್ರಿಗಳ ಬಹುಮಾನವನ್ನು...
ಮಂಗಳೂರು ಅಡಿಕೆ ಸಹಕಾರಿ ಸಂಘ(ಮಾಸ್) ಅಧ್ಯಕ್ಷರಾದ ಸವಣೂರು ಸೀತಾರಾಮ ರೈ ಯವರು ಕರ್ನಾಟಕ ಅರೋಗ್ಯ, ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯು.ಟಿ. ಖಾದರ್ ರವರನ್ನು ಭೇಟಿಯಾಗಿ 18ನೇ ತಾರೀಕಿಗೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರ ಸಹಾಯಕ್ಕೆ ಸರ್ಕಾರ ವಿಶೇಷ ಆರ್ಥಿಕ...
ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಸುಳ್ಯದ ಪ್ರತಿಷ್ಠಿತ ಮೆ| ಮುಳಿಯ ಕೃಷ್ಣ ಭಟ್ ಜ್ಯುವೆಲ್ಲರ್ಸ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ವಿವಿಧ ವಿನ್ಯಾಸಗಳ ಚಿನ್ನಾಭರಣ ಹಾಗೂ ಇತರ ಆಭರಣಗಳನ್ನು ಖರೀದಿಸಿದರು. ಹಬ್ಬದ ಸಂಭ್ರಮದ ನಡುವೆ ತಮ್ಮ...
ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.07 ರಿಂದ ನಿರಂತರವಾಗಿ ಭಕ್ತಾಧಿಗಳಿಂದ ನಡೆಯುತ್ತಿರುವ ಶಿವ ಸ್ಮರಣೆ ಕಾರ್ಯಕ್ರಮ ಸೆ.18 ರಂದು 12 ನೇ ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಂದು ದೇವರಿಗೆ ಶತರುದ್ರಾಭಿಷೇಕ ಸೇವೆ ನಡೆಯಲಿದೆ. ಸೀಮೆಯ ಭಕ್ತರ ಒಳಿತಿಗಾಗಿ ಹಾಗೂ ಸಾನಿಧ್ಯ ವೃದ್ಧಿಗಾಗಿ ಹಾಗೂ ಸಾವಿರ ಸೀಮೆಯ ಭಕ್ತರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಸತತ 12 ದಿನಗಳ ಕಾಲ...
ಸೆ.11ರಂದು ಸುಳ್ಯ ನಗರದಲ್ಲಿ ತಾಲೂಕು ಮೀಲಾದ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಈದ್ ಮಿಲಾದ್ ಮೆರವಣಿಗೆ ಕುರಿತು ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕಂದಡ ನೀಡಿರುವ ಹೇಳಿಕೆಯನ್ನು ತಾಲೂಕು ಮೀಲಾದ್ ಸಮಿತಿ ತೀವ್ರವಾಗಿ ಖಂಡಿಸಿದೆ ಎಂದು ಮಿಲಾದ್ ಸಮಿತಿ ಪದಾಧಿಕಾರಿಗಳು ಹೇಳಿದರು. ಸೆ.15ರಂದು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು...
ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧೀನ ದಲ್ಲಿರುವ ಗ್ರೀನ್ ವ್ಯೂ ಮೋಡೆಲ್ ಅರೇಬಿಕ್ ಸ್ಕೂಲ್ ನಲ್ಲಿ ಪ್ರವಾದಿ ಮಹಮ್ಮದ್ ಮುಸ್ತಫ( ಸ. ಅ.) ರವರ ಜನ್ಮ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಗಳಿಗೆ ಸಾಂಸ್ಕೃತಿಕ ಕಲಾ ಸಾಹಿತ್ಯ ಸ್ಪರ್ಧೆ ಮತ್ತು ಪ್ರದರ್ಶನ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ಜರಗಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷತೆಯನ್ನು ಹಾಜಿ...
ಕಲ್ಲುಗುಂಡಿ: ಸುನ್ನಿ ಸೆಂಟರ್‌ನಲ್ಲಿ ಸೆಪ್ಟೆಂಬರ್ 13 ರಂದು ಎಸ್.ಎಸ್.ಎಫ್., ಎಸ್.ವೈ.ಎಸ್. ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯೂನಿಟ್ ಜಂಟಿ ಆಶ್ರಯದಲ್ಲಿ ಮೌಲಿದ್ ಮಜ್ಲಿಸ್, ಮಹ್ಳರತುಲ್ ಬದ್ರಿಯ್ಯ ಹಾಗೂ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮವು ಶ್ರದ್ಧಾ-ಭಕ್ತಿಗಳೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಜಲೀಲ್ ಸಖಾಫಿ ಕೊಂಡಂಗೇರಿ ಅವರು ಮಾತನಾಡಿ, "ಪ್ರವಾದಿ ಪ್ರೇಮ ಮತ್ತು ಧಾರ್ಮಿಕ ಮೌಲ್ಯಗಳನ್ನು...
Loading posts...
All posts loaded
No more posts
