ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಸುಳ್ಯದ ಖ್ಯಾತ ಕವಿ, ಸಾಹಿತಿ ಸುಬ್ರಾಯ ಚೊಕ್ಕಾಡಿಯವರಿಗೆ ಸನ್ಮಾನ

ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ "ಮುನಿಸು ತರವೇ ಮುಗುದೆ" ಖ್ಯಾತಿಯ ಸುಳ್ಯದ ಖ್ಯಾತ ಕವಿ, ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ಸುಬ್ರಾಯ ಚೊಕ್ಕಾಡಿಯವರಿಗೆ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮವು ಸೆ.11ರಂದು ರಂದು ನಡೆಯಿತು. ಪ್ರಜಾಧ್ವನಿ ಕರ್ನಾಟಕ ತಂಡವು ಶ್ರೀಯುತ ಚೊಕ್ಕಾಡಿಯವರ ಸ್ವಗೃಹಕ್ಕೆ ಭೇಟಿ ನೀಡಿ ಅವರನ್ನು ಹಾಗೂ ಅವರ ಧರ್ಮಪತ್ನಿಯವರನ್ನು ಸನ್ಮಾನಿಸಿತು. ಪ್ರಜಾಧ್ವನಿ...

ದ್ವಾದಶ ರಾಶಿಗಳ ದಿನಭವಿಷ್ಯ – ದಿನಾಂಕ :12-09-2026 ಶನಿವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ... ಮೊ : 9591969197 *01,🐏ಮೇಷರಾಶಿ🐏*📃,ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ...
Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ “ನಾಟಕ ತರಬೇತಿ ಶಿಬಿರ”ದ ಉದ್ಘಾಟನಾ ಸಮಾರಂಭ ; ಶಿಬಿರವನ್ನು ಉದ್ಘಾಟಿಸಿದ ಖ್ಯಾತ ರಂಗ ನಿರ್ದೇಶಕ ಹಾಗೂ ತರಬೇತುದಾರರಾದ ಮಿಥುನ್ ಕುಮಾರ್ ಸೋನ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಕುಸುಮ ಸಾರಂಗ ರಂಗಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸಾಕೋಶ ಇವುಗಳ ಸಹಭಾಗಿತ್ವದಲ್ಲಿ ಸೆ.11ರಂದು ಪ್ರಸಕ್ತ ಸಾಲಿನ ನಾಟಕ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಖ್ಯಾತ ರಂಗ ನಿರ್ದೇಶಕ ಹಾಗೂ ತರಬೇತುದಾರರಾದ ಮಿಥುನ್ ಕುಮಾರ್ ಸೋನ ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿ ಜೀವನದಲ್ಲಿ ರಂಗಭೂಮಿ ಹಾಗೂ ನಾಟಕದ ಮಹತ್ವ,...

ಆಡ್ತಲೆ ಸೆ.13 : ಸ್ಪಂದನ ಗೆಳೆಯರ ಬಳಗದ ವತಿಯಿಂದ 8ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ; ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ವೈವಿಧ್ಯಮಯ ಸ್ಪರ್ಧೆಗಳು ಮತ್ತು ಸನ್ಮಾನ ಕಾರ್ಯಕ್ರಮ

ಸ್ಪಂದನ ಗೆಳೆಯರ ಬಳಗ(ರಿ.) ಅಡ್ತಲೆ ಇವರ ವತಿಯಿಂದ 8ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಅಡ್ತಲೆ ಶಾಲಾ ವಠಾರದಲ್ಲಿ ಸೆಪ್ಟೆಂಬರ್ 13ನೇ ಆದಿತ್ಯವಾರ ನಡೆಯಲಿದೆ. ಬೆಳಿಗ್ಗೆ ಕಾರ್ಯಕ್ರಮ ಉದ್ಘಾಟನೆಗೊಂಡು ಪುಟಾಣಿಗಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಿರಿಯ ನಾಗರಿಕರಿಗೆ ಮತ್ತು ದಂಪತಿಗಳಿಗೆ ವೈವಿಧ್ಯಮಯ ಸ್ಪರ್ಧೆಗಳು ನಡೆಯಲಿವೆ. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ...

ಎಣ್ಮೂರು ಅಲೆಂಗಾರ ಉಳ್ಳಾಕುಲು ದೈವಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ₹1 ಲಕ್ಷ ನೆರವು

ನಿಂತಿಕಲ್ಲು : ಸುಳ್ಯ ತಾಲೂಕಿನ ನಿಂತಿಕಲ್ಲು ವಲಯದ ಎಣ್ಮೂರು ಅಲೆಂಗಾರ ಶ್ರೀ ಉಳ್ಳಾಕುಲು, ಚಾಮುಂಡಿ ದೈವ ಹಾಗೂ ಪರಿವಾರ ದೈವಗಳ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ರೂ.1 ಲಕ್ಷ ಮೊತ್ತದ ಡಿ.ಡಿ.ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ಅವರು ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು. ಈ...

ನಿಂತಿಕಲ್ಲು : ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ವ್ಹೀಲ್ ಚಯರ್ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಕೊಮೋಡೋ ವೀಲ್ ಚೇರನ್ನು ನಿಂತಕಲ್ಲು ವಲಯದ ಎಣ್ಮೂರಿನ ಬಾಬು ರವರಿಗೆ ತಾಲೂಕು ಯೋಜನಾಧಿಕಾರಿ ಮಾಧವ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಸುಧಾಕರ ರೈ, ಜನಜಾಗೃತಿ ವೇದಿಕೆ ಸದಸ್ಯರಾದ ಉಮೇಶ್ ರೈ ಹಾಗೂ ವಲಯ ಅಧ್ಯಕ್ಷರಾದ ವಸಂತ ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು.

ಪಿಯುಸಿ/ಪದವಿ ಬಳಿಕ ವೃತ್ತಿ ಬದುಕು ರೂಪಿಸಲು ಇಲ್ಲಿದೆ ಅವಕಾಶ | ದಶಮಾನೋತ್ಸವ ಸಂಭ್ರಮದಲ್ಲಿದೆ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ

ಶಿಕ್ಷಕ ವೃತ್ತಿ ಎಂದರೆ ಗೌರವದ ಕೆಲಸ. ಒಂದು ವರ್ಷದ ತರಬೇತಿ ಪಡೆದು ಶಿಕ್ಷಕಿಯರಾಗಿ ವೃತ್ತಿ ಬಂದು ರೂಪಿಸಿಕೊಳ್ಳಲು ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಕಳೆದ 9 ವರ್ಷಗಳಿಂದ ತರಬೇತಿ ನೀಡುತ್ತಿದೆ. ಇಲ್ಲಿ ತರಬೇತು ಪಡೆದ ನೂರಾರು ಮಂದಿ ಶಿಕ್ಷಕಿಯರಾಗಿ ವೃತ್ತಿ ಬದುಕು ರೂಪಿಸಿಕೊಡಿದ್ದಾರೆ. ಪ್ರತಿ ವರ್ಷವೂ ಶೇ. 100 ಫಲಿತಾಂಶ ಪಡೆಯುವುದರೊಂದಿಗೆ ಶೇ....

ಮಂಡೆಕೋಲು ನವೋದಯ ಗುಂಪಿನ ಒಕ್ಕೂಟ ಸಭೆ ಮತ್ತು ಚೈತನ್ಯ ವಿಮಾ ಚೆಕ್ ವಿತರಣೆ

ಸೆ.11 ರಂದು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನವೋದಯ ಒಕ್ಕೂಟ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೊಲ್ಲೂರಮ್ಮ ನವೋದಯ ಗುಂಪಿನ ಸದಸ್ಯರಾದ ಮೋಹನ್ ರವರು ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ಬೊಳುಗಲ್ಲು ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್, ನವೋದಯ ಪ್ರೇರಕಿ ಶ್ರೀಮತಿ ಚಂಚಲಾಕ್ಷಿ, ಒಕ್ಕೂಟ ಕಾರ್ಯದರ್ಶಿ ಪುಷ್ಪಾವತಿ ಎಂ,...

ಅರಂತೋಡು : ಸೆ.14ರಂದು 36ನೇ ವರ್ಷದ ಗಣೇಶೋತ್ಸವ

ಅರಂತೋಡು : ಶ್ರೀ ದುರ್ಗಾಮಾತಾ ಭಜನಾ ಮಂದಿರ ಹಾಗೂ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ(ರಿ.) ವತಿಯಿಂದ 36ನೇ ವರ್ಷದ ಗಣೇಶೋತ್ಸವ ಸೆ.14ರಂದು ಸೋಮವಾರ ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಬೆಳಿಗ್ಗೆ 5:00 ಗಂಟೆಗೆ ಗಣಪತಿ ಹೋಮ, 7:00 ಗಂಟೆಗೆ ಗಣಪತಿ ಮೂರ್ತಿ ಪ್ರತಿಷ್ಠೆ, 7:30ರಿಂದ 8:30ರವರೆಗೆ ಭಜನೆ ಹಾಗೂ ಮಧ್ಯಾಹ್ನ 12:00ಗಂಟೆಗೆ...

ಸೆ.13 ರಂದು ಕಂದ್ರಪ್ಪಾಡಿ & ಆಲೆಟ್ಟಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಡಡ ನಿರ್ಮಾಣಕ್ಕೆ ಸಂಸದರಿಂದ ಗುದ್ದಲಿಪೂಜೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಯುಷ್ಮಾನ್ ಭಾರತ ಯೋಜನೆಯಡಿ, ರಾಜ್ಯ ಸರಕಾರದ ಸಹಯೋಗದೊಂದಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 23 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ವಿವಿಧ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ.ಇದರ ಭಾಗವಾಗಿ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಹಾಗೂ ಆಲೆಟ್ಟಿ...
Loading posts...

All posts loaded

No more posts

error: Content is protected !!