- Thursday
- October 15th, 2026
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ರಂಗಮನೆಯ ಬೆಳ್ಳಿ ವರ್ಷದ ಪ್ರಯುಕ್ತ , ಅಕ್ಟೋಬರ್ 31 ಮತ್ತು ನವಂಬರ್ 01 ರಂದು ಸಂಜೆ 6.00 ರಿಂದ ರಾತ್ರಿ 8.30 ರ ವರೆಗೆ ಶಾಸ್ತ್ರೀಯ ಸಂಗೀತೋತ್ಸವವನ್ನು ಏರ್ಪಡಿಸಲಾಗಿದೆ. ಅ.31 ರಂದು ಶನಿವಾರ ಸಂಗೀತೋತ್ಸವವಕ್ಕೆ ಪ್ರಗತಿಪರ ಕೃಷಿಕರಾದ ಆನೆಕಾರ ಗಣಪಯ್ಯನವರು ದೀಪಪ್ರಜ್ವಲನ ಮಾಡಿ ಚಾಲನೆ ನೀಡಲಿದ್ದಾರೆ....
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಶಿವಪ್ರಸಾದ್ ಜಿ.ಎಸ್. ರವರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ವರದಿಯಾಗಿದೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಜ್ವರದಿಂದ ಬಳಲುತ್ತಿದ್ದ ಅವರಿಗೆ ಮುಂಜಾನೆ 2ರ ಸುಮಾರಿಗೆ ಎದೆನೋವು ಕಾಣಿಸಿತೆಂದು, ಮನೆಯವರು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಸುಳ್ಯ ಉಬರಡ್ಕ ಹುಳಿಯಡ್ಕ ನಿವಾಸಿಯಾಗಿರುವ ಶಿವರಾಮರವರ ಪುತ್ರ ಶಿವ...
