ದೇವಚಳ್ಳ ಗ್ರಾಮದಲ್ಲಿ ₹92 ಲಕ್ಷದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

ದೇವಚಳ್ಳ: ದೇವಚಳ್ಳ ಗ್ರಾಮದಲ್ಲಿ ಸುಮಾರು ₹92 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಗುದ್ದಲಿಪೂಜೆ ನೆರವೇರಿಸಿದರು.

. . . . . . . . .

ಕಾಮಗಾರಿಗಳ ವಿವರ:

. . . . . . .
  • ಮುಳಿಯಡ್ಕ–ವಾಲ್ತಾಜೆ ರಸ್ತೆ ಅಭಿವೃದ್ಧಿ – ₹5.50 ಲಕ್ಷ
  • ಹುರುಳಿಯಡ್ಕ–ಮಣಿಯೂರು–ಅಂಬೆಕಲ್ಲು ರಸ್ತೆ – ₹10 ಲಕ್ಷ
  • ಮಣಿಯೂರು–ಪರ್ಲೆಡಿ ರಸ್ತೆ – ₹10 ಲಕ್ಷ
  • ಅಡ್ಕನಪಾರೆ ಎಸ್‌ಸಿ ಕಾಲೋನಿ ರಸ್ತೆ – ₹10 ಲಕ್ಷ
  • ಎಲಿಮಲೆ–ಕಲ್ಲಪಣೆ ರಸ್ತೆ – ₹5.50 ಲಕ್ಷ
  • ಕುಚ್ಚಾಲ–ಮೆದು ರಸ್ತೆ – ₹5.50 ಲಕ್ಷ
  • ಅಚ್ರಾಪ್ಪಾಡಿ ರಸ್ತೆ – ₹5.50 ಲಕ್ಷ
  • ಕರಂಗಲ್ಲು ಎಂಬಲ್ಲಿ ರಸ್ತೆ ತಡೆಗೋಡೆ ನಿರ್ಮಾಣ – NDRF ಮತ್ತು SDRF ನಿಧಿಯಿಂದ ₹10 ಲಕ್ಷ
  • ಕಂದ್ರಪ್ಪಾಡಿ–ವಾಲ್ತಾಜೆ ರಸ್ತೆ ತಡೆಗೋಡೆ – ₹10 ಲಕ್ಷ ಹಾಗೂ ಹೆಚ್ಚುವರಿಯಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹5 ಲಕ್ಷ, ಒಟ್ಟು ₹15 ಲಕ್ಷ
  • ಮುಳಿಯಡ್ಕ ಎಸ್‌ಸಿ ಕಾಲೋನಿ ರಸ್ತೆ ಅಭಿವೃದ್ಧಿ – ₹15 ಲಕ್ಷ

ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಕ್ಯಾಂಪ್ಕೋ ನಿರ್ದೇಶಕ ಎ.ವಿ. ತೀರ್ಥರಾಮ, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ ಕಂಜಿಪಿಲಿ, ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಶಕ್ತಿಕೇಂದ್ರ ಪ್ರಮುಖ ದಿವಾಕರ ಮುಂಡೋಡಿ, ಬೂತ್ ಸಮಿತಿ ಪ್ರಮುಖರು, ಪಕ್ಷದ ಹಿರಿಯ ಕಾರ್ಯಕರ್ತರು, ಪ್ರಮುಖರು ಹಾಗೂ ವಿವಿಧ ಕಾಮಗಾರಿಗಳ ಫಲಾನುಭವಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading