ಕೊಚ್ಚಿಯಲ್ಲಿ ರಸ್ತೆ ಅಪಘಾತ: ಕನಕಮಜಲಿನ ಯುವಕ ಮೃತ್ಯು

ಕನಕಮಜಲು: ಕೇರಳದ ಕೊಚ್ಚಿಯಲ್ಲಿ ಅ. 10ರಂದು ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಕಮಜಲು ಗ್ರಾಮದ ಯುವಕ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಕನಕಮಜಲು ಗ್ರಾಮದ ಇಬ್ರಾಹಿಂ ಪಿ.ಎ. ಅವರ ಪುತ್ರ ಇಯಾಸ್ ಎಂದು ಗುರುತಿಸಲಾಗಿದೆ. ಇಯಾಸ್ ಅವರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
error: Content is protected !!