- Saturday
- October 24th, 2026
ಅ.16ರಿಂದ ಅದ್ದೂರಿಯಾಗಿ ಆರಂಭಗೊಂಡ ಸುಳ್ಯ ದಸರಾ ಇಂದು (ಅ.24) ಸುಳ್ಯ ನಗರದಲ್ಲಿ ಶ್ರೀ ಶಾರದಾಂಬ ದೇವಿಯ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ. ಆಕರ್ಷಣೀಯ ಟ್ಯಾಬ್ಲೊ ಸೇರಿದಂತೆ ಚಂಡೆ ವಾದನ, ವಾಯಲಿನ್ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ನೃತ್ಯಗಳು ಈ ಬಾರಿಯ ದಸರಾ ಸಂಭ್ರಮಕ್ಕೆ ಮೆರುಗು ನೀಡಲಿದೆ.
ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ವರ್ಷದ ಪಟ್ಟಾಭಿಷೇಕದ ಪ್ರಯುಕ್ತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸುಳ್ಯ ವಲಯದ ವತಿಯಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅವರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹರಿಕೃಷ್ಣ ವಲಂಬಾಡಿತ್ತಾಯರವರ ಅರ್ಚಕತ್ವದಲ್ಲಿ ದೇವರಿಗೆ...
