ಗ್ರಂಥಾಲಯ ವಿಜ್ಞಾನ ಸರ್ಟಿಫಿಕೇಟ್ ಕೋರ್ಸ್ ಫಲಿತಾಂಶ ಪ್ರಕಟ : ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಹರಿಹರ ಪಳ್ಳತ್ತಡ್ಕ ಹಾಗೂ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು

ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರಾದ ಶ್ರೀಮತಿ ಚಂದ್ರಿಕಾ.ಕೆ(435/500) ಹಾಗೂ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರಾದ ಶ್ರೀಮತಿ ಅಭಿಲಾಷಾ.ಎಸ್.ಎಂ(424/500) ಇವರು ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಶ್ವವಿದ್ಯಾಲಯ ಕೌಶಲ್ಯಭವನ ನಾಗಾವಿ, ಗದಗ ಇಲ್ಲಿ ನಡೆದ ಆರು ತಿಂಗಳ ಸರ್ಟಿಫಿಕೇಟ್...

ಬೆಳೆ ವಿಮೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಮಹಮ್ಮದ್ ಅಲಿ ಆರೋಪ | ಕಡಿಮೆ ಮಳೆಯಿಂದ ಪರಿಹಾರ ಮೊತ್ತ ಇಳಿಕೆ; ಟರ್ಮ್ ಶೀಟ್ ಬದಲಾವಣೆ ಕೇಂದ್ರದ ಮಾರ್ಗಸೂಚಿಯಂತೆ ನಡೆದಿದೆ

ಬೆಳೆ ವಿಮೆ ಪರಿಹಾರ ಮೊತ್ತ ಕಡಿಮೆಯಾಗಿರುವ ವಿಚಾರದಲ್ಲಿ ಬಿಜೆಪಿ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುವ ಮೂಲಕ ರೈತರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್. ಮಹಮ್ಮದ್ ಅಲಿ ಆರೋಪಿಸಿದರು. ಅ. 19ರಂದು ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆ ವಿಮೆ ಯೋಜನೆಯಲ್ಲಿ...
Ad Widget

ಬೆಳ್ಳಾರೆಯಲ್ಲಿ ವಿವಿಧ ಸೇವಾ ಕಾರ್ಯಗಳೊಂದಿಗೆ ನವರಂಗ್ ಸಂಪನ್ನ ; “ಸೇವೆಯ ಮೂಲಕ ದೇವರನ್ನು ಕಾಣುವುದು ಸುಂದರ ಅವಕಾಶ” : ಮೌನೇಶ್ ವಿಶ್ವಕರ್ಮ

"ಹಬ್ಬದ ಸಂದರ್ಭದಲ್ಲಿ ಸಮಾಜ ಸೇವೆಯ ಮೂಲಕ ಜನರಲ್ಲಿ ದೇವರನ್ನು ಕಾಣುವುದು ಸುಂದರ ಅವಕಾಶ. ನಮ್ಮ ಸೇವೆಯಿಂದ ಬದಲಾವಣೆಯ ಜೊತೆಗೆ ಶಾಶ್ವತ ಪರಿಹಾರವೂ ದೊರೆಯುವಂತಗಬೇಕು" ಎಂದು ರೋಟರಿ ಜಿಲ್ಲಾ ನಮ್ಮ ಹಬ್ಬ ನಮ್ಮ ಸೇವೆ ವಿಭಾಗದ ಉಪಾಧ್ಯಕ್ಷ ಮೌನೇಶ್ ವಿಶ್ವಕರ್ಮ ಹೇಳಿದರು. ಅವರು ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಬೆಳ್ಳಾರೆ ಹಾಗೂ ಜ್ಞಾನದೀಪ...

ಗುತ್ತಿಗಾರು : ಚಣಿಲ ಹೋಮಿಯೋಪಥಿ ಕ್ಲಿನಿಕ್ ಶುಭಾರಂಭ

ಕಳೆದ ಐದು ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಡಾ. ಆದಿತ್ಯ ಭಟ್ ಅವರ ನಡೆಸುತ್ತಿದ್ದ ಕ್ಲಿನಿಕ್ ಸ್ಥಳಾಂತರಗೊಂಡು ಗುತ್ತಿಗಾರಿನ ಎಸ್.ಎಂ.ಎಸ್.ಜಿ. ಕಾಂಪ್ಲೆಕ್ಸ್ ನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್ ಉದ್ಘಾಟನೆಗೊಂಡಿತು. ಕ್ಲಿನಿಕ್‌ನ ಉದ್ಘಾಟನೆಯನ್ನು ವಳಲಂಬೆ ದೇವಸ್ಥಾನದ ಅರ್ಚಕರಾದ ಮಹಾಬಲೇಶ್ವರ ಭಟ್ ನೆರವೇರಿಸಿದರು. ಬೆಳಿಗ್ಗೆ ಗಣಹೋಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಸುಶೀಲಾ ಚಂದ್ರಶೇಖರ, ಚಂದ್ರಶೇಖರ ಭಟ್ ಚಣಿಲ, ಶಿವರಾಮ್ ಕರುವಜೆ,...

ಯುವಕವಿ ಪತ್ರಕರ್ತ ಎಂ.ಎ ಮುಸ್ತಫಾ ಬೆಳ್ಳಾರೆಯವರಿಗೆ “ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ” ಪ್ರಧಾನ

ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನ ಅ.18ರಂದು ಕಾಸರಗೋಡು ನಗರದ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಜರುಗಿದ್ದು ಈ ಸಂದರ್ಭದಲ್ಲಿ ಖ್ಯಾತ ಯುವಕವಿ, ಅಮರ ಸುಳ್ಯ ಸುದ್ದಿ ಕನ್ನಡ ವಾರಪತ್ರಿಕೆಯ ವರದಿಗಾರ ಎಂ.ಎ. ಮುಸ್ತಫಾ ಬೆಳ್ಳಾರೆಯವರಿಗೆ "ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ-2026" ನ್ನು ಪ್ರಧಾನ ಮಾಡಲಾಯಿತು. ವೇದಿಕೆಯಲ್ಲಿ...

ಸುಳ್ಯ: ಬಾಲಕನಿಗೆ ವಿದ್ಯುತ್ ಶಾಕ್ – ಅದೃಷ್ಟವಶಾತ್ ಅಪಾಯದಿಂದ ಪಾರು

ಸುಳ್ಯ: ಇಲ್ಲಿನ ಅಂಬಟೆಡ್ಕದಲ್ಲಿರುವ ಬೆಳ್ಳಿಪ್ಪಾಡಿ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯ ಸಮೀಪ ಹಾದುಹೋಗಿರುವ ಹೈಟೆನ್ಷನ್ (ಎಚ್‌ಟಿ) ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಪಟ್ಟಿಯೊಂದು ತಾಗಿದ ಪರಿಣಾಮ ಬಾಲಕನೋರ್ವನಿಗೆ ವಿದ್ಯುತ್ ಶಾಕ್ ತಗುಲಿ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಗದಗ ಮೂಲದ ಅಶೋಕ್ ಅವರ ಪುತ್ರ ಧನಂಜಯ (10) ವಿದ್ಯುತ್ ಶಾಕ್‌ಗೆ ಒಳಗಾದ ಬಾಲಕ. ಅಲ್ಯೂಮಿನಿಯಂ ಪಟ್ಟಿಯನ್ನು ಎಚ್‌ಟಿ...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹರಿದು ಬಂದ ಭಕ್ತ ಸಾಗರ ; 35 ಸಾವಿರಕ್ಕೂ ಅಧಿಕ ಭಕ್ತರಿಂದ ಭೋಜನ ಪ್ರಸಾದ ಸ್ವೀಕಾರ

ಸುಬ್ರಹ್ಮಣ್ಯ ಅಕ್ಟೋಬರ್ 18 : ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆದಿತ್ಯವಾರದಂದು ಹರಿದು ಬಂದ ಭಕ್ತ ಸಾಗರದಲ್ಲಿ ಸುಮಾರು 35 ಸಾವಿರದಷ್ಟು ಭಕ್ತರು ಶ್ರೀ ದೇವರ ದರ್ಶನದೊಂದಿಗೆ ಭೋಜನ ಸ್ವೀಕರಿಸಿದ್ದಾರೆ. ರಜಾ ದಿನವಾದ ರವಿವಾರದಂದು ಹಾಗೂ ಶಾಲೆಗಳಿಗೆ ದಸರಾ ಇದ್ದುದರಿಂದ ಭಕ್ತರು ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶ್ರೀ ದೇವಳದ...

ನವರಾತ್ರಿಯಂದು ಕುಲ್ಕುಂದ ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಅಕ್ಟೋಬರ್ 18 : ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಸೇತುವೆಯಿಂದ ಕುಲ್ಕುಂದ ಭಾಗದವರೆಗೆ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಇದ್ದಂತಹ ಕಸ ಕಡ್ಡಿ,ಶತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ತಟ್ಟೆಗಳು, ಬಾಟಲ್ ಗಳು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಶೇಖರಿಸಿ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು...

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ “ತುಲಾ ಸಂಕ್ರಮಣ ತೀರ್ಥ ಸ್ನಾನ”

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಅ.18 ಆದಿತ್ಯವಾರದಂದು ಬೆಳಿಗ್ಗೆ 6:22 ಕ್ಕೆ ಸರಿಯಾಗಿ ವೃಷಭ ಲಗ್ನದಲ್ಲಿ “ತುಲಾ ಸಂಕ್ರಮಣ ತೀರ್ಥ ಸ್ನಾನ” ನೆರವೇರಿತು. ಶ್ರೀ ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ಹಾಗೂ ವ್ಯವಸ್ಥಾಪನಾ...

ಇಂದಿನ(ಅಕ್ಟೋಬರ್ 19) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 19 ಅಕ್ಟೋಬರ್ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಅಕ್ಟೋಬರ್ 19) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು...
Loading posts...

All posts loaded

No more posts

error: Content is protected !!