ಯುವಕವಿ ಪತ್ರಕರ್ತ ಎಂ.ಎ ಮುಸ್ತಫಾ ಬೆಳ್ಳಾರೆಯವರಿಗೆ “ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ” ಪ್ರಧಾನ

ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನ ಅ.18ರಂದು ಕಾಸರಗೋಡು ನಗರದ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಜರುಗಿದ್ದು ಈ ಸಂದರ್ಭದಲ್ಲಿ ಖ್ಯಾತ ಯುವಕವಿ, ಅಮರ ಸುಳ್ಯ ಸುದ್ದಿ ಕನ್ನಡ ವಾರಪತ್ರಿಕೆಯ ವರದಿಗಾರ ಎಂ.ಎ. ಮುಸ್ತಫಾ ಬೆಳ್ಳಾರೆಯವರಿಗೆ “ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ-2026” ನ್ನು ಪ್ರಧಾನ ಮಾಡಲಾಯಿತು.

. . . . . . . . .

ವೇದಿಕೆಯಲ್ಲಿ ಮೈಸೂರಿನ ವೈದ್ಯ ವಾರ್ತಾ ಪತ್ರಿಕೆಯ ನಿರ್ದೇಶಕರಾದ ಜೆ.ಪಿ ಅರಸ್, ಕವಿ ಸಮ್ಮೇಳನದ ಸರ್ವಾಧ್ಯಕ್ಷರೂ, ಅರಸು ಜನಾಂಗದ ಪ್ರಮುಖರು, ರಾಜ ವಂಶಸ್ಥರು ಹಾಗೂ ಬಹದ್ದೂರ್ ಸಾಂಸ್ಕೃತಿಕ ಸಂಸ್ಥೆ ಸ್ಥಾಪಕರಾದ ಬಿ.ಶ್ರೀನಿವಾಸ್ ಬಹದ್ದೂರ್ ಬೆಂಗಳೂರು, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ(ರಿ.)ಮೈಸೂರು ಇದರ ಸಂಸ್ಥಾಪಕರಾದ ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್ ಅರಸ್, ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಡಾ. ಜಯಪ್ಪ ಹೊನ್ನಾಳಿ, ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಖ್ಯಾತ ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ಖ್ಯಾತ ಕವಯಿತ್ರಿಗಳಾದ ಸತ್ಯವತಿ ಭಟ್ ಕೊಳಚಪ್ಪು, ಸಾಹಿತಿ, ವೈದ್ಯರಾದ ಡಾ. ಸುರೇಶ್ ನೆಗಳಗುಳಿ, ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪುರಸ್ಕೃತ ಕೃತಿಕಾರರಾದ ಶ್ರೀಮತಿ ಸೀತಾಲಕ್ಷ್ಮೀ ವರ್ಮ, ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಇರಾ ನೇಮು ಪೂಜಾರಿ, ಮಂಗಳೂರು ಕಥಾಬಿಂದು ಪ್ರಕಾಶನದ ಸ್ಥಾಪಕ ಸಂಚಾಲಕರಾದ ಪಿ.ವಿ.ಪ್ರದೀಪ್ ಕುಮಾರ್, ಪತ್ರಕರ್ತರು, ಸಾಹಿತ್ಯ ಸಂಘಟಕರಾದ ಜಯಾನಂದ ಪೆರಾಜೆ, ಕನ್ನಡ ಪ್ರಮುಖರಾದ ಪ್ರದೀಪ್ ಬೇಕಲ್, ಡಾ.ಕೆ.ಎನ್ ವೆಂಕಟರಮಣ ಹೊಳ್ಳ, ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ಕವಿಯಿತ್ರಿ ಮಲ್ಲಿಕಾ ಜೆ.ರೈ ಹಾಗೂ ವಸಂತ ಕೆರೆಮನೆ ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading