ಸುಳ್ಯ: ಬಾಲಕನಿಗೆ ವಿದ್ಯುತ್ ಶಾಕ್ – ಅದೃಷ್ಟವಶಾತ್ ಅಪಾಯದಿಂದ ಪಾರು

ಸುಳ್ಯ: ಇಲ್ಲಿನ ಅಂಬಟೆಡ್ಕದಲ್ಲಿರುವ ಬೆಳ್ಳಿಪ್ಪಾಡಿ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯ ಸಮೀಪ ಹಾದುಹೋಗಿರುವ ಹೈಟೆನ್ಷನ್ (ಎಚ್‌ಟಿ) ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಪಟ್ಟಿಯೊಂದು ತಾಗಿದ ಪರಿಣಾಮ ಬಾಲಕನೋರ್ವನಿಗೆ ವಿದ್ಯುತ್ ಶಾಕ್ ತಗುಲಿ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

. . . . . . . . .

ಗದಗ ಮೂಲದ ಅಶೋಕ್ ಅವರ ಪುತ್ರ ಧನಂಜಯ (10) ವಿದ್ಯುತ್ ಶಾಕ್‌ಗೆ ಒಳಗಾದ ಬಾಲಕ. ಅಲ್ಯೂಮಿನಿಯಂ ಪಟ್ಟಿಯನ್ನು ಎಚ್‌ಟಿ ವಿದ್ಯುತ್ ತಂತಿಗೆ ತಾಗಿಸಿದಾಗ ಈ ಘಟನೆ ಸಂಭವಿಸಿದ್ದು, ಬಾಲಕನ ಕೈಗೆ ಸುಟ್ಟ ಗಾಯಗಳಾಗಿವೆ. ತಕ್ಷಣ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

. . . . . . .

ಅಪಾಯಕಾರಿಯಾಗಿ ಹಾದುಹೋಗಿರುವ ವಿದ್ಯುತ್ ತಂತಿ

ಕಾಂಪ್ಲೆಕ್ಸ್‌ನ ಸಮೀಪ ಕೈಗೆಟಕುವಷ್ಟು ದೂರದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಹಾದುಹೋಗಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಹಿನ್ನೆಲೆಯಲ್ಲಿ ಕಾಂಪ್ಲೆಕ್ಸ್ ಮಾಲಕರು ಹಾಗೂ ಮೆಸ್ಕಾಂ ಅಧಿಕಾರಿಗಳು ತಕ್ಷಣ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading