ಸಂಪಾಜೆ : ವಾಹನ ಜಾಥಾ ಕಾರ್ಯಕ್ರಮ

ಸಂಪಾಜೆ : ರಸ್ತೆ ಅಪಘಾತ ಸುರಕ್ಷತಾ ಸಪ್ತಾಹ ಹಾಗೂ ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಪಾಜೆಯಲ್ಲಿ ವಾಹನ ಜಾಥಾ ಕಾರ್ಯಕ್ರಮ ಅ.30ರಂದು ನಡೆಯಿತು.

. . . . . . . . .

ಸಂಪಾಜೆ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘ ಸುಳ್ಯ ತಾಲೂಕು, ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್ (ರಿ.) ಕಲ್ಲುಗುಂಡಿ ಹಾಗೂ ಲಯನ್ಸ್ ಕ್ಲಬ್ ಸಂಪಾಜೆ ಇವುಗಳ ಸಹಕಾರದೊಂದಿಗೆ ಕಲ್ಲುಗುಂಡಿ ಹೊರಠಾಣೆ ಸಮೀಪದ ಕೂಲಿಶೆಡ್‌ನಲ್ಲಿ ಶುಕ್ರವಾರ ಸಂಜೆ 4:30ಕ್ಕೆ ಜಾಥಾಕ್ಕೆ ಚಾಲನೆ ನೀಡಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ರವರು ಸಂಪಾಜೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಪ್ರಮೋದ್ ರವರಿಗೆ ಪ್ಲೇ ಕಾರ್ಡ್ ನೀಡುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

. . . . . . .

ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಹೊರಠಾಣೆಯ ಎಎಸ್‌ಐ ಶೀನಪ್ಪ ಗೌಡ ಕೆ., ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ಪಿ.ಯು. ಕಾಲೇಜಿನ ಪ್ರಾಂಶುಪಾಲ ಲೋಕನಾಯ್ಕ್, ಪಿ ಡಿ ಓ ಜಯಪ್ರಕಾಶ್ ಎಂ ಆರ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಗದೀಶ್ ರೈ, ಸುಮತಿ ಶಕ್ತಿವೇಲು, ಮಾಜಿ ಉಪಾಧ್ಯಕ್ಷರಾದ ಎಸ್.ಕೆ. ಹನೀಫ್, ಲಿಸ್ಸಿ ಮೊನಾಲಿಸಾ, ಮಾಜಿ ಸದಸ್ಯರಾದ ಎ.ಕೆ. ಹನೀಫ್, ತಾಜ್ ಮೊಹಮ್ಮದ್, ವಿಮಲಾ ಪ್ರಸಾದ್, ನಾಗೇಶ್ ಪಿ.ಆರ್., ಜಿ. ರಾಮಚಂದ್ರ, ಆಶಾ ವಿನಯ್ ಕುಮಾರ್, ಲೂಕಾಸ್ ಟಿ ಐ, ಗೂನಡ್ಕ ಶಾರದಾ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತಪ್ಪ ಉಪಸ್ಥಿತರಿದ್ದರು.

ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ರಫೀಕ್ ಬಿ.ಎಂ. ನೇತೃತ್ವದ ತಂಡ, ಸಿ.ಎಫ್.ಸಿ. (ರಿ.) ಕಲ್ಲುಗುಂಡಿಯ ಅಧ್ಯಕ್ಷ ಉಮ್ಮರ್ ಗುಲ್ಮಕಜೆ ಹಾಗೂ ತಂಡ, ಲಯನ್ಸ್ ಕ್ಲಬ್ ಸಂಪಾಜೆಯ ಅಧ್ಯಕ್ಷ ಗಿರೀಶ್ ಹಾಗೂ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದಲ್ಲದೆ ರಹೀಮ್ ಬೀಜದಕಟ್ಟೆ, ಎಸ್‌ಎಸ್‌ಎಫ್ ಗೂನಡ್ಕ ಅಧ್ಯಕ್ಷ ಉನೈಸ್ ಪಿ.ಯು., ಎಸ್‌ಕೆಎಸ್‌ಎಸ್‌ಎಫ್ ಗೂನಡ್ಕದ ಸಾಜೀದ್ ಅಝ್ಹರಿ, ಕಲ್ಲುಗುಂಡಿ ಸೊಸೈಟಿ ನಿರ್ದೇಶಕ ಗಣಪತಿ ಭಟ್, ಬಿಎಂಎಸ್ ಆಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ, ಸೊಸೈಟಿ ನಿರ್ದೇಶಕ ಜಗದೀಶ್ ನಾಯ್ಕ್, ವರ್ತಕರ ಸಂಘದ ಯು.ಬಿ. ಚಕ್ರಪಾಣಿ, ಪದ್ಮಯ್ಯ ಗೌಡ ಬೊಳುಗಲ್ಲು, ರಜಾಕ್ ಸೂಪರ್, ಕಲ್ಲುಗುಂಡಿ ಜಮಾಅತ್ ಅಧ್ಯಕ್ಷ ಎಸ್. ಅಲಿ ಹಾಜಿ, ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಸಂಟ್ಯಾರ್, ಯೂಸುಫ್ ಕಲ್ಲುಗುಂಡಿ, ತಾಜುದ್ದೀನ್ ಟರ್ಲಿ, ಸಿಲ್ವಸ್ಟರ್ ಡಿಸೋಜ, ಕೆ ಎಫ್ ಡಿ ಸಿ ಯ ಅಪ್ಪಣ್ಣ, ಅರಣ್ಯ ಇಲಾಖೆಯ ವೆಂಕಟೇಶ್ ಮತ್ತು ಮನೋಜ್, ಸಿದ್ದಿಕ್ ಗೂನಡ್ಕ, ಹನೀಫ್ ಕೆ.ವಿ.ಜಿ., ಶಿವ, ಶರತ್ ಕೀಲಾರು, ರಕ್ಷಿತ್ ದೊಡ್ಡಡ್ಕ, ಪ್ರಸಾದ್ ವಿ.ಆರ್., RMSA SDMC ಅಧ್ಯಕ್ಷರಾದ ಹನೀಫ್ ಎಸ್ ಎ, ಜಾಫರ್ ಸಾದಿಕ್ ಕುಂಭಕ್ಕೋಡ್ ಪಂಚಾಯತ್ ಕಾರ್ಯದರ್ಶಿ ಮೋಹನ್, ಆಶಾ ಕಾರ್ಯಕರ್ತೆ ಮೋಹನಾಂಗಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳಾದ ಹರಿಣಿ, ಶಾಲಿನಿ, ಪಂಚಾಯತ್ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಹಸೈನ್ ಸಿ.ಎ., ರುಶೈದ್ ಕೆ.ಆರ್. ಹಾಗೂ ಫಾರೂಕ್ ಕಾನಕ್ಕೋಡ್ ಸಹಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading