ಕುಕ್ಕೆ ಸುಬ್ರಹ್ಮಣ್ಯದ ಕೆ‌ಎಸ್.ಎಸ್ ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘Dreams 2K26’ : ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಸುಬ್ರಹ್ಮಣ್ಯ : ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ (KSS) ಕಾಲೇಜಿನಲ್ಲಿ ನಡೆದ ಅಂತರ್ ಪದವಿ ಪೂರ್ವ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘Dreams 2K26’ರಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜು ಕಳೆದ ವರ್ಷದ ಸಾಧನೆಯನ್ನು ಈ ವರ್ಷವೂ ಪುನರಾವರ್ತಿಸಿ ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು (Overall Championship) ತನ್ನದಾಗಿಸಿಕೊಂಡಿದೆ.

. . . . . . . . .

ವಿವಿಧ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಸೃಜನಶೀಲತೆ, ಹಾಗೂ ಅಭಿನಯ ಸಾಮರ್ಥ್ಯವನ್ನು ಪ್ರದರ್ಶಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಏಕವ್ಯಕ್ತಿ ಗಾಯನ (Solo Singing): ಶ್ರಾವ್ಯ – ಪ್ರಥಮ ಸ್ಥಾನ.ಫಿಸಿಕಲ್ ಟಾಸ್ಕ್ (Physical Task): ಚೇತನ್ – ಪ್ರಥಮ ಸ್ಥಾನ.ತುಳು ಸ್ಕಿಟ್ (Tulu Skit): ಪ್ರಭಾಶ್, ಗೌರವಿಗಂಗಾ, ಶ್ರೇಯ, ಆಶಿಕ್, ಲಿಶ್ಮಿತ್ ಹಾಗೂ ಜಸ್ವಿನ್ – ದ್ವಿತೀಯ ಸ್ಥಾನ.ಮುಖವರ್ಣಿಕೆ (Face Painting): ಸಾನ್ವಿ ಮತ್ತು ರಕ್ಷ – ದ್ವಿತೀಯ ಸ್ಥಾನ. ಮಾಕ್ ಪ್ರೆಸ್ (Mock Press): ನಂದಿತಾ – ದ್ವಿತೀಯ ಸ್ಥಾನ. ವಿದ್ಯಾರ್ಥಿಗಳ ಸಂಘಟಿತ ಪ್ರಯತ್ನ, ನಿರಂತರ ಅಭ್ಯಾಸ ಹಾಗೂ ಅತ್ಯುತ್ತಮ ಪ್ರದರ್ಶನದ ಫಲವಾಗಿ ಕಾಲೇಜು ಈ ಪ್ರತಿಷ್ಠಿತ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

. . . . . . .

ಕಾಲೇಜಿನ ಈ ಗಮನಾರ್ಹ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸ್ಪರ್ಧೆಗೆ ಸಜ್ಜುಗೊಳಿಸಿದ ಉಪನ್ಯಾಸಕಿಯರಾದ ಅರುಣಾ ಎ. ಮತ್ತು ದಿವ್ಯಶ್ರೀ ಬಿ. ಅವರ ಪರಿಶ್ರಮ ಹಾಗೂ ಸಹಕಾರವನ್ನು ಶ್ಲಾಘಿಸಿದ್ದಾರೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿಯೂ ಇಂತಹ ಸಾಧನೆಗಳನ್ನು ಮುಂದುವರಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading