ಬೆಳ್ಳಾರೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ; “ದೇಶದ ನಿಜವಾದ ಶಕ್ತಿ ನಮ್ಮ ಏಕತೆಯಲ್ಲಿದೆ” : ಶ್ಯಾಂ ಸುಂದರ ರೈ

“ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅಪಾರ ದೇಶ ಭಕ್ತಿ, ದೃಢ ನಿರ್ಧಾರ ಮತ್ತು ನಾಯಕತ್ವ ಗುಣ ಸದಾ ಪ್ರೇರಣೆಯಾಗಿದೆ. ರಾಷ್ಟ್ರೀಯ ಏಕತೆ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ಮೌಲ್ಯ. ನಮ್ಮ ದೇಶದ ನಿಜವಾದ ಶಕ್ತಿ ನಮ್ಮ ಏಕತೆಯಲ್ಲಿದೆ” ಎಂದು ರೋಟರಿ ಕ್ಲಬ್ ಪೂರ್ವ ಸಹಾಯಕ ಗವರ್ನರ್ ಶ್ಯಾಂ ಸುಂದರ ರೈ ಹೇಳಿದರು. ಅವರು ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ಜ್ಞಾನದೀಪ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಏಕತೆಯ ಪ್ರತಿಜ್ಞೆ ಭೋದಿಸಿ ಮಾತನಾಡಿದರು.

. . . . . . . . .

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಆರೀಫ್ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರೋಶನ್ ಫೆರ್ನಾಂಡಿಸ್, ಕಾರ್ಯದರ್ಶಿ ಕೀರ್ತನಾ ಪಿ ಉಪಸ್ಥಿತರಿದ್ದರು.

. . . . . . .

ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿ,ಸ್ವಾಗತಿಸಿ, ರೋಟರಿ ಕ್ಲಬ್ ನ ಕಾರ್ಯದರ್ಶಿ ಪ್ರಶಾಂತ್ ಟಿ ಎಂ ವಂದಿಸಿದರು. ಉಪನ್ಯಾಸಕ ವಿಜೇತ್ ಸುವರ್ಣ ಕೆ ವಿ ಕಾರ್ಯಕ್ರಮ ನಿರ್ವಹಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading