ಜ್ಯೋತಿ ಪ್ರೌಢಶಾಲೆ ಪೆರಾಜೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಅ.27 ರಂದು ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ 14 ಮತ್ತು 17 ವರ್ಷ ವಯೋಮಾನದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಜ್ಯೋತಿ ಪ್ರೌಶಾಲೆ ಪೆರಾಜೆಯ ಆರು ವಿದ್ಯಾರ್ಥಿಗಳು ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.14 ವರ್ಷ ವಯೋಮಾನದ ಕ್ರೀಡಾಕೂಟದಲ್ಲಿ 8ನೇ ತರಗತಿಯ ಮುಕೇಶ್ 4X100 ಮೀಟರ್ ರಿಲೇ ಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

. . . . . . . . .

17ವರ್ಷ ವಯೋಮಾನದ ಕ್ರೀಡಾ ಕೂಟದಲ್ಲಿ ಆದರ್ಶ ಡಿ.ಟಿ 110 ಮೀಟರ್ ಹರ್ಡಲ್ಸ್ ತೀರ್ಥೇಶ್ ಹ್ಯಾಮರ್ ತ್ರೋ, ಡೀಕ್ಷಾ ಸಿ.ಎಸ್ ಹ್ಯಾಮರ್ ತ್ರೋನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ರಕ್ಷಿತಾ 400 ಮೀಟರ್ ಹರ್ಡಲ್ಸ್, ಮುಖೇಶ್ 100 ಮೀಟರ್ ಓಟ, ಆದರ್ಶ್ ಡಿ. ಟಿ ಹಾಗೂ ಆಕಾಶ್ ಎಸ್ 4X100 ಮೀಟ‌ರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

. . . . . . .

ವಿನಯ್ ಕುಮಾ‌ರ್ 400 ಮೀಟರ್ ಹರ್ಡಲ್ಸ್, ಆಕಾಶ್ ಎಸ್ ಜಾವೆಲಿನ್ ತ್ರೋ ಮತ್ತು 400 ಮೀಟರ್ ಓಟ, ಅನನ್ಯ ಕೆ.ಪಿ ಜಾವೆಲಿನ್ ತ್ರೋ ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.ಈ ವಿದ್ಯಾರ್ಥಿಗಳಿಗೆ ಜ್ಯೋತಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ನಿತಿನ್ ಮಜಿಕೋಡಿ ಅವರು ತರಬೇತಿ ನೀಡಿರುತ್ತಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading