ಸ್ವರ್ಣಶ್ರೀ ಸೊಸೈಟಿಯಿಂದ ಬಹುಮಾನ ವಿತರಣೆ

ಸುಳ್ಯ: ಸುಳ್ಯ ನಗರದ ರಥಬೀದಿಯ ವಿನಾಯಕ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಠೇವಣಿ ಸಂಗ್ರಹ ಅಭಿಯಾನದ ಪ್ರಚಾರಕ್ಕೆ ಸಹಕರಿಸಿದವರಿಗೆ ಬಹುಮಾನ ವಿತರಿಸಲಾಯಿತು.

. . . . . . . . .

ಸೊಸೈಟಿಯು ನವರಾತ್ರಿ ಹಬ್ಬದ ಪ್ರಯುಕ್ತ ಅಕ್ಟೋಬರ್ 31ರವರೆಗೆ ಹೊಸ ಒಂದು ವರ್ಷದ ಅವಧಿಯ ಸ್ವರ್ಣನಿಧಿ ಸ್ಥಿರ ಠೇವಣಿ (FD)ಗಳಿಗೆ ಹಿರಿಯ ನಾಗರಿಕರಿಗೆ ಶೇ. 12 ಹಾಗೂ ಜನಸಾಮಾನ್ಯರಿಗೆ ಶೇ. 11.50 ಬಡ್ಡಿದರವನ್ನು ಘೋಷಿಸಿತ್ತು. ಸ್ವರ್ಣಧಾರ ಮರುಕಳಿಸುವ ಠೇವಣಿ (RD)ಗಳಿಗೆ ಒಂದು ವರ್ಷದ ಅವಧಿಗೆ ಶೇ. 11 ಬಡ್ಡಿದರದ ಜೊತೆಗೆ ರೂ. 1 ಲಕ್ಷಕ್ಕಿಂತ ಅಧಿಕ ಮೊತ್ತದ ಠೇವಣಿ ಇರಿಸುವವರಿಗೆ ಉಚಿತ ಬೆಳ್ಳಿ ನಾಣ್ಯ ನೀಡುವ ವಿಶೇಷ ಯೋಜನೆಯನ್ನೂ ಪ್ರಕಟಿಸಿತ್ತು.

. . . . . . .

ಈ ವಿಶೇಷ ಬಡ್ಡಿದರ ಹಾಗೂ ಠೇವಣಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಾಟ್ಸ್ಆ್ಯಪ್ ಸ್ಟೇಟಸ್ ಮೂಲಕ ಪ್ರಚಾರ ನಡೆಸಲು ಸೊಸೈಟಿ ವಿನಂತಿಸಿತ್ತು. 100ಕ್ಕಿಂತ ಅಧಿಕ ವೀಕ್ಷಣೆ (Views) ಪಡೆದ ಸ್ಟೇಟಸ್‌ಗಳ ಸ್ಕ್ರೀನ್‌ಶಾಟ್ ಕಳುಹಿಸುವಂತೆ ತಿಳಿಸಲಾಗಿತ್ತು. ಕಳುಹಿಸಿದವರಲ್ಲಿ ಒಬ್ಬ ಅದೃಷ್ಟಶಾಲಿ ವಿಜೇತರಿಗೆ ಹಾಗೂ ಅತಿ ಹೆಚ್ಚು ವೀಕ್ಷಣೆ ಪಡೆದ ಸ್ಟೇಟಸ್ ಕಳುಹಿಸಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.

ಅದರಂತೆ ಅದೃಷ್ಟಶಾಲಿ ವಿಜೇತರಾದ ಅಶ್ವತ್ ಅಡ್ಕಾರ್ ಹಾಗೂ ಅತಿ ಹೆಚ್ಚು ವೀಕ್ಷಣೆ ಪಡೆದ ಸ್ಟೇಟಸ್ ಕಳುಹಿಸಿದ ರಜಿಯಾ, ಗಾಂಧಿನಗರ ಇವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಅಧ್ಯಕ್ಷ ಜನಾರ್ದನ ದೋಳ, ಸಿಬ್ಬಂದಿ ಜ್ಯೋಸ್ನ ಮಂದ್ರಪ್ಪಾಡಿ, ಸ್ವರ್ಣನಿಧಿ ಠೇವಣಿ (ಪಿಗ್ಮಿ) ಸಂಗ್ರಾಹಕಿ ಸರಸ್ವತಿ ಎಂ. ಹಾಗೂ ಪಾಪ್ಯುಲರ್ ಸ್ವೀಟ್ಸ್‌ನ ಅನುಪ್ ಕಮಲಾಕ್ಷ ಪೈ ಉಪಸ್ಥಿತರಿದ್ದರು.

ಠೇವಣಿ ಸಂಗ್ರಹ ಅಭಿಯಾನವನ್ನು ವಾಟ್ಸ್ಆ್ಯಪ್ ಸ್ಟೇಟಸ್‌ಗಳ ಮೂಲಕ ಪ್ರಚಾರಪಡಿಸಲು ಸಹಕರಿಸಿದ ಎಲ್ಲರಿಗೂ ಸೊಸೈಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading