- Thursday
- October 29th, 2026
“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರಲ್ಲಿ ಶಿಸ್ತು ಬೆಳೆಸುವುದರ ಜೊತೆಗೆ ಅನೇಕ ಕುಟುಂಬಗಳ ಬದುಕಿನಲ್ಲಿ ಅಭಿವೃದ್ಧಿಗೆ ಕಾರಣವಾಗಿದೆ. ಶಿಕ್ಷಣ ಕ್ಷೇತ್ರವನ್ನು ಉಳಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಾ, ಗೌರವಯುತವಾಗಿ ಬಡವರ ಬದುಕನ್ನು ಕಟ್ಟಿಕೊಡುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ” ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಶ್ರೀ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರಲ್ಲಿ ಶಿಸ್ತು ಬೆಳೆಸುವುದರ ಜೊತೆಗೆ ಅನೇಕ ಕುಟುಂಬಗಳ ಬದುಕಿನಲ್ಲಿ ಅಭಿವೃದ್ಧಿಗೆ ಕಾರಣವಾಗಿದೆ. ಶಿಕ್ಷಣ ಕ್ಷೇತ್ರವನ್ನು ಉಳಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಾ, ಗೌರವಯುತವಾಗಿ ಬಡವರ ಬದುಕನ್ನು ಕಟ್ಟಿಕೊಡುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಶ್ರೀ...
ಸುಬ್ರಹ್ಮಣ್ಯ, ಅಕ್ಟೋಬರ್ 5 : ರಾಷ್ಟ್ರೀಯ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಂಜ ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾವನ್ನು ಸೋಮವಾರ ಕೈಗೊಳ್ಳಲಾಯಿತು. ಪಂಜಾ ವಲಯ ಅರಣ್ಯಾಧಿಕಾರಿ ಸಂಧ್ಯಾ ರವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳು, ಫಾರೆಸ್ಟ್ ಗಾರ್ಡ್ ಹಾಗೂ ವಾಚರ್ ಗಳನ್ನು ಒಳಗೊಂಡ ಸುಮಾರು 30ಕ್ಕೂ ಮಿಕ್ಕಿ ಅಧಿಕಾರಿ ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡರು....
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 05 ಅಕ್ಟೋಬರ್ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಅಕ್ಟೋಬರ್ 05) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು...
ಇವತ್ತಿನ ಮುಂಜಾನೆ ಕಳೆದ ಕೆಲವು ದಿನಗಳಿಗಿಂತ ಸ್ವಲ್ಪ ವಿಭಿನ್ನವಾಗಿತ್ತು, ವಿಶೇಷವಾಗಿತ್ತು. ಏಕೆಂದರೆ ಪ್ರತಿದಿನವೂ ಉದಯಿಸುತ್ತಿದ್ದ ಸೂರ್ಯನೇ ಇಂದದೇಕೋ ಮಂಕಾಗಿದ್ದ, ಮೌನವಾಗಿದ್ದ, ಮೋಡದ ಹಿಂದೆ ಮರೆಯಾಗಿ ಹೋಗಿದ್ದ. ಮನೆಗೋಡೆಯಲ್ಲಿ ನೇತು ಹಾಕಿದ್ದ ಗಡಿಯಾರದಲ್ಲಿ ಗಂಟೆ ಎಂಟಾಗಿದ್ದರೂ ಕೂಡ ಮನೆಯಂಗಳದ ಆ ನೋಟ ಇನ್ನೂ ಆರು ಗಂಟೆಯಂತೆ ಕಾಣುತ್ತಿತ್ತು. ಮೋಡ ಕವಿದ ವಾತಾವರಣದಲ್ಲಿ ಪ್ರಕೃತಿಯ ಸಂಪೂರ್ಣ ನೋಟವೇ ಬದಲಾಗಿ...
ಸುಳ್ಯ : ಹವಾಮಾನ ವೈಪರೀತ್ಯದಿಂದ ಕೃಷಿಕರಿಗೆ ಉಂಟಾಗುವ ನಷ್ಟವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೊಳಿಸಿರುವ ಬೆಳೆ ವಿಮೆ ಯೋಜನೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಆರೋಪಿಸಿದ್ದಾರೆ. ರೈತರು ಸಹಕಾರಿ ಸಂಘಗಳ ಮೂಲಕ ವಿಮಾ ಕಂತು ಪಾವತಿಸಿದ್ದು, ಗ್ರಾಮಗಳಲ್ಲಿ ಅಳವಡಿಸಿರುವ ಮಳೆ ಮಾಪನ...
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ–2026ರ ಅಂಗವಾಗಿ ನಡೆಯಲಿರುವ ಬಹುರೂಪಿ ಕವಿಗೋಷ್ಠಿಗೆ ಸುಶ್ಮಿತಾ ಉಗ್ರಾಣಿಮನೆ ಆಯ್ಕೆಯಾಗಿದ್ದಾರೆ. ಕನ್ನಡದ ಐದು ಛಾಯೆಗಳನ್ನು ಪ್ರತಿಬಿಂಬಿಸುವ ಈ ವಿಶೇಷ ಕವಿಗೋಷ್ಠಿಗಾಗಿ ಕರ್ನಾಟಕದ 31 ಜಿಲ್ಲೆಗಳಿಂದ ಕವನಗಳನ್ನು ಆಹ್ವಾನಿಸಲಾಗಿತ್ತು. ಆಹ್ವಾನಿಸಲಾದ ಕವನಗಳ ಪೈಕಿ ನಡೆದ ಆಯ್ಕೆ ಪ್ರಕ್ರಿಯೆಯ ಮೂಲಕ ಸುಶ್ಮಿತಾ ಉಗ್ರಾಣಿಮನೆ ಅವರು ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಕನ್ನಡದ ಐದು ಛಾಯೆಗಳನ್ನು ಪ್ರತಿನಿಧಿಸುವ ಪಂಚ...
ಸುಳ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನೂತನ ಎಂ.ಆರ್.ಎಫ್. (Material Recovery Facility) ಘಟಕ ಅ.3 ರಂದು ಆರಂಭಗೊಂಡಿತು. ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಈ ಘಟಕವು ಒಣತ್ಯಾಜ್ಯವನ್ನು ಸಂಗ್ರಹಿಸಿ, ವಿಂಗಡಿಸಿ ಮರುಬಳಕೆಗೆ...
ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ, ಕೆ.ವಿ.ಜಿ. ಪಾಲಿಟೆಕ್ನಿಕ್ನ ಎನ್.ಎಸ್.ಎಸ್ ಘಟಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಬಾರು ಹಾಗೂ ಅಂಗನವಾಡಿ ಕೇಂದ್ರ ಕೊಂಬಾರು ಇವರ ಸಹಯೋಗದಲ್ಲಿ ಅಕ್ಟೋಬರ್ 2ರಂದು ಕೊಂಬಾರು ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ವಿ.ಜಿ. ಪಾಲಿಟೆಕ್ನಿಕ್ನ...
ಮಂಗಳೂರು ವಿಶ್ವವಿದ್ಯಾಲಯದ ಅಂತರ್ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಮಹಿಳಾ ಕಬಡ್ಡಿ ತಂಡವು ಪ್ರಿ-ಚಾಂಪಿಯನ್ಶಿಪ್ ಹಂತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಧರ್ಮಸ್ಥಳದ ಎಸ್ಡಿಎಂ ಕಾಲೇಜು, ಉಜಿರೆ ಇಲ್ಲಿ ಸೆಪ್ಟೆಂಬರ್ 29ರಿಂದ 30ರವರೆಗೆ ನಡೆದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಎನ್ಎಂಸಿ ಮಹಿಳಾ ತಂಡವು ಉತ್ತಮ ಪ್ರದರ್ಶನ ನೀಡಿ ಪ್ರಿ-ಚಾಂಪಿಯನ್ಶಿಪ್ ಹಂತದ ಫೈನಲ್ಗೆ ಪ್ರವೇಶಿಸಿತು....
Loading posts...
All posts loaded
No more posts
