ಮೋಡ ಕವಿದ ವಾತಾವರಣ… – ಉಲ್ಲಾಸ್ ಕಜ್ಜೋಡಿ

ಇವತ್ತಿನ ಮುಂಜಾನೆ ಕಳೆದ ಕೆಲವು ದಿನಗಳಿಗಿಂತ ಸ್ವಲ್ಪ ವಿಭಿನ್ನವಾಗಿತ್ತು, ವಿಶೇಷವಾಗಿತ್ತು. ಏಕೆಂದರೆ ಪ್ರತಿದಿನವೂ ಉದಯಿಸುತ್ತಿದ್ದ ಸೂರ್ಯನೇ ಇಂದದೇಕೋ ಮಂಕಾಗಿದ್ದ, ಮೌನವಾಗಿದ್ದ, ಮೋಡದ ಹಿಂದೆ ಮರೆಯಾಗಿ ಹೋಗಿದ್ದ. ಮನೆಗೋಡೆಯಲ್ಲಿ ನೇತು ಹಾಕಿದ್ದ ಗಡಿಯಾರದಲ್ಲಿ ಗಂಟೆ ಎಂಟಾಗಿದ್ದರೂ ಕೂಡ ಮನೆಯಂಗಳದ ಆ ನೋಟ ಇನ್ನೂ ಆರು ಗಂಟೆಯಂತೆ ಕಾಣುತ್ತಿತ್ತು. ಮೋಡ ಕವಿದ ವಾತಾವರಣದಲ್ಲಿ ಪ್ರಕೃತಿಯ ಸಂಪೂರ್ಣ ನೋಟವೇ ಬದಲಾಗಿ ಹೋಗಿತ್ತು. ಪ್ರತಿದಿನವೂ ಸೂರ್ಯನನ್ನು ಸ್ವಾಗತಿಸುತ್ತಿದ್ದ ಹಕ್ಕಿಗಳ ಚಿಲಿ-ಪಿಲಿ ನಾದವಿಂದು ಕವಿದ ಮೋಡದಿಂದ ಸುರಿಯುತ್ತಿರುವ ತುಂತುರು ಮಳೆಯ ಚಿಟ-ಪಟ ಸದ್ದಿನ ನಡುವೆ ಮರೆಯಾಗಿ ಹೋಗಿತ್ತು, ಸೂರ್ಯನೇ ಬಾರದ ಆ ಆಗಸದಲ್ಲಿ ಹಾರಾಡಲು ಹಕ್ಕಿಗಳೂ ಕೂಡ ಹಿಂದೇಟು ಹಾಕುತ್ತಿವೆಯೋ ಎಂಬ ಪ್ರಶ್ನೆ ನಮ್ಮ ಮನದಲ್ಲಿ ಮೂಡಿತ್ತು..! ಪ್ರತಿದಿನವೂ ಕೂಡ ಹೊತ್ತು ಕಳೆದಂತೆ ಬಿಸಿಯೇರುತ್ತಿದ್ದ ಈ ವಾತಾವರಣವು ಇಂದದೇಕೋ ತುಸು ತಂಪನ್ನು ತಂದಿತ್ತು. ಅತ್ತ ಬಿಸಿಲೂ ಇರದೇ, ಇತ್ತ ಮಳೆಯೂ ಬರದೇ ಆಗಸವೂ ದಿನಪೂರ್ತಿ ಮೋಡದಲ್ಲೇ ಮುಚ್ಚಿತ್ತು, ಸಂಜೆಯ ವೇಳೆಗೆ ಇಡೀ ದಿನದ ಮಳೆ ಒಟ್ಟಾಗಿ ಸೇರಿ ಜೋರಾಗಿ ಸುರಿಯುವ ಸಂಭವ ತುಸು ಹೆಚ್ಚಾಗಿಯೇ ಇತ್ತು..!! ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading