ಈಶ್ವರಮಂಗಲದಲ್ಲಿ ಪಿಕ್‌ಅಪ್–ಬೈಕ್ ಅಪಘಾತ ; ಗಂಭೀರ ಗಾಯಗೊಂಡಿದ್ದ ಕೊಡಿಯಾಲದ ಯುವಕ ಸಾವು

ಕೊಡಿಯಾಲ : ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಪಿಕ್‌ಅಪ್ ವಾಹನ ಮತ್ತು ಬೈಕ್ ನಡುವೆ ಅ.01 ರಂದು ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೊಡಿಯಾಲ ಗ್ರಾಮದ ಬೇರಿಯ ನಿವಾಸಿ ಪೊಡಿಯ ಮತ್ತು ವಿಮಲ ದಂಪತಿಗಳ ಪುತ್ರ ಸುದೇಶ್ (21) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

. . . . . . . . .

ಸುದೇಶ್ ಅವರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈಶ್ವರಮಂಗಲದಲ್ಲಿ ಪಿಕ್‌ಅಪ್ ವಾಹನ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ, ಸಹೋದರಿಯರಾದ ದೀಪಿಕಾ ಮತ್ತು ಶ್ರೀಪ್ರಿಯಾ ರನ್ನು ಅಗಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading