- Thursday
- September 10th, 2026
ಕೊಡಗು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ಕದಿರು ಸಂಗ್ರಹಕ್ಕಾಗಿ ಜೂ.22 ರಂದು ಗದ್ದೆ ನಾಟಿ ಕೆಲಸ ಗುಡ್ಡಪ್ಪ ಚೌಟಾಜೆ ಇವರ ಗದ್ದೆಯಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ನಿಕಟಪೂರ್ವ ಆಡಳಿತ ಮಂಡಳಿಯವರು ಹಾಗೂ ಗ್ರಾಮದ ಹಲವು ಮಹಿಳಾ ಮತ್ತು ಪುರುಷ ಭಕ್ತಾಧಿಗಳು ಭಾಗವಹಿಸಿ ಸಹಕರಿಸಿದರು.
ಸುಬ್ರಹ್ಮಣ್ಯ : “ಚಿತ್ತ ಚಾಂಚಲ್ಯವನ್ನು ಹೋಗಲಾಡಿಸಲು ಯೋಗ ಪ್ರಧಾನ. ಪ್ರಾಚೀನ ಖುಷಿ ಮುನಿಗಳಿಂದ ಸಂಜಾತ ಯೋಗವು ಸರ್ವರೋಗ ನಿವಾರಕವಾಗಿದೆ. ಪತಂಜಲಿ ಮುನಿಯಿಂದ ಭಾರತದಲ್ಲಿ ಆರಂಭವಾದ ಯೋಗ ಇಂದು ವಿಶ್ವವ್ಯಾಪಿಯಾಗಿದೆ. ಯೋಗವು ಭಾರತವು ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಸಮಚಿತ್ತ ಮತ್ತು ದೈಹಿಕ ಸಮತೋಲನಕ್ಕೆ ಯೋಗ ಅಸ್ತçವಾಗಿದೆ. ಏಕಾಗ್ರತೆಯೊಂದಿಗೆ ಮಾನಸಿಕ ಸದೃಢತೆ ಸಾಧಿಸಲು ಯೋಗ ಅಡಿಗಲ್ಲು. ಯೋಗದಿಂದ...
ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈ ಯವರು ಉದ್ಘಾಟಿಸಿ ಮಾತಾನಾಡಿ, “ಯೋಗವು ದೇಹಕ್ಕೆ ಶಕ್ತಿ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಯೋಗವು ದೇಹದ ರೋಗವನ್ನು ದೂರ ಮಾಡುವ ಸಂಜೀವಿನಿ. ಯೋಗ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ತಿಳಿಸಿದರು. ನಿರಂತರ ಯೋಗ ಕೇಂದ್ರ ದಕ್ಷಿಣ ಕನ್ನಡ...
ಪತಂಜಲಿ ಯೋಗ ಸಮಿತಿ ಬೆಳ್ಳಾರೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗ ತರಬೇತಿ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಯೋಗ ತರಗತಿ ಉದ್ಘಾಟಿಸಿದರು. ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರುಗಳಾದ ಪ್ರಸಾದ್ ಸೇವಿತ ಮತ್ತು ಪ್ರಭಾ ಯೋಗ ತರಬೇತಿ ನೀಡಿದರು. ಉಪನ್ಯಾಸಕ ವಿಜೇತ್ ಸುವರ್ಣ...
ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಂಚಾಲಕರಾದ ಎ.ಸಿ. ವಸಂತ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, "ವಿದ್ಯಾರ್ಥಿಗಳು ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು" ಎಂದು ಶುಭ ಹಾರೈಸಿದರು. ಸಂಸ್ಥೆಯ ಭೌತಶಾಸ್ತ್ರ ಉಪನ್ಯಾಸಕರು ಹಾಗೂ ಯೋಗಪಟುವಾದ ಸುರೇಶ್ ವಾಗ್ಲೆ...
ಗುತ್ತಿಗಾರು ವರ್ತಕರ ಸಂಘದ ಮಹಾಸಭೆ ಜೂ.20 ರಂದು ಪಂಚಾಯತ್ ಪರಿಶಿಷ್ಟ ವರ್ಗದ ಸಭಾ ಭವನದಲ್ಲಿ ಜರಗಿತು. ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸಭೆಯಲ್ಲಿ ಗೌರವಿಸಲಾಯಿತು. ನಂತರ ನೂತನ ಆಡಳಿತ ಮಂಡಳಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ವಿನ್ಯಾಸ್ ಕೊಚ್ಚಿ, ಉಪಾಧ್ಯಕ್ಷರಾಗಿ ಅನಿಲ್ ಕುಮಾರ್, ಕಾರ್ಯದರ್ಶಿಯಾಗಿ ಶಿವರಾಮ ಕರುವಜೆ, ಜೊತೆ ಕಾರ್ಯದರ್ಶಿಯಾಗಿ ಬಿ.ಕೆ ಶ್ರೀಧರ್,...
ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ಸಿ.ಕೆ ನವೀನ್ ಚಾತುಬಾಯಿ ಅವರಿಗೆ ಬೆಂಗಳೂರಿನ ಜ್ಞಾನ ಮಂದಾರ ಎಜ್ಯುಕೇಷನ್ ಟ್ರಸ್ಟ್ ನ ರಜತ ಮಹೋತ್ಸವ ಅಂಗವಾಗಿ “ಬಸವಜ್ಯೋತಿ ರಾಜ್ಯ ಪುರಸ್ಕಾರ” ನೀಡಿ ಗೌರವಿಸಲಾಯಿತು. ಸುಳ್ಯದ ಕನ್ನಡ ಭವನದಲ್ಲಿ ಜೂ.21ರಂದು ಜ್ಞಾನ ಮಂದಾರ ಎಜ್ಯುಕೇಶನ್ ಟ್ರಸ್ಟ್, ಮಿತ್ರ ಯುವಕ ಮಂಡಲ ಕೊಯುಕುಳಿ ಮತ್ತು ಕುರಲ್ ತುಳು ಕೂಟ...
ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಅರಂಬೂರು ವಲಯದ ಗೌಡ ಬಾಂಧವರಿಗೆ ವಿವಿಧ ಸ್ಪರ್ಧೆಗಳೊಂದಿಗೆ “ಗದ್ದೆಯಲ್ಲಿ ಒಂದು ದಿನ” ಕಾರ್ಯಕ್ರಮವು ಜೂನ್ 21ರಂದು ಅರಂಬೂರು ಗದ್ದೆಬೈಲುನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ಅಪ್ಪಯ್ಯ ಗೌಡ ಪಡ್ಪು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುರಾಧಾ ಕುರುಂಜಿ ವಹಿಸಿದ್ದರು. ವೇದಿಕೆಯಲ್ಲಿ...
ದಿನಾಂಕ : 22 ಜೂನ್ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 22) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ :390 ರಿಂದ 470ಹಳೆ...
ದಿನಾಂಕ : 22 ಜೂನ್ 2026ವಾರ : ಸೋಮವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯಮಂಡೆಕೋಲು, ಸುಳ್ಯಮೊ: 959196919701)ಮೇಷ ರಾಶಿ : ಇಂದು ನಿಮ್ಮ ಸಾಧಾರಣ ಬಟ್ಟೆಯನ್ನು ಕಂಡು ನಿಮ್ಮನ್ನು ಅಳೆಯಬಹುದು. ಅಂಧಾನುಕರಣೆ ಬೇಡ. ಸಮಾರಂಭಕ್ಕೆ ಹೋಗುವಾಗ ಉತ್ತಮ ಬಟ್ಟೆಯು ಇರಲಿ. ಕಾರ್ಯವಾಗದಿದ್ದಾಗ ಬೇಸರ, ಹತಾಶೆ ಕಾಣಿಸುವುದು. ಸ್ತ್ರೀಯರಿಗೆ ತವರುಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ. ಸ್ವಾಭಿಮಾನಕ್ಕೆ ಧಕ್ಕೆ...
Loading posts...
All posts loaded
No more posts
