ಚೊಕ್ಕಾಡಿಯಲ್ಲಿ ಆ.09ರಂದು ಕೆಸರುಗದ್ದೆ ಕ್ರೀಡಾಕೂಟ

ಗರುಡ ಯುವಕ ಮಂಡಲ(ರಿ.) ಚೊಕ್ಕಾಡಿ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಜಂಟಿ ಆಶ್ರಯದಲ್ಲಿ, ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯದ ಸಹಯೋಗದೊಂದಿಗೆ ಆಗಸ್ಟ್ 09ರಂದು ಚೆನ್ನಪರಿ-ಅಚ್ಚಿಪಳ್ಳ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ-2026 ನಡೆಯಲಿದೆ.

. . . . . . . . .

ಬೆಳಿಗ್ಗೆ 8:00 ಗಂಟೆಯಿಂದ ವಿವಿಧ ಕ್ರೀಡಾಸ್ಪರ್ಧೆಗಳು ಆರಂಭಗೊಳ್ಳಲಿದ್ದು, ಪೂರ್ವಾಹ್ನ 9:30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ. ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ಪೂಜಾರಿಗಳಾದ ಕುಸುಮಾಧರ ಕೊಳಂಬೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಹೇಮವಾತಿ ತಂಟೆಪ್ಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.

. . . . . . .

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಗೌಡ ಬೊಳ್ಳೂರು, ಗರುಡ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶ್ರೀಧರ ಕರ್ಮಜೆ, ಮುಳಿಯ ಗೋಲ್ಡ್ & ಡೈಮಂಡ್ಸ್ ಪುತ್ತೂರಿನ ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಕುಕ್ಕುಜಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸವಿತಾ ಪಡ್ಪು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತುಕುಂಜ ಭಾಗವಹಿಸಲಿದ್ದು, ಗದ್ದೆಯ ಮಾಲಕರಾದ ಶ್ರೀಮತಿ ಬೊಳಿಯಮ್ಮ ಗೌರವ ಉಪಸ್ಥಿತರಿರಲಿದ್ದಾರೆ.

ಸಂಜೆ 6:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗರುಡ ಯುವಕ ಮಂಡಲದ ಅಧ್ಯಕ್ಷ ಶ್ರೀ ಅರುಣಕುಮಾರ ಮುಂಡಾಜೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಜೆ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತಡ್ಕ, ಸುಧಾ ಕ್ಲಿನಿಕ್ ನ ಡಾ. ಸನತ್ ದೇರಾಜೆ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಪದವು ಶಾಖೆಯ ಅಧ್ಯಕ್ಷ ವಿನಯ ಪಾಡಾಜೆ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ನಾಟಿ ಔಷಧಿ ತಜ್ಞ ಪದ್ಮನಾಭ ಕೊರಡ್ಕ, ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಚಂದ್ರಶೇಖರ ಸುಬ್ಬಯ್ಯಮೂಲೆ ಹಾಗೂ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಗದ್ದೆಯ ಮಾಲಕರಾದ ಯತೀಶ್ ಪೂಮಲೆ ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಪುರುಷರು, ಮಹಿಳೆಯರು, ವಿವಿಧ ವಯೋಮಾನದ ಬಾಲಕ-ಬಾಲಕಿಯರಿಗಾಗಿ ಹ್ಯಾಂಡ್ ಬಾಲ್, ಬೆರಿಚೆಂಡು, ಗುಂಪು ಕಂಬಳ ಓಟ, ಹಗ್ಗಜಗ್ಗಾಟ, ಬಾಲ್ ಪಾಸಿಂಗ್, ಉಪ್ಪು ಮುಡಿ ಓಟ ಹಾಗೂ 50 ಮೀ. ಮತ್ತು 100 ಮೀ. ಕೆಸರುಗದ್ದೆ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳು ಆಯೋಜಿಸಲಾಗಿದೆ. 45 ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರಿಗಾಗಿ ವಿಶೇಷ ಸ್ಪರ್ಧೆಗಳೂ ಇರಲಿವೆ.

ಇದಲ್ಲದೆ, ಮುಳಿಯ ಗೋಲ್ಡ್ & ಡೈಮಂಡ್ಸ್, ಪುತ್ತೂರು ಪ್ರಾಯೋಜಿತ “ಮುಳಿಯ ನಿಧಿಶೋಧನೆ” ಕಾರ್ಯಕ್ರಮವು 45 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗಾಗಿ ವಿಶೇಷ ಆಕರ್ಷಣೆಯಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading