ಬ್ರಹ್ಮರಗಯದಲ್ಲಿ ರಸ್ತೆಗೆ ಬಿದ್ದ ಮರ – ಸ್ಥಳೀಯರಿಂದ ತೆರವು

ಸುಳ್ಯದಲ್ಲಿ ಆ.7 ರಂದು ಸುರಿದ ಭಾರಿ ಮಳೆಗೆ ತೋಟಗಾರಿಕಾ ಇಲಾಖೆಯ ಬಳಿ ಬ್ರಹ್ಮರಗಯ – ಕೊಡಿಯಾಲಬೈಲು ರಸ್ತೆಗೆ ಅಡ್ಡವಾಗಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

. . . . . . . . .

ಈ ಸಂದರ್ಭದಲ್ಲಿ ಸ್ಥಳೀಯರ ಮಾಹಿತಿಗೆ ತಕ್ಷಣವೇ ಸ್ಪಂದಿಸಿ ಸ್ಥಳಕ್ಕೆ ಬಂದ ನಗರ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಶಿಲ್ಪಾ ಸುದೇವ್ ರವರು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಿ, ಸ್ಥಳೀಯರ ನೆರವಿನೊಂದಿಗೆ ಮರವನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

. . . . . . .

ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕರಾದ ಪ್ರಕಾಶ್ ಕೆ, ಮತ್ತು ಮಂಜುನಾಥ್, ಶ್ರೀಧರ್ ಪರಿವಾರಕಾನ, ಲೂಸಿ , ಭವಾನಿಶಂಕರ್ ಮತ್ತು ಇತರ ಸ್ಥಳೀಯರು ಸಹಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading