ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಪುನರ್ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ “ಮನವಿ ಪತ್ರ” ಬಿಡುಗಡೆ

ಕಲ್ಮಡ್ಕ : ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಸಭಾಭವನದಲ್ಲಿ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಪುನರ್ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕುರಿತು "ಮನವಿ ಪತ್ರ"ವನ್ನು 01 ಅಕ್ಟೋಬರ್ 2026 ರಂದು ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಉದಯ್ ಕುಮಾರ್ ಬೆಟ್ಟ ರವರು ಬಿಡುಗಡೆ ಮಾಡಿದರು. ದೈವಸ್ಥಾನದ...

ಸುಳ್ಯ ಅಮರ ಸಂಘಟನಾ ಸಮಿತಿಯ ವತಿಯಿಂದ ದೇವ ಶಾಲಾ ಮಕ್ಕಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯಕ್ರಮ

ಅಕ್ಟೋಬರ್ 2 ಗಾಂಧಿ ಜಯಂತಿ ದಿನಾಚರಣೆ ಅಂಗವಾಗಿ ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇವರ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ ಹಾಗೂ ಅಂಗನವಾಡಿ ಕೇಂದ್ರ ದೇವ ಇಲ್ಲಿನ ಮಕ್ಕಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಅಧ್ಯಕ್ಷರಾದ ಸುಧೀರ್ ದೇವ ವಹಿಸಿದ್ದರು, ಶ್ರೀಮತಿ ಯಶೋಧಾ...
Ad Widget

110 ಕೆ.ವಿ ‘ ಗಿಮಿಕ್’, ಇರೋ 33 ಕೆ.ವಿ. ನಿರ್ವಹಣೆಗೂ ಸಿಬ್ಬಂದಿಗಳಿಲ್ಲದೇ ಹೆಣಗಾಟ : ಕತ್ತಲಿನೆಡೆಗೆ ಸುಳ್ಯದ ಜನತೆ

(ಸುದೀಪ್ ರಾಜ್ ಮುಳ್ಯ) ಸುಳ್ಯ: ಮಲೆನಾಡಿನ ಹೆಬ್ಬಾಗಿಲು ಸುಳ್ಯಕ್ಕೆ ಸುಸಜ್ಜಿತ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂಬ ರಾಜಕಾರಣಿಗಳ ಭರವಸೆ ದಶಕಗಳಿಂದ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿದೆ. ಚುನಾವಣೆಗಳು ಬಂದಾಗಲೆಲ್ಲ ರಾಜಕೀಯ ಪಕ್ಷಗಳಿಗೆ ಮತ ಸೆಳೆಯುವ ಪ್ರಮುಖ ‘ಆಹಾರ’ವಾಗುವ 110 ಕೆ.ವಿ ವಿದ್ಯುತ್ ಲೈನ್ ಕಾಮಗಾರಿ ಇಂದಿಗೂ ಆಮೆಗತಿಯಲ್ಲೇ ತೆವಳುತ್ತಿದೆ. ಪ್ರತಿ ಬಾರಿ ಗಡುವು ನೀಡುವುದು, ಬಳಿಕ ಕೈ...

ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ – ಸ್ವಚ್ಛತಾ ಅಭಿಯಾನ

ಜೇಸಿಐ ಸುಳ್ಯ ಪಯಸ್ವಿನಿ(ರಿ.) ಸುಳ್ಯ ಗಾಂಧಿ ಜಯಂತಿ ಆಚರಣೆ ಅಂಗವಾಗಿ ಸುಳ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ಕಾರ್ಯಾಗಾರ ಅ.02 ರಂದು ನಡೆಯಿತು. ಜೇಸಿಐ ಸುಳ್ಯ ಪಯಸ್ವಿನಿಯ ಘಟಕಾಧ್ಯಕ್ಷರಾದ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಲಯನ್ಸ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಲ....

ಐವರ್ನಾಡು ಗ್ರಾಮ ಪಂಚಾಯತ್ 82 ನೇ ಮಾಸಿಕ ಸ್ವಚ್ಛತಾ ಕಾರ್ಯಕ್ರಮ ಹಾಗೂ ವಿಶೇಷ ಗ್ರಾಮ ಸಭೆ

ಐವರ್ನಾಡು ಗ್ರಾಮ ಪಂಚಾಯತ್ ನ ವತಿಯಿಂದ ನಡೆಯುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ಗಾಂಧಿ ಜಯಂತಿಯ ಪ್ರಯುಕ್ತ ಅ.02 ರಂದು ಐವರ್ನಾಡು ಗ್ರಾಮ ಪಂಚಾಯತ್ ವಠಾರದಿಂದ ಪ್ರಾರಂಭವಾಗಿ ಮಡತ್ತಕಾನದವರೆಗೆ ನಡೆಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಸಿಬ್ಬಂದಿಗಳು,ಗ್ರಂಥಾಲಯ ಮೇಲ್ವಿಚಾರಕರು,ನಿಕಟಪೂರ್ವ ಸದಸ್ಯರು, ಊರಿನ ಪ್ರಮುಖರು ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ...

ಐವರ್ನಾಡು : ಯುವಶಕ್ತಿ ಸಂಘದ ನೇತೃತ್ವದಲ್ಲಿ ಬಸ್ ನಿಲ್ದಾಣ ಸ್ವಚ್ಛತೆ

ಗಾಂಧಿ ಜಯಂತಿಯ ಪ್ರಯುಕ್ತ ಯುವಶಕ್ತಿ ಸಂಘ (ರಿ ) ಐವರ್ನಾಡಿನ ವತಿಯಿಂದ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಚ್ಚಿನಡ್ಕ1& 2 ಬಸ್ಸು ತಂಗುದಾಣಗಳನ್ನು ಸ್ವಚ್ಛಗೊಳಿಸಲಾಯಿತು, ಈ ಸ್ವಚ್ಛತಾ ಕಾರ್ಯದಲ್ಲಿ ಯುವಶಕ್ತಿ ಸಂಘ ದ ಅಧ್ಯಕ್ಷರು, ಕಾರ್ಯದರ್ಶಿ ಸದಸ್ಯರು ಭಾಗವಹಿಸಿದ್ದರು.

ಗುತ್ತಿಗಾರು : ಸಿಡಿಲು ಬಡಿದು ಹಾನಿ

ಗುತ್ತಿಗಾರು ಗ್ರಾಮದ ಬಾಕಿಲ ಬಾಲಕೃಷ್ಣ ಅವರ ಮನೆ ಹಾಗೂ ಕೊಟ್ಟಿಗೆ ಬಳಿ ಸಿಡಿಲು ಬಡಿದು ಅಪಾರ ಹಾನಿ ಉಂಟಾದ ಘಟನೆ ಒ.01 ರಂದು ವರದಿಯಾಗಿದೆ. ಮನೆಯ ವಯರಿಂಗ್ ಹಾಗೂ ಉಪಕರಣಗಳು ಸಂಪೂರ್ಣ ಹಾನಿಯಾಗಿದ್ದು ಹಲವು ಕಡೆಗಳಲ್ಲಿ ಗೋಡೆ ಬಿರುಕು ಬಿಟ್ಟಿದೆ.

ಮುರುಳ್ಯ ಗ್ರಾ.ಪಂ.ನಲ್ಲಿ ಜಲ ಅರ್ಪಣ ದಿವಸ ಆಚರಣೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಜಲ ಅರ್ಪಣ ದಿವಸ ಕಾರ್ಯಕ್ರಮವನ್ನು ಅ.2ರಂದು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮ ಪಂಚಾಯತ್‌ನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ, ಸುಳ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಹಾಗೂ ಸಿಬ್ಬಂದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ...

ಗಾಂಧಿ ಜಯಂತಿ : ಸುಳ್ಯ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸುಳ್ಯ: ಗಾಂಧಿ ಜಯಂತಿ ಪ್ರಯುಕ್ತ ಅ.2ರಂದು ಸುಳ್ಯ ಸಿವಿಲ್ ನ್ಯಾಯಾಲಯ ಹಾಗೂ ವಕೀಲರ ಸಂಘದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಟಿ. ದಮಯಂತಿ ಸೋಮಯ್ಯ, ವಕೀಲರ ಸಂಘದ ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ, ವಕೀಲರು, ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಸಿವಿಲ್ ನ್ಯಾಯಾಲಯದ ಸಿಬ್ಬಂದಿಗಳು ಮತ್ತು ತಾಲೂಕು ಕಾನೂನು ಸೇವೆಗಳ...

ಇಂದಿನಿಂದ(ಅ.02 ರಿಂದ 04) ಸುಳ್ಯದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ “ಸ್ವದೇಶಿ ಆಹಾರ ಮೇಳ” ; ಸ್ವದೇಶಿ ಆಹಾರದ ಸವಿಯೊಂದಿಗೆ ಸ್ವದೇಶಿ ಸೊಗಡಿನ ಸಂಭ್ರಮ

ಸುಳ್ಯದಲ್ಲಿ ಇದೇ ಮೊದಲ ಬಾರಿಗೆ “ಸ್ವದೇಶಿ ಆಹಾರ ಮೇಳ”ವು ಇಂದಿನಿಂದ(ಅ.02) ಅ.04 ರವರೆಗೆ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಹಾಗೂ ಶಕ್ತಿ ಇವೆಂಟ್ಸ್ ಇದರ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ವಿವಿಧ ತಿಂಡಿ-ತಿನಿಸುಗಳು, ಖಾದಿ ಬಟ್ಟೆಗಳು, ಮಸಾಲಾ...
Loading posts...

All posts loaded

No more posts

error: Content is protected !!