ನಿಧನ: ಪದ್ಮಯ್ಯ ಪೆರುಮುಂಡ

ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಪೆರುಮುಂಡ ಪದ್ಮಯ್ಯ ರವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತೇಜಾವತಿ, ಪುತ್ರಿ ಸರಿತಾ ರಾಮಕೃಷ್ಣ, ಪುತ್ರರಾದ ವಿನಯ, ಸುಮಿತ್ರ, ಅಳಿಯ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಆ. 22ರಂದು ಬೆಳ್ಳಾರೆಯಲ್ಲಿ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಮತ್ತು ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ವತಿಯಿಂದ ಮಂಗಳೂರಿನ ಮಂಗಳಾ ಹಾಸ್ಪಿಟಲ್ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್ ಸಹಯೋಗದಲ್ಲಿ ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ,ವಿದ್ಯಾರ್ಥಿನಿಗಳಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆ 22ರಂದು ಬೆಳಿಗ್ಗೆ 8-30ಕ್ಕೆ ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲಿನಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು...
Ad Widget

ಬಾಳಿಲದಲ್ಲಿ ಸ್ವಸ್ತ್ಯ ಆರೋಗ್ಯ ಕ್ಲಿನಿಕ್ ಉದ್ಘಾಟನೆ

"ರೋಗ ಬಂದಮೇಲೆ ಅದಕ್ಕೆ ಔಷಧಿ ತಗೊಳ್ಳೋದಕ್ಕಿಂತ ಮುಂಚೆ ರೋಗ ಬರದೆ ಹಾಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದರೊಂದಿಗೆ ಸಮೀಪದ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳಿಗೆ ಆರೋಗ್ಯ ಶಿಕ್ಷಣ ಮಾಹಿತಿ ಕೂಡ ನೀಡಬೇಕು. ಈ ನಿಟ್ಟಿನಲ್ಲಿ ನುರಿತ,ಅನುಭವಿ ವೈದ್ಯರಾದ ಡಾ. ಗಾನಶ್ರೀ ಅವರ ಸ್ವಸ್ತಿಯ ಆರೋಗ್ಯ...

ಸುಳ್ಯ-ಪುತ್ತೂರು ಭಾಗದಲ್ಲಿ ಕಾಡಾನೆ ಹಾವಳಿ: ರೇಡಿಯೋ ಕಾಲರ್ ಅಳವಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳಿಗೆ ಅನಿಂದಿತ್ ಮನವಿ

ಸುಳ್ಯ ಮತ್ತು ಪುತ್ತೂರು ತಾಲೂಕುಗಳ ವ್ಯಾಪ್ತಿಯಲ್ಲಿ ದಿನೇದಿನೇ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ರೈತರು ಹಾಗೂ ಗ್ರಾಮೀಣ ಪ್ರದೇಶದ ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕೃಷಿ ಬೆಳೆಗಳಿಗೆ ಹಾನಿ ಹಾಗೂ ಮಾನವ ಜೀವಕ್ಕೆ ಎದುರಾಗುತ್ತಿರುವ ಅಪಾಯದ ಹಿನ್ನೆಲೆಯಲ್ಲಿ, ಸಮಸ್ಯೆಗೆ ವೈಜ್ಞಾನಿಕ ಹಾಗೂ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಸುಳ್ಯದ ಯುವ ಲೇಖಕ ಹಾಗೂ ಇಂಡಿಪೆಂಡೆಂಟ್ ಡಾಕ್ಯುಮೆಂಟೇರಿಯನ್ ಅನಿಂದಿತ್...

ಗುತ್ತಿಗಾರು : ನಾಳೆ(ಆ.22) ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಮತ್ತು ಸುಳ್ಯ ತಾಲೂಕು, ಜೆಸಿಐ ಪಂಜ ಪಂಚಶ್ರೀ ನೇತ್ರಾವತಿ(ಪ್ರಾಂತ್ಯ 'ಬಿ') ವಲಯ-15 ಪಂಜ, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಾದರಿ ಒಕ್ಕೂಟ(ರಿ.) ಗುತ್ತಿಗಾರು, ಲಯನ್ಸ್ ಕ್ಲಬ್ ಗುತ್ತಿಗಾರು, ಲಯನ್ಸ್...

ಮರ್ದೂರಡ್ಕ : ಹಿರಿಯ ವಿದ್ಯಾರ್ಥಿ ಸಂಘ ರಚನೆ – ಅಧ್ಯಕ್ಷರಾಗಿ ಮನೋಜ್ ಅರಗಿಣಿ, ಕೋಶಾಧಿಕಾರಿಯಾಗಿ ದೀಕ್ಷಿತ್ ಪಂಜಿಮುಂಡ, ಕಾರ್ಯದರ್ಶಿಯಾಗಿ ಸತೀಶ್ ಪಟ್ಲದಮೂಲೆ

ಮರ್ದೂರಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ರಚಿಸಲಾಯಿತು. ಮನೋಜ್ ಅರಗಿಣಿ ಅಧ್ಯಕ್ಷರಾಗಿ ಆಯ್ಕೆಯಾದರು. ಕೋಶಾಧಿಕಾರಿಯಾಗಿ ದೀಕ್ಷಿತ್ ಪಂಜಿಮುಂಡ, ಕಾರ್ಯದರ್ಶಿಯಾಗಿ ಸತೀಶ್ ಪಟ್ಲದಮೂಲೆ, ಉಪಾಧ್ಯಕ್ಷರುಗಳಾಗಿ ಸುಂದರಿ ಮರ್ದೂರಡ್ಕ ಹಾಗೂ ರಮೇಶ ಮರ್ದೂರಡ್ಕ, ಉಪ ಕೋಶಾಧಿಕಾರಿಯಾಗಿ ಗಿರೀಶ್ ಅರಗಿಣಿ, ಜೊತೆ ಕಾರ್ಯದರ್ಶಿಗಳಾಗಿ ದೀಕ್ಷಿತ ಮರ್ದೂರಡ್ಕ ಹಾಗೂ ಪ್ರಸಾದ್ ರಾಜಮಾರು ನಿರ್ದೇಶಕರುಗಳಾಗಿ ಗುರುಪ್ರಸಾದ್ ಪೊಟ್ರೆ, ಅಶ್ವಥ್...

ಇಂದಿನ(ಆಗಸ್ಟ್ 21) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕಾಳುಮೆಣಸಿನ ಚೇತರಿಕೆ ಹಾದಿ ಮುಂದುವರಿಕೆ ; ನಿನ್ನೆಯ ಬಲಿಷ್ಠ ದರದಲ್ಲೇ ಗಟ್ಟಿಯಾಗಿ ನಿಂತ ಅಡಿಕೆ-ರಬ್ಬರ್..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 21 ಆಗಸ್ಟ್ 2026ವಾರ : ಶುಕ್ರವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 21) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ವಿದ್ಯಾಮಾತಾ ಪುತ್ತೂರು – GPSTR, PSTR ಹಾಗೂ HSTR ಸರಕಾರಿ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಚಿತ ತರಬೇತಿ ಕಾರ್ಯಾಗಾರ..!

ಪುತ್ತೂರು : ಕರ್ನಾಟಕ ಶಿಕ್ಷಣ ಇಲಾಖೆಯು ಶೀಘ್ರದಲ್ಲೇ 15,000 ಸರಕಾರಿ ಶಿಕ್ಷಕರ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತಿದೆ. ಶಿಕ್ಷಕರಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಒದಗಿಸಲು ಪುತ್ತೂರಿನ ಉನ್ನತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯಾದ ‘ವಿದ್ಯಾಮಾತಾ ಅಕಾಡೆಮಿ' ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳ ಪೂರ್ವ ಸಿದ್ಧತೆಗಾಗಿ ದಿನಾಂಕ 23.08.2026ರ ಭಾನುವಾರ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ...

ಸುಳ್ಯದಲ್ಲಿ ಶುದ್ಧ ಸಸ್ಯಾಹಾರಿ ಹೋಟೆಲ್ ಮಹಾವೀರ ಪ್ರಾರಂಭ

ಸುಳ್ಯದ ಜೂನಿಯರ್ ಕಾಲೇಜು ಬಳಿಯ ಸದರ್ನ್ ರೆಸಿಡೆನ್ಸಿಯಲ್ಲಿ ಶುದ್ಧ ಸಸ್ಯಾಹಾರಿ ಹೋಟೆಲ್ ಮಹಾವೀರ ಆ.20 ರಂದು ಪ್ರಾರಂಭಗೊಂಡಿತು.

ಕಸ್ತೂರಿರಂಗನ್ ವರದಿ ವಿರುದ್ಧ ಹೋರಾಟಕ್ಕೆ ಜಿಲ್ಲಾಮಟ್ಟದ ಸಭೆ, ರೈತರ ಒಗ್ಗಟ್ಟು : ಸರ್ಕಾರಕ್ಕೆ ಹಂತ ಹಂತದ ಪ್ರತಿಭಟನೆಯ ಎಚ್ಚರಿಕೆ

ಸುಬ್ರಹ್ಮಣ್ಯ, ಆಗಸ್ಟ್ 20 : ಕಸ್ತೂರಿರಂಗನ್ ಅಂತಿಮ ವರದಿಯ ಕರಡು ಪ್ರತಿಗೆ ಒಕ್ಕೊರಲಿನಿಂದ ಆಕ್ಷೇಪಣೆ ಸಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳ ಬಾಧಿತ ಪ್ರದೇಶಗಳ ರೈತರು ಹಾಗೂ ಗ್ರಾಮಸ್ಥರ ಜಿಲ್ಲಾ ಮಟ್ಟದ ಸಭೆ ಗುರುವಾರ ಸುಬ್ರಹ್ಮಣ್ಯದಲ್ಲಿ ನಡೆಯಿತು. ಬೆಳ್ತಂಗಡಿ, ಕಡಬ,...
Loading posts...

All posts loaded

No more posts

error: Content is protected !!