ಸುಳ್ಯ ಅಮರ ಸಂಘಟನಾ ಸಮಿತಿಯ ವತಿಯಿಂದ ದೇವ ಶಾಲಾ ಮಕ್ಕಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯಕ್ರಮ

ಅಕ್ಟೋಬರ್ 2 ಗಾಂಧಿ ಜಯಂತಿ ದಿನಾಚರಣೆ ಅಂಗವಾಗಿ ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇವರ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ ಹಾಗೂ ಅಂಗನವಾಡಿ ಕೇಂದ್ರ ದೇವ ಇಲ್ಲಿನ ಮಕ್ಕಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಅಧ್ಯಕ್ಷರಾದ ಸುಧೀರ್ ದೇವ ವಹಿಸಿದ್ದರು, ಶ್ರೀಮತಿ ಯಶೋಧಾ ಪಾರೆಪ್ಪಾಡಿ ವಿಧ್ಯಾಭಿಮಾನಿಗಳು ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

. . . . . . .

ಮುಖ್ಯ ಅತಿಥಿಗಳಾಗಿ ಶ್ರೀಮತಿ ಹರಿಣಾಕ್ಷಿ ಡಿ, ಮುಖ್ಯ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ, ಕಮಲ ಕೆ ಅಧ್ಯಕ್ಷರು ಎಸ್.ಡಿ.ಎಂ.ಸಿ ದೇವ ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಘದ ನಿರ್ದೇಶಕರಾದ ಹರ್ಷಿತ್ ದಾತಡ್ಕ, ಶಿವಪ್ರಸಾದ್ ದೊಡ್ಡಿಹಿತ್ಲು ಇವರು ಉಪಸ್ಥಿತರಿದ್ದರು.

ಜಯಪ್ರಸಾದ್ ಸಂಕೇಶ ಸ್ವಾಗತಿಸಿ, ಕೀರ್ತನ್ ಪಾರೆ ವಂದನಾರ್ಪಣೆ ಮಾಡಿದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading