ಮೇವು ಕೊರತೆಯಿಂದ ಕಂಗಾಲಾದ ರೈತರಿಗೆ ಉಚಿತ ಮೇವಿನ ಬೀಜ ವಿತರಣೆ

ಸುಳ್ಯ: ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಮೇವು ಒದಗಿಸಲು ಕಷ್ಟಪಡುತ್ತಿರುವ ರೈತರಿಗೆ ಸುವರ್ಣಾವಕಾಶವಿದ್ದು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಉಚಿತವಾಗಿ ಮೇವಿನ ಬೀಜದ ಕಿರು ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.

. . . . . . . . .

ತಾಲೂಕಿನ ವಿವಿಧ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಜಾನುವಾರುಗಳ ಮೇವಿನ ಕೊರತೆಯನ್ನು ನೀಗಿಸುವ ಉದ್ದೇಶದಿಂದ ರೈತರಿಗೆ ಉಚಿತವಾಗಿ ಮೇವಿನ ಬೀಜಗಳನ್ನು ನೀಡಲಾಗುತ್ತಿದೆ. ಬಹು ಕಟಾವಿನ ಮೇವಿನ ಜೋಳದ Hybrid Fodder Sorghum Multicut (5 ಕೆ.ಜಿ.) ಹಾಗೂ ಏಕಕಟಾವಿನ ಮೇವಿನ ಮೆಕ್ಕೆಜೋಳದ African Tall Maize (6 ಕೆ.ಜಿ.) ತಳಿಯ ಬೀಜಗಳು ಲಭ್ಯವಿವೆ.

. . . . . . .

ಅಗತ್ಯ ದಾಖಲೆಗಳು:ಮೇವಿನ ಬೀಜದ ಕಿರು ಪೊಟ್ಟಣಗಳನ್ನು ಪಡೆಯಲು ರೈತರು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು. 1. ಜಾನುವಾರುಗಳನ್ನು ಹೊಂದಿರಬೇಕು. 2. ಆಧಾರ್ ಕಾರ್ಡ್. 3. ರೈತರ FRUITS ನೋಂದಣಿ ಸಂಖ್ಯೆ. 4. ಆರ್‌ಟಿಸಿ ಪ್ರತಿ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ಗ್ರಾಮದ ಪಶುಸಖಿಯರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading