ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಅಧಿಕಾರ ಹಸ್ತಾಂತರ

ಸುಬ್ರಹ್ಮಣ್ಯ ಅಕ್ಟೋಬರ್ 27 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್ ಇದರ ಅಧಿಕಾರ ಹಸ್ತಾಂತರ ಕಾರ್ಯಕ್ರಮ ರವಿವಾರ ಕುಮಾರಧಾರ ದೋಣಿಮಕ್ಕಿ ಕುಕ್ಕೆ ಶ್ರೀ ಸಭಾಂಗಣದಲ್ಲಿ ದಲ್ಲಿ ನಡೆಯಿತು.

. . . . . . . . .

ಸಮಾರಂಭದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಅಧ್ಯಕ್ಷ ವೆಂಕಟೇಶ ಎಚ್ ಎಲ್ ವಹಿಸಿದ್ದರು. ಅವರು ಮಾತನಾಡುತ್ತಾ “ಸುಬ್ರಹ್ಮಣ್ಯದಲ್ಲಿ ಸೀನಿಯರ್ ಚೇಂಬರ್ ಸಂಸ್ಥೆಯು ತನ್ನದೇ ಆದ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಾ ಬಂದಿದೆ. ಪ್ರತಿ ವಾರ ರವಿವಾರದಂದು ಕುಮಾರಧಾರ ಸ್ಥಾನಗಟ್ಟ, ಕುಲಕುಂದ ಆಸು ಪಾಸು ಪ್ರದೇಶ,ಮುಖ್ಯ ರಸ್ತೆ ಆದಿ ಸುಬ್ರಹ್ಮಣ್ಯ, ಹೊಸಳ್ಳಿಕೆ, ಕೈಕಂಬ ಮುಂತಾದ ಕಡೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಿರಂತರವಾಗಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟಿನ ಸಹಯೋಗದೊಂದಿಗೆ ಮಾಡುತ್ತಾ ಬಂದಿದೆ. ಈ ಕಾರ್ಯಕ್ಕೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವವಾಗಿದೆ. ಇದರ ಉದ್ದೇಶ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಕಡ್ಡಿ, ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಬಾಟಲ್,ಹಾಗೂ ತಟ್ಟೆಗಳನ್ನು  ಎಲ್ಲೆಂದರಲ್ಲಿ ಎಸೆಯಬಾರದು ಎಂಬುದಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಈ ಕಾರ್ಯಕ್ರಮವನ್ನು ಮುಂದಿನ ಅಧ್ಯಕ್ಷರು ನಿರಂತರವಾಗಿ ನಡೆಸಲಿ ನಾವೆಲ್ಲರೂ ಅವರೊಂದಿಗೆ ಕೈಜೋಡಿಸೋಣ” ಎಂದರು.

. . . . . . .

ತದನಂತರ ನೂತನ ಅಧ್ಯಕ್ಷ ಮಾಧವ ದೇವರ ಗದ್ದೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಹಾಗೆಯೇ ಕಾರ್ಯದರ್ಶಿ ಮೋಹನ್ ದಾಸ್ ರೈ, ಕೋಶಾಧಿಕಾರಿ ಗೋಪಾಲ ಎಣ್ಣೆಮಜಲ್ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ಮಾಧವ ದೇವರ ಗದ್ದೆ ಅವರು “ಮುಂದಿನ ದಿನಗಳಲ್ಲಿ ಸೀನಿಯರ್ ಚೇಂಬರ್ ವತಿಯಿಂದ ನಡೆಯುವ ಎಲ್ಲಾ ಸಮಾಜಮುಖಿ ಉಪಯುಕ್ತ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಕೈಜೋಡಿಸಬೇಕು” ಎಂದರು.

ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಪೂರ್ವ ಅಧ್ಯಕ್ಷ ಡಾ. ರವಿ ಕಕ್ಕೆಪದವು ಮಾತನಾಡಿ “ಸುಬ್ರಹ್ಮಣ್ಯದಲ್ಲಿ ಸೀನಿಯರ್ ಚೇಂಬರ್ ಬಡ ಬಗ್ಗರಿಗೆ, ದೀನ ದಲಿತರಿಗೆ, ಅಶಕ್ತರಿಗೆ ಸಹಾಯಧನ ದೊಂದಿಗೆ ಸೂರ್ ಇಲ್ಲದವರಿಗೆ ಸೂರನ್ನು ನೀಡುತ್ತಾ ಬಂದಿದೆ. ಇನ್ನು ಮುಂದೆಯೂ ಇಂತಹ ಉತ್ತಮ ಕಾರ್ಯಗಳು ಎಲ್ಲರ ಸಹಕಾರದೊಂದಿಗೆ ನಿರಂತರವಾಗಿ ನಡೆಯುತ್ತದೆ” ಎಂದು ತಿಳಿಸಿದರು.

ವೇದಿಕೆಯಲ್ಲಿ ಸುಬ್ರಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ನಿರ್ದೇಶಕ ಹಾಗೂ ರೋಟರಿ ಸೇನಾಧಿಕಾರಿ ಚಂದ್ರಶೇಖರ ನಾಯರ್ ಉಪಸ್ಥಿತರಿದ್ದು ನೂತನ ತಂಡಕ್ಕೆ ಶುಭವನ್ನು ಹಾರೈಸಿದರು.

ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಮೋನಪ್ಪ ದೋಣಿಮಕ್ಕಿ,ಪ್ರಭಾಕರ ಪಡ್ರೆ, ರೋಹಿತ್ ಬಿಬಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರುಗಳಾಗಿ ಉದಯಕುಮಾರ್ ಶೆಟ್ಟಿ ಹಾಗೂ ದಿನೇಶ್ ಕಳಿಗೆ ಇವರುಗಳನ್ನು ಸೇರಿಸಿಕೊಳ್ಳಲಾಯಿತು. ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದಲ್ಲಿ ವೆಂಕಟೇಶ್ ಎಚ್ ಎಲ್ ಸ್ವಾಗತಿಸಿ, ಮೋನಪ್ಪ ಡಿ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading