ಪಿಪಿಎಲ್‌ನಿಂದ ಲೇಡಿ ಗೋಷನ್ ಆಸ್ಪತ್ರೆಗೆ ವೈದ್ಯಕೀಯ ಉಪಕರಣ ಹಸ್ತಾಂತರ: 7 ಮಂದಿಗೆ ಕೃತಕ ಕಾಲು, 3 ಮಂದಿಗೆ ಶ್ರವಣಸಾಧನ ವಿತರಣೆ

ಮಂಗಳೂರು: ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ (PPL) ಸಂಸ್ಥೆಯ ‘ಪಿಪಿಎಲ್ ಕೇರ್ಸ್’ (PPL Cares) ಸಿಎಸ್‌ಆರ್ ಯೋಜನೆಯಡಿ 2026–27ನೇ ಸಾಲಿನ ಅಂಗವಾಗಿ ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ಹಾಗೂ ಅಗತ್ಯವುಳ್ಳ ಫಲಾನುಭವಿಗಳಿಗೆ ಕೃತಕ ಕಾಲು ಮತ್ತು ಶ್ರವಣಸಾಧನಗಳನ್ನು ವಿತರಿಸುವ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಯಿತು.

. . . . . . . . .

ಕಾರ್ಯಕ್ರಮದಲ್ಲಿ ಒಟ್ಟು 7 ಮಂದಿಗೆ ಕೃತಕ ಕಾಲುಗಳು, 3 ಮಂದಿಗೆ ಶ್ರವಣಸಾಧನಗಳು ಹಾಗೂ ಲೇಡಿ ಗೋಷನ್ ಆಸ್ಪತ್ರೆಗೆ 10 ಅತ್ಯಾಧುನಿಕ ವೈದ್ಯಕೀಯ ಮಾನಿಟರ್‌ಗಳನ್ನು ಹಸ್ತಾಂತರಿಸಲಾಯಿತು.

. . . . . . .

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, “ಪಿಪಿಎಲ್ ಸಂಸ್ಥೆಯ ಈ ಸಮಾಜಮುಖಿ ಕಾರ್ಯ ಅತ್ಯಂತ ಹೃದಯಸ್ಪರ್ಶಿಯಾಗಿದೆ. ದಿವ್ಯಾಂಗರಿಗೆ ನವಜೀವನ ಹಾಗೂ ಸ್ವಾವಲಂಬನೆ ನೀಡುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿವೆ,” ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಲೇಡಿ ಗೋಷನ್ ಆಸ್ಪತ್ರೆಯ ಮುಖ್ಯಸ್ಥ ಡಾ. ದೇವಿಪ್ರಸಾದ್, ಪಿಪಿಎಲ್ ಸಂಸ್ಥೆಯ ಸಿಎಚ್‌ಆರ್‌ಒ ರಜನೀಶ್ ಭಾರದ್ವಾಜ್, ಸಿಎಂಒ ಷಣ್ಮುಖಂ ಪಿ. ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಉಪಸ್ಥಿತರಿದ್ದರು.

ಪಿಪಿಎಲ್ ಸಂಸ್ಥೆಯ ಎಚ್‌ಆರ್ ಮತ್ತು ಐಆರ್ ಮುಖ್ಯಸ್ಥ ಚೇತನ್ ಮೆಂಡೋನ್ಸಾ ಸ್ವಾಗತಿಸಿದರು. ಜೆಜಿಎಂ (ವೈದ್ಯಕೀಯ ಸೇವೆಗಳು) ಡಾ. ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿವೇಕ್ ಬಿ. ಕೋಟ್ಯಾನ್ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading