ಸುಳ್ಯದ ಸಿಂಧೂರ ಶೋರೂಂನಲ್ಲಿ ವಿಸ್ತ್ರತ ಮಳಿಗೆ ಉದ್ಘಾಟನೆ – ಖ್ಯಾತ ತುಳು ಕಲಾವಿದರ ಭೇಟಿ – ಒಂದು ರೂ. ಆಫರ್ ನಲ್ಲಿ ಖರೀದಿಗೆ ಮುಗಿಬಿದ್ದ ಗ್ರಾಹಕರು

ಸುಳ್ಯದ ಸಿಂಧೂರ ಶೋರೂಂನಲ್ಲಿ ವಿಸ್ತ್ರತ ಮಳಿಗೆ ಉದ್ಘಾಟನೆ ಅಂಗವಾಗಿ ತುಳು ದಿಗ್ಗಜರ ಭೇಟಿ ನಡೆಯಿತು. ಇದರ ಅಂಗವಾಗಿ ನಡೆದ ಬಿಗ್ ಫೆಸ್ಟಿವಲ್ ಸೇಲ್ ಮತ್ತು ಒಂದು ರೂಪಾಯಿಗೆ ಸಾರಿ,ಟಾಪ್, ಶರ್ಟ್ ಖರೀದಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.

. . . . . . . . .

ಭಾರತದಲ್ಲೇ ಅತೀ ಕಡಿಮೆ ಬೆಲೆಗೆ ಬಟ್ಟೆಗಳು ದೊರೆಯುವ ಏಕೈಕ ಮಳಿಗೆ ಎಂಬ ಗ್ರಾಹಕರನ್ನು ಆಕರ್ಷಿಸುತ್ತಿರುವ ಸಿಂಧೂರ ಶೋರೂಂಗೆ ತುಳುನಾಡಿನ ಖ್ಯಾತ ನಟರಾದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್, ನವರಸ ರಾಜ ಭೋಜರಾಜ್ ವಾಮಂಜೂರು, ಹಾಸ್ಯ ನಟ ಸಾಯಿಕೃಷ್ಣ ಕುಡ್ಲ ಆಗಮಿಸಿ ವಿಸ್ತ್ರತ ಮಳಿಗೆ ಉದ್ಘಾಟಿಸಿದರು.

. . . . . . .

ಮುಗಿಬಿದ್ದ ಜನ : ಒಂದು ರೂ ಸಾರಿ, ಟಾಪ್, ಶರ್ಟ್ ಖರೀದಿಯ ಆಫರ್ ಗೆ ಜನ ಆಕರ್ಷಿತರಾಗಿ ಮುಗಿಬಿದ್ದ ಘಟನೆ ನಡೆಯಿತು. 300ಕ್ಕೂ ಮಿಕ್ಕಿ ಗ್ರಾಹಕರು ಒಂದು ರೂ. ಗೆ ಸಾರಿ ,ಶರ್ಟ್, ಟಾಪ್ ಖರೀದಿಸಿದರು.

ಗ್ರಾಹಕರಿಗೆ ವಿಶೇಷ ಕೊಡುಗೆಗಳು : ಫೆಸ್ಟಿವಲ್ ಸೇಲ್ ಪ್ರಯುಕ್ತ ಎರಡು ಡ್ರೆಸ್ ಖರೀದಿಗೆ ಒಂದು ಡ್ರೆಸ್ ಉಚಿತವಾಗಿ ಗ್ರಾಹಕರಿಗೆ ಸಿಗುತ್ತಿದೆ. ರೂ.499ಕ್ಕಿಂತ ಹೆಚ್ಚಿನ ಖರೀದಿಗೆ ಸ್ಕ್ರಾಚ್ ಕಾರ್ಡ್ ಹಾಗೂ ಲಕ್ಕಿ ಕೂಪನ್ ಪಡೆಯುವ ಅವಕಾಶವಿದ್ದು, ರೂ.10,000ದವರೆಗೆ ಕ್ಯಾಶ್‌ಬ್ಯಾಕ್ ಗೆಲ್ಲುವ ಅವಕಾಶವೂ ಇದೆ. ಬಂಪರ್ ಬಹುಮಾನ, ಡೈಲಿ ಡ್ರಾ ಹಾಗೂ ಆಯ್ದ ಕೊಡುಗೆಗಳೂ ಗ್ರಾಹಕರಿಗಾಗಿ ಇರಲಿವೆ.

ಸೀರೆ, ಶರ್ಟ್, ಟಾಪ್ಸ್ ಸೇರಿದಂತೆ ವಿವಿಧ ಬಗೆಯ ಉಡುಪುಗಳು, ರೇಷ್ಮೆ ವಸ್ತ್ರಗಳು, ರೆಡಿಮೇಡ್ ಬಟ್ಟೆಗಳು ಹಾಗೂ ಮದುವೆ ಸಮಾರಂಭಗಳ ವಿಶೇಷ ಕಲೆಕ್ಷನ್‌ಗಳು ಇಲ್ಲಿ ಲಭ್ಯವಿವೆ. ಕುಟುಂಬದ ಎಲ್ಲ ಸದಸ್ಯರಿಗೂ ಅಗತ್ಯವಿರುವ ಉಡುಪುಗಳನ್ನು ಒಂದೇ ಸೂರಿನಡಿ ಒದಗಿಸುವ ಸಂಪೂರ್ಣ ಫ್ಯಾಮಿಲಿ ಶೋರೂಂ ಆಗಿ ಸಿಂಧೂರ ಗುರುತಿಸಿಕೊಂಡಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading