ರಾಗಪಯಣ ಸೀಸನ್-2 ಗ್ರ್ಯಾಂಡ್ ಫಿನಾಲೆ: ತುಮಕೂರಿನ ರಾಧಿಕಾ ವಿನ್ನರ್

ಬೆಂಗಳೂರು: ಖ್ಯಾತ ಚಲನಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಹಾಗೂ ನಿರ್ದೇಶಕ ವಿ. ಮನೋಹರ್ ಅವರಿಗೆ ಅರ್ಪಿತವಾದ ನವೀನ ಗಾಯನ ಸ್ಪರ್ಧೆಯ ಕಾರ್ಯಕ್ರಮ ‘ರಾಗಪಯಣ ಸೀಸನ್-2’ರ ಗ್ರ್ಯಾಂಡ್ ಫಿನಾಲೆ ಅ. 25ರಂದು ಬೆಂಗಳೂರಿನ ಬಸವನಗುಡಿ ಸಮೀಪದ ಶಾಸ್ತ್ರೀನಗರದ ಆರೆಂಜ್ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.

. . . . . . . . .

ಚಲನಚಿತ್ರ ಕಾರ್ಯಕಾರಿ ನಿರ್ಮಾಪಕ, ನಟ, ಗಾಯಕ ಹಾಗೂ ರಾಗಪಯಣ ಸಂಸ್ಥಾಪಕ ಅಧ್ಯಕ್ಷ ರಾಗ್ವೀರ್ ಸುರಾಗ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಸ್ವತಃ ವಿ. ಮನೋಹರ್ ಅವರು ಆಗಮಿಸಿ ಉದ್ಘಾಟಿಸಿದ್ದು ವಿಶೇಷವಾಗಿತ್ತು.

. . . . . . .

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಡಾ. ಶಿವಕುಮಾರ್ ನಾಗರ ನವಿಲೆ, ತೀರ್ಪುಗಾರರಾದ ಸುರಾಗ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ, ಸಂಗೀತ ನಿರ್ದೇಶಕ, ಜೀ ಕನ್ನಡ ಸರಿಗಮಪ ಗ್ರ್ಯಾಂಡ್ ಜ್ಯೂರಿ ಹಾಗೂ ಹಿನ್ನೆಲೆ ಗಾಯಕ ರಾಜಶೇಖರ ನುಲಿ, ನಟ ಹಾಗೂ ಚಲನಚಿತ್ರ ನಿರ್ಮಾಪಕ ಬಿ.ಎಸ್.ಕೆ. ಚಿರಾಗ್ ಗೌಡ, ಚಲನಚಿತ್ರ ನಿರ್ಮಾಪಕ ನಾಗರಾಜ್, ನಟ ವೈಭವ್ ನಾಗರಾಜ್, ಆನೇಕಲ್ ಮುನಿಯಪ್ಪ, ಶಿವಮೊಗ್ಗ ರಾಮಣ್ಣ, ಆರೆಂಜ್ ಸ್ಟುಡಿಯೋ ಸಂಸ್ಥಾಪಕ ಸರವಣ, ಅಕ್ಷರ ಆಡಿಟೋರಿಯಂನ ಗೌರಿ ಪ್ರಸಾದ್, ಯಕ್ಷಿತ್ ರಾಯಲ್ ಅಕಾಡೆಮಿಯ ದೀಪಾ, ಗಾಯಕಿ ವನಿತಾ ಹಿರೇಮಠ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ರಾಗಪಯಣದ ವ್ಯವಸ್ಥಾಪಕ ಸದಸ್ಯರು ಹಾಗೂ ಗಾಯಕರಾದ ಆಂಜನೇಯ ಮೂರ್ತಿ ಮತ್ತು ಕಿರಣ್ ಕುಮಾರ್ ಆನೇಕಲ್, ಸದಸ್ಯೆ ಚೈತ್ರ ಆರ್.ಪಿ. ಹಾಗೂ ನಿರೂಪಕಿ ಮಮತಾ ಎಚ್. ಹಾಳೆಮಜಲು ಉಪಸ್ಥಿತರಿದ್ದರು.

ರಾಗ್ವೀರ್ ಸುರಾಗ ಅವರು ತಮ್ಮ ತಂದೆ ಎಂ. ಉಗ್ರಪ್ಪ ಅವರ ಆಶೀರ್ವಾದ ಹಾಗೂ ಗುರುಗಳಾದ ರಾಜಶೇಖರ ನುಲಿ ಅವರ ಸಹಕಾರದಿಂದ ರಾಗಪಯಣ ಸಂಸ್ಥೆಯನ್ನು ರೂಪಿಸಿದ್ದಾರೆ. ಹೊಸ ಪ್ರತಿಭೆಗಳಿಗೆ ನವೀನ ಹಾಗೂ ಸುರಕ್ಷಿತ ವೇದಿಕೆ ಕಲ್ಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದ ಐವರು ಸ್ಪರ್ಧಿಗಳು ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ತುಮಕೂರಿನ ರಾಧಿಕಾ ಅವರು ವಿಜೇತರಾಗಿ ಹೊರಹೊಮ್ಮಿದರೆ, ಚಿಕ್ಕಮಗಳೂರಿನ ದ್ಯುತಿ ರಾಜಶೇಖರ್ ಪ್ರಥಮ ರನ್ನರ್ ಅಪ್ ಹಾಗೂ ಮೈಸೂರಿನ ಪ್ರವೀಣ್ ಡಿಸಿಎಸ್ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದರು. ಬೆಂಗಳೂರಿನ ಕುಮುದಿನಿ ಚೌಹಾಣ್ ಮತ್ತು ಮಂಡ್ಯದ ಮಮತಾ ಅವರು ಸಮಾಧಾನಕರ ಬಹುಮಾನ ಗಳಿಸಿದರು.

ಯುವ ಹಾಗೂ ಉದಯೋನ್ಮುಖ ಗಾಯಕರಿಗೆ ಅವಕಾಶ ಕಲ್ಪಿಸುತ್ತಿರುವ ರಾಗಪಯಣ ತಂಡವು ಇದೀಗ ಮೂರನೇ ಸೀಸನ್ ಆಯೋಜಿಸಲು ಸಜ್ಜಾಗಿದೆ. ಹೊಸ ಪ್ರತಿಭೆಗಳನ್ನು ಗುರುತಿಸಿ, ಸಂಗೀತ ಕ್ಷೇತ್ರದಲ್ಲಿ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಸಂಸ್ಥೆಯ ಮುಂದಿನ ಪ್ರಯಾಣ ಮುಂದುವರಿಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading