ಸಮಯದ ಕೊರತೆ – ದಸರಾ ಶೋಭಾಯಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ 6 ಸ್ತಬ್ಧಚಿತ್ರ ತಂಡಗಳು

ಸುಳ್ಯ: ಸುಳ್ಯ ದಸರಾ ಶೋಭಾಯಾತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದ ಗಜಕೇಸರಿ ನಡುಬೈಲು, ಡಿಜೆ ಫ್ರೆಂಡ್ಸ್ ಸುಳ್ಯ, ಕಾರ್ಗಿಲ್ ಬಾಯ್ಸ್ ಜಟ್ಟಿಪಳ್ಳ, ಜಟಾಯು ಫ್ರೆಂಡ್ಸ್ ಸುಳ್ಯ, ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಅಲೆಟ್ಟಿ ಹಾಗೂ ಆಗಸ್ತ್ಯ ವಿಷ್ಣು ಸರ್ಕಲ್ ಸುಳ್ಯ ಇವರ ನೇತೃತ್ವದ ಸ್ತಬ್ದಚಿತ್ರಗಳು ಜನರನ್ನು ಆಕರ್ಷಿಸಿತ್ತು. ಆದರೇ ಈ ವರ್ಷದ ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನ ನೀಡದಿರಲು ನಿರ್ಧರಿಸಿವೆ.

. . . . . . . . .

ಕಳೆದ ವರ್ಷದ ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನದ ವೇಳೆ ಉಂಟಾದ ಅನಾನುಕೂಲ ಹಾಗೂ ಈ ವರ್ಷದ ಅ. 24ರಂದು ನಡೆಯಲಿರುವ ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ರಾತ್ರಿ 7ರಿಂದ 10.30ರವರೆಗೆ ಮಾತ್ರ ಕಾಲಮಿತಿ ನಿಗದಿಪಡಿಸಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ. ನಿಗದಿತ ಸಮಯದೊಳಗೆ ಸ್ತಬ್ಧಚಿತ್ರಗಳ ಪ್ರದರ್ಶನ ನೀಡಲು ಅನಾನುಕೂಲವಾಗುವುದರಿಂದ ಈ ಬಾರಿ ಪ್ರದರ್ಶನದಿಂದ ಹಿಂದೆ ಸರಿಯಲು ನಿರ್ಧರಿಸಲಾಗಿದೆ ಎಂದು ತಂಡಗಳ ಅಧ್ಯಕ್ಷರು ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading