ರಾಜೀವ್ ಗಾಂಧಿ ಹಾಗೂ ದೇವರಾಜ ಅರಸ್ ಜನ್ಮದಿನಾಚರಣೆ : ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವ್ಯಾಪ್ತಿಯ ಸುಳ್ಯ ವಿಧಾನಸಭಾ ಕ್ಷೇತ್ರ ಹಾಗೂ ಕಡಬ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಗಳ ವತಿಯಿಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸ್ ಅವರ ಜನ್ಮದಿನಾಚರಣೆಯ ಅಂಗವಾಗಿ ಇಂದು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ:11-08-2026 ಮಂಗಳವಾರ*01,🐏ಮೇಷರಾಶಿ🐏*📃,ಇಂದು ನಿಮ್ಮ ರಾಶಿಯವರು ಕೆಲಸದಲ್ಲಿ ಪ್ರಭುದ್ಧತೆ ಮೆರೆಯುತ್ತಾರೆ. ಶಿಸ್ತು ಮತ್ತು ಸಂಯಮದಿಂದ ಜೀವನ ಕಟ್ಟಿಕೊಳ್ಳುವ ಪ್ರಯತ್ನ ಸಾಗಲಿ. ನಿಮ್ಮಲ್ಲಿನ ವಿಶೇಷ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುವುದು ನಿಶ್ಚಿತ.ಪ್ರೀತಿಯಲ್ಲಿ ಸಂತೋಷವಾಗಿರುವುದು ಹೇಗೆ ಎಂದು ತಿಳಿಯಿರಿ,ಗಮನಿಸಿ:-ಸ್ವಯಂಭರವಸೆಯನ್ನು ಅಭ್ಯಾಸಮಾಡಿಕೊಳ್ಳಿ,ಪರಿಹಾರ:-ಗಣಪತಿಗೆದೇವರಿಗೆ ಗರಿಕೆ ನೀಡಿ,*02,🐂ವೃಷಭರಾಶಿ🐂*📃,ನಿಮ್ಮಲ್ಲಿ ಇಂದು ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ...
Ad Widget

ಇಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಬಿಎಂಎಸ್ ಮನವಿ

ಸುಳ್ಯ: ಭಾರತೀಯ ಮಜ್ದೂರ್ ಸಂಘದ ಆಟೋ ಚಾಲಕರ ಘಟಕದ ವತಿಯಿಂದ ಸುಳ್ಯ ನಗರದಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಸ್ಥಳೀಯ ಶಾಸಕರು ಹಾಗೂ ಮೆಸ್ಕಾಂ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಆ. 4ರಂದು ಮನವಿ ಸಲ್ಲಿಸಲಾಯಿತು. ಸುಳ್ಯ ನಗರದಲ್ಲಿ ಇಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರು ಹಾಗೂ...

ತೂಗು ಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಸಾರ್ವಜನಿಕ ನುಡಿನಮನ

ಸುಳ್ಯ, ಜು. 20: ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ಸ್ಮರಣಾರ್ಥ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ 'ಗಿರೀಶ ಸ್ಮೃತಿ ಸೇತು' ಸುಳ್ಯದ ಕುಂಭಕೋಡು ಕಸ್ತೂರಿ ಅಚ್ಯುತ ಭಟ್ ಶಶಿಕಲಾ ಮಂದಿರದಲ್ಲಿ ಭಾವಪೂರ್ಣವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಡಾ. ಗಿರೀಶ್ ಭಾರದ್ವಾಜ್ ಅವರ ಕುಟುಂಬಸ್ಥರು, ಗಣ್ಯರು, ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಸಾರ್ವಜನಿಕರು...

ನೀಟ್ ಪರೀಕ್ಷಾ ಅಕ್ರಮ ಮತ್ತು ರಾಮ ಮಂದಿರ ಕಾಣಿಕೆ ಹಣ ದುರ್ಬಳಕೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹ: ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ

ಸುಳ್ಯ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಕಾಣಿಕೆ ಹುಂಡಿ ಹಣ ದುರ್ಬಳಕೆ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಭವಿಷ್ಯ ಮತ್ತು ದೇಶದ ಜನರ ಧಾರ್ಮಿಕ ನಂಬಿಕೆಗಳೊಂದಿಗೆ ಚೆಲ್ಲಾಟ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದೆ. ಜು.17ರಂದು ಸುಳ್ಯದ ಪತ್ರಿಕಾಭವನದಲ್ಲಿ ನಡೆದ...

ಪಡ್ಪಿನಂಗಡಿ: ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

ಪಡ್ಪಿನಂಗಡಿ:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 18 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಎಸ್‌ಡಿಪಿಐ ಮುಚ್ಚಿಲ ಬ್ರಾಂಚ್ ಸಮಿತಿ ವತಿಯಿಂದ ಪಡ್ಪಿನಂಗಡಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮುಚ್ಚಿಲ ಬ್ರಾಂಚ್ ಅಧ್ಯಕ್ಷ ಝುಬೈರ್ ಮುಚ್ಚಿಲ ಧ್ವಜಾರೋಹಣಗೈದರು. ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕಾರ್ಯದರ್ಶಿ ಶರೀಫ್ ‌ನಿಂತಿಕಲ್ ಸಂದೇಶ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ನಿನ್ನೆ ಸಂಜೆ ಮುರುಳ್ಯದಲ್ಲಿ...

ಪಿಎಂಶ್ರೀ ಕೆ.ಪಿ.ಸಿ, ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಸುಳ್ಯ, ಜೂ. 21: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸುಳ್ಯದ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಗಾಭ್ಯಾಸ ಕಾರ್ಯಕ್ರಮವನ್ನು ಜೂ. 21 ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನಂದಾ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನದ ಮಹತ್ವವನ್ನು ವಿವರಿಸಿ ಪ್ರಾಯೋಗಿಕವಾಗಿ ಯೋಗಾಭ್ಯಾಸ ನಡೆಸಿಕೊಟ್ಟರು. ಯೋಗವು...

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ‘ಮುಂಗಾರು ಮೇಳ’ಕ್ಕೆ ಸುಳ್ಯದ ಗ್ರಾಹಕರಿಗೆ ಇನ್ನೂ ಕೇವಲ 3 ದಿನಗಳು ಮಾತ್ರ

ಸುಳ್ಯ, ಜೂ. 19: ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಆಯೋಜಿಸಲಾದ 'ಮುಂಗಾರು ಮೇಳ'ಕ್ಕೆ ಇನ್ನೂ ಕೇವಲ ಮೂರು ದಿನಗಳು ಮಾತ್ರ ಬಾಕಿಯಿದ್ದು, ಗ್ರಾಹಕರು ಈ ವಿಶೇಷ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಮುಖ್ಯಸ್ಥರಾದ ಬಲರಾಮಾ ಆಚಾರ್ಯರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ದರವು ಸುಮಾರು ₹15,000ರಿಂದ ₹13,300 ರ ಮಟ್ಟಕ್ಕೆ ಇಳಿಕೆಯಾಗಿರುವುದು ಆಭರಣ ಖರೀದಿಗೆ ಅನುಕೂಲಕರ...

ಸುಳ್ಯ ತಾಲೂಕು ಪಿಂಚಣಿದಾರರ ಸಂಘದ 46ನೇ ವಾರ್ಷಿಕ ಮಹಾಸಭೆ

ಸುಳ್ಯ, ಜೂ.17: ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ 2025-26ನೇ ಸಾಲಿನ 46ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಡಾ. ಎಸ್. ರಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಎ. ಅಬ್ದುಲ್ಲ ಅವರು 2025-26ನೇ ಸಾಲಿನ ಆಡಳಿತ ವರದಿಯನ್ನು ಮಂಡಿಸಿದರು. ಖಜಾಂಚಿ ಯು. ಸುಬ್ರಹ್ಮಣ್ಯ ಹೊಳ್ಳ ಅವರು ವಾರ್ಷಿಕ...

ನಿಧನ : ಕುಂಞ್ಞಲಿಮಾ ಉಮಿಕ್ಕಳ

ಬೆಳ್ಳಾರೆ ಗ್ರಾಮದ ಉಮಿಕ್ಕಳ‌ ದಿ.ಇಬ್ರಾಹಿಂ ಹಾಜಿಯವರ ಪತ್ನಿ ಕುಂಞ್ಞಲಿಮಾ (85) ಅಲ್ಪಕಾಲದ ಅಸೌಖ್ಯದಿಂದ ಜೂ 3 ರಂದು ಸ್ವಗೃಹದಲ್ಲಿ ನಿಧನರಾದರು.ಅವರು ಅಬ್ದುಲ್ ಕರೀಂ,ಹಮೀದ್, ಹನೀಫ್ ಪಿ. ಕೆ. ಸೇರಿದಂಥೆ ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳು,ಮರಿಮಕ್ಕಳು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ. ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ
Loading posts...

All posts loaded

No more posts

error: Content is protected !!