ಪುತ್ತೂರು : ಕೊರೊನಾ ದಿನದಿಂದ ದಿನಕ್ಕೆ ಎಲ್ಲೆಡೆ ವ್ಯಾಪಿಸುತ್ತಲೇ ಇದೆ . ಕೆಲವು ಕಡೆಗಳಲ್ಲಿ ಜನ ಮನೆಯಿಂದ ಹೊರಗೆ ಬರಲೂ ಭಯಪಡುವ ಸನ್ನಿವೇಶ ಇದೆ . ಇದೆಲ್ಲದರ ನಡುವೆ ಒಳಮೊಗ್ರು ಗ್ರಾಮದ ಪಕ್ಕದ ಗ್ರಾಮದ ಮುದುಕನೊಬ್ಬ ಆಂಟಿಯೊಬ್ಬಳಿಗೆ ಕಿಸ್ ಕೊಟ್ಟಿದ್ದರಿಂದ ಕೊರೊನಾ ಮೈಮೇಲೆ ಮೆತ್ತಿಕೊಂಡಿದ್ದಾರೆ . ರಸಿಕ ಮನೋಭಾವದ ಈ ಮುದುಕ ಚಪಲ ಚೆನ್ನಿಗರಾಯನಾಗಿದ್ದು , ಈ ಹಿಂದೆ ಕೂಡಾ ಇವರ ವಿರುದ್ದ ಇದೇ ರೀತಿಯ ಆರೋಪಗಳೂ ಕೇಳಿ ಬಂದಿತ್ತು ಮುದುಕನ ಉಪಟಳವನ್ನು ನಿಯಂತ್ರಣ ಮಾಡಬೇಕೆಂದು ಊರಿನ ಯುವಕರು ಅವರ ಮನೆಗೆ ದಾಳಿ ಮಾಡಿ
ಎಚ್ಚರವನ್ನೂ ಕೊಟ್ಟಿದ್ದರು . ಆದರೆ ಮುದುಕ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ , ಇತ್ತೀಚೆಗೆ ಬಾಡಿಗೆ ಮನೆಯೊಂದರಲ್ಲಿ ವಾಸಮಾಡಿರುವ ಆಂಟಿ ಮನೆಗೆ ತೆರಳಿದ್ದ ಮುದುಕ ಅಲ್ಲಿನ ಆಂಟಿಗೆ ಕಿಸ್ ಕೊಟ್ಟಿದ್ದ ಎನ್ನಲಾಗಿದೆ . ಆಂಟಿಗೂ ಕೊರೊನಾ ಪಾಸಿಟಿವ್ ಆಗಿದ್ದು ಆಂಟಿಯ ಸಂಘದಿಂದ ಅಜ್ಜನಿಗೂ ಕೊರೊನಾ ಬಂದಿದೆ . ಮುದುಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಈ ವಿಚಾರ ಗ್ರಾಮದಲ್ಲಿ ಕುತೂಹಲವನ್ನು ಸೃಷ್ಟಿಸಿದ್ದು , ಪಡ್ಡೆ ಹುಡುಗರಿಗೆ ಮನರಂಜನೆಯಾಗಿದ್ದು , ಇನ್ನಾದರೂ ಅಜ್ಜನ ಕಿಸ್ ಪುರಾಣ ನಿಲ್ಲಲಿ ಎಂದು ಹಾರೈಸಿದ್ದಾರೆ .
- Friday
- November 1st, 2024