Ad Widget

ಬೆಳ್ಳಾರೆ ಪೋಲೀಸ್ ಠಾಣೆ ಸಂಪೂರ್ಣ ಸ್ಯಾನಿಟೈಸಿಂಗ್

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನ ವೈರಸ್ ಮಹಾಮಾರಿಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಸ್ಥಳಗಳು ಹಾಗೂ ಸರಕಾರಿ ಇಲಾಖಾ ಕಚೇರಿಗಳ ಪರಿಸರಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಲಾಗುತ್ತಿದೆ.ಸಾರ್ವಜನಿಕರು ಹೆಚ್ಚಾಗಿ ವಿವಿಧ ಉದ್ದೇಶಗಳಿಂದ ಪೊಲೀಸ್ ಠಾಣೆಗಳಿಗೆ ಬರುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಇಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಠಾಣೆಯ ಒಳಭಾಗ ಮತ್ತು ಹೊರಭಾಗ ಪರಿಸರವನ್ನು ಸ್ಯಾನಿಟೈಸ್ ಮಾಡಲಾಗಿದೆ.

ಕೆ ಎಸ್ ಎಸ್ ಕಾಲೇಜು ಉಪನ್ಯಾಸಕಿ ತಾರಕೇಶ್ವರಿ ಅವರಿಗೆ ಡಾಕ್ಟರೇಟ್ ಪದವಿ

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ , ಸುಬ್ರಹ್ಮಣ್ಯ ಇಲ್ಲಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ತಾರಕೇಶ್ವರಿ ಯು.ಎಸ್. ಅವರು "ಕರಾವಳಿ ಕರ್ನಾಟಕದಲ್ಲಿ ಹಿಂದುತ್ವದ ರಾಜಕಾರಣ - ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘ ಸಂಸ್ಥೆಗಳ ವಿಸ್ತರಣೆ ಮತ್ತು ಹಿಂದುತ್ವದ ಸಿದ್ದಾಂತದ ಪ್ರಸರಣದ ಒಂದು ಅಧ್ಯಯನ" ಎಂಬ ವಿಷಯವನ್ನು ಅಧ್ಯಯನ ಮಾಡಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುತ್ತಾರೆ...
Ad Widget

ಕಮಿಲ ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಪ್ರಗತಿ ಬಂಧು ತಂಡ

ಕಮಿಲ ಪುಚ್ಚಪ್ಪಾಡಿ ಬಸ್ ನಿಲ್ದಾಣದ ಪರಿಸರ ಕುಡುಕರ ಹಾವಳಿಯಿಂದ ಕಸ,ಬಾಟಲ್ ರಾಶಿ ಬಿದ್ದು ಅಸಹ್ಯವೆನಿಸುವ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸ್ಥಳೀಯ ಕುಲದೇವತಾ ಪ್ರಗತಿ ಬಂಧು ತಂಡದ ಸದಸ್ಯರು ಸ್ವಚ್ಛಗೊಳಿಸಿದರು.ಜತೆಗೆ ಗೋಡೆಗೆ ಪೈಂಟ್ ಮಾಡಿ ಸುಂದರಗೊಳಿಸಿದ್ದಾರೆ. ಈ ಕಾರ್ಯಕ್ಕೆ ಸಂಘದ ಸದಸ್ಯರಾದ ಲೋಕೇಶ್ ಕಮಿಲ, ಪೂವಪ್ಪ ಪೂಜಾರಿ, ವೆಂಕಪ್ಪ ಪೂಜಾರಿ, ಲಿತಿನ್, ಅನಿಲ್ ಹಾಗೂ ನಿಖಿಲ್ ಸಾಥ್...

ಪಂಜ ನೆಕ್ಕಿಲ ಮಸ್ಜಿದ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಕಾರವು ಈದ್ ನಮಾಝ್ ನಿರ್ವಹಿಸುವ ಮಸೀದಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ನಿಟ್ಟಿನಲ್ಲಿ  ಈದ್ ನಮಾಜ್ ಗೆ ಪೂರ್ವ ಸಿದ್ಧತೆಯಾಗಿ ಇಂದು ಪಂಜ ನೆಕ್ಕಿಲ ಜುಮಾ ಮಸೀದಿಯಲ್ಲಿ ಮಸೀದಿ ಪರಿಸರವನ್ನು ಸ್ವಚ್ಛತೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್ ವೈ ಎಸ್ ಸಂಘಟನೆಯ ಮುಖಂಡರು , ಟೀಮ್ ಇಸಾಬ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.

ಬೆಳ್ಳಾರೆ ಉದ್ಯಮಿಗೆ ಪಾಸಿಟಿವ್

ಇಂದು ಬೆಳ್ಳಾರೆಯ ಉದ್ಯಮಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದೆ. ಆರೋಗ್ಯ ದಲ್ಲಿ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ್ದರು. ಈ ವೇಳೆ ಕೊರೊನಾ ಸೋಂಕು ಪತ್ತೆಯಾಗಿದೆ. ಅದ್ದರಿಂದ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕನಕಮಜಲು ಯುವಕ ಮಂಡಲದಿಂದ ಅರಣ್ಯದಲ್ಲಿ ಬೀಜ ಬಿತ್ತನೆ

"ಕಾಡು ಬೆಳೆಸಿ ನಾಡು ಉಳಿಸಿ" ಎಂಬ ಮಾತಿನಂತೆ ಯುವಜನ ವಿಕಾಸ ಕೇಂದ್ರ ಯುವಕ ಮಂಡಲ ಕನಕಮಜಲು ಇದರ ಆಶ್ರಯದಲ್ಲಿ ಜುಲೈ 26 ರಂದು ಆದಿತ್ಯವಾರ ವಿಶೇಷ ಕಾರ್ಯಕ್ರಮವೊಂದು ನಡೆಯಿತು. ಮುಗೇರು ರಕ್ಷಿತಾರಣ್ಯದಲ್ಲಿ ಹಲಸಿನ ಬೀಜ ,ಮಾವಿನ ಬೀಜ ಹಾಗೂ ಇನ್ನಿತರ ಬೀಜಗಳನ್ನು ಬಿತ್ತನೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಕಾಡು ನಾಶವಾಗುತ್ತಿದ್ದು, ಕಾಡನ್ನು ಉಳಿಸುವ ನಿಟ್ಟಿನಲ್ಲಿ ಯುವಕ...

*ಸಂಡೇ ಲಾಕ್ ಡೌನ್ ಸದುಪಯೋಗ – ಸುಳ್ಯ ವಿಖಾಯ ತಂಡದಿಂದ ಬಸ್ ತಂಗುದಾಣಗಳ ಸ್ವಚ್ಛತೆ*

ಭಾನುವಾರದ ಲಾಕ್  ಡೌನ್  ಜಾರಿಯಲ್ಲಿದ್ದು ಸುಳ್ಯ ವಿಖಾಯ ತಂಡವು ಸಂಪಾಜೆ ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಹದಿಮೂರು ಪ್ರಯಾಣಿಕ ಬಸ್ ತಂಗುದಾಣ ಹಾಗೂ ಪರಿಸರ ಶುಚಿಗೊಳಿಸಿ,ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಿ ಭಾನುವಾರದ ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತಾ ಸಮಿತಿ ಅಧ್ಯಕ್ಷರಾದ ಜಿ, ಕೆ,ಹಮೀದ್...

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅವಿವಾಹಿತೆ

ಅವಿವಾಹಿತ ಯುವತಿಯೊಬ್ಬಳು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. ಚೆಂಬು ಗ್ರಾಮದ ಕುದುರೆಪಾಯ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದಳು. ಮೂಲತಃ ಯುವತಿ ತೊಡಿಕಾನ ಗ್ರಾಮದವಳೆಂದು ತಿಳಿದು ಬಂದಿದೆ.

ಗಾಂಧಿ ನಗರ ಶಾಲೆಯ ಗಂಟೆ ಕದ್ದು ಸಿಕ್ಕಿಬಿದ್ದ ಕಳ್ಳ

ಸುಳ್ಯಗಾಂಧಿನಗರ ಸರಕಾರಿ ಶಾಲೆಯ ಗಂಟೆ ಕಳವು ಮಾಡಿ ಕೊಂಡೊಯ್ಯುವುದನ್ನು ಗಮನಿಸಿದ ಸ್ಥಳಿಯರು ನಿನ್ನೆ ಸಂಜೆ 6 ಗಂಟೆಗೆ ಮಾಲು ಸಮೇತ ಅವನನ್ನು ಹಿಡಿದಿದ್ದಾರೆ. ನಂತರ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿರವರ ಸಹಕಾರದಿಂದ ಸೆರೆ ಹಿಡಿದ ಕಳ್ಳನನ್ನು ಪೊಲೀಸ್ ನವರಿಗೆ ಒಪ್ಪಿಸಲಾಯಿತು. ಈತ ದಾರವಾಡ ಮೂಲದ ಸಿದ್ದೇಶ್ ಎಂದಾಗಿದ್ದು ಇವನು ನಾವೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ....

*ಜುಲೈ 29 ಮೊಗರ್ಪಣೆ ಯಲ್ಲಿ ದಿನಸಿ ಬಜಾರ್ ಶುಭಾರಂಭ*

ಮೊಗರ್ಪಣೆ ಕೆ.ಎಚ್. ಕಾಂಪ್ಲೆಕ್ಸ್ ನಲ್ಲಿ ಜುನೈದ್ ಹಾಗೂ ಅಶ್ರಫ್ ರವರ ಮಾಲಕತ್ವದ ದಿನಸಿ ಬಜಾರ್ ಜುಲೈ 29,  ಬುಧವಾರದಂದು ಶುಭಾರಂಭ ಗೊಳ್ಳಲಿದೆ . ನಮ್ಮ ಸಂಸ್ಥೆಯಲ್ಲಿ ಎಲ್ಲಾ ತರಹದ ದಿನಸಿ ಸಾಮಗ್ರಿಗಳು, ಗೃಹಪಯೋಗಿ ಬಳಕೆಯ ಪ್ಲಾಸ್ಟಿಕ್ ಸಾಮಗ್ರಿಗಳು ಚಿಲ್ಲರೆ ಮತ್ತು ರಖಂ ದರಗಳಲ್ಲಿ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿರುತ್ತಾರೆ.
Loading posts...

All posts loaded

No more posts

error: Content is protected !!