Ad Widget

ಕಲ್ಲುಗುಂಡಿ – ಆಡು ಕದ್ದು ಸಿಕ್ಕಿ ಬಿದ್ದ ಪಿಂಟು

ಆಡು ಕದ್ದು ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಟಯರು ಹೂತು ಹೋಗಿ ಆಡು ಕಳ್ಳ ಸಿಕ್ಕಿಬಿದ್ದ ಘಟನೆ ಕಲ್ಲುಗುಂಡಿಯಲ್ಲಿ ಜು.17 ರಂದು ನಡೆದಿದೆ. ನೆಲ್ಲಿಕುಮೇರಿಯ ವಿನ್ಸೆಂಟ್ ಎಂಬುವರ ಆಡು ನಿನ್ನೆ ಸಾಂಯಕಾಲ ಕಾಣೆಯಾಗಿದ್ದು ಹುಡುಕಾಡಿದಾಗ ಕೆಎಫ್ ಡಿಸಿಯ ರಬ್ಬರ್ ತೋಟದಲ್ಲಿ ಟಯರ್ ಹೂತು ಹೊಗಿ ಬಾಕಿಯಾಗಿದ್ದ ರಿಕ್ಷಾದಲ್ಲಿ ಆಡು ಕಟ್ಟಿಹಾಕಿದ್ದು ಊರಿನವರಿಗೆ ತಿಳಿಯಿತು. ಜನ ಸೇರಿದಾಗ...

ದನಸಾಗಾಟ ಅಕ್ರಮವಲ್ಲ. ಹಾಲು ಉತ್ಪಾದನೆಗಾಗಿ ಹಸುಗಳನ್ನು ಖರೀದಿಸಲಾಗಿದೆ. ದಾಖಲೆಗಳು ಇದ್ದರು ನಮ್ಮನ್ನು ಅಪರಾಧಿಗಳನ್ನಾಗಿಸಿರುವುದು ಸರಿಯಲ್ಲ – ಮಹಿಳೆ ಹೇಳಿಕೆ

ಜುಲೈ 14 ರಂದು ಪುತ್ತೂರು ಕಾವು ನಿಂದ ಸುಳ್ಯಕ್ಕೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಪಡೆದ ಬಜರಂಗದಳದ ಯುವಕರು ಕನಕಮಜಲಿನಲ್ಲಿ ಕಾದು ಕುಳಿತು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿ ನಂತರ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕಾರ್ಯಾಚರಣೆಯಲ್ಲಿ ಬಾರಿ ಸಾಹಸಮಯ ರೀತಿಯಲ್ಲಿ ಪಿಕಪ್ ವಾಹನವನ್ನು ಹಾಗೂ ದನಸಾಗಾಟ ದಲ್ಲಿ ಭಾಗಿಯಾದ ವ್ಯಕ್ತಿಯನ್ನು...
Ad Widget

ಹೀಗೂ ಉಂಟೇ!!! ದನದ ರಕ್ತ ಹೀರಿದ ಮರ-ಜೋಯಿಡಾದಲ್ಲೊಂದು ಅಚ್ಚರಿಯ ಘಟನೆ-ವೈರಲ್ ಆದ ವಿಡಿಯೋ ಇಲ್ಲಿದೆ

ಕಾರವಾರ: ಕೆಲವು ಗಿಡ, ಮರಗಳು ಪ್ರಾಣಿಯ ರಕ್ತ ಹೀರುತ್ತವೆ, ಕೀಟಗಳನ್ನು ತಿನ್ನುತ್ತವೆ ಎನ್ನುವುದನ್ನು ಕೇಳಿರಬಹುದು. ಈ ಸುದ್ದಿ ನಿಜ ಎನ್ನುವಂತೆ ಸಾವಿರಾರು ವರ್ಷಗಳಿಂದ ತನ್ನ ಮಡಿಲಿನಲ್ಲಿ ಅಪರೂಪದ ವನಸಿರಿಯನ್ನು ಹೊತ್ತು ನಿಂತಿರುವ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಸಮೀಪದ ಹನ್ನೊಲ್ಲಿಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಕಾಡಿನಲ್ಲಿ...

ಏನೆಕಲ್ಲು : ಅರಣ್ಯ ಪ್ರದೇಶದಿಂದ ಮರ ಕಡಿದ ವ್ಯಕ್ತಿ ಇಲಾಖೆ ವಶ

ಬಳ್ಪ ಮೀಸಲು ಅರಣ್ಯ ಪ್ರದೇಶದಿಂದ ಮರ ಕಡಿದ ಆರೋಪದಲ್ಲಿ ಮನೋಜ್ ಮಾಣಿಬೈಲು ಎಂಬುವರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಏನೆಕಲ್ಲು ಗ್ರಾಮದ ಮಾಣಿಬೈಲು ಸಮೀಪದ ಮೀಸಲು ಅರಣ್ಯ ದಿಂದ ಒಣಗಿದ ಸಾಗುವಾನಿ ಮರ ಕಡಿದು ಸಾಗಿದ್ದಾರೆಂಬ ಮಾಹಿತಿ ಪಡೆದ ಪಂಜ ಅರಣ್ಯ ಇಲಾಖೆಯವರು ರೇಂಜರ್ ಗಿರೀಶ್ ಆರ್ . , ಬಳ್ಪ...

ಬೊಳುಬೈಲು : ವಿದ್ಯುತ್ ಕಂಬಕ್ಕೆ ಪಿಕಪ್ ಡಿಕ್ಕಿ

ಬೊಳುಬೈಲು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಜು.17 ರಂದು ನಡೆದಿದೆ. ಪರಿಣಾಮ ಪಿಕಪ್ ಜಖಂ ಗೊಂಡಿದ್ದು ವಿದ್ಯುತ್ ಕಂಬ ಮುರಿದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಪೇರಾಲಿನ ವಕ್ರತುಂಡ ಪಿಕಪ್ ಎಂದು ತಿಳಿದುಬಂದಿದೆ.

ನಾಳೆ ದಕ ಸಂಪೂರ್ಣ ಲಾಕ್ಡೌನ್! ಅಗತ್ಯ ವಸ್ತುಗಳು ಕೂಡ ಸಿಗೋದಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಪೂರ್ತಿ ಲಾಕ್ ಡೌನ್ ಇರಲಿದೆ. ಪ್ರತಿ ದಿನ ಬೆಳಿಗ್ಗೆ 8 ರಿಂದ 11 ಗಂಟೆಯ ಲಾಕ್ ಡೌನ್ ರಿಯಾಯಿತಿ ನಾಳೆ ಇರುವುದಿಲ್ಲ. ನಾಳೆ ಕಟ್ಟುನಿಟ್ಟಿನ ಲಾಕ್ಡೌನ್ ಹೇರಿರುವ ಡಿಸಿ, ಲಾಕ್ಡೌನ್ ನಿಯಮಗಳನ್ನು ಮೀರಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಖಡಕ್...

ಸುಳ್ಯ ಓಡಬಾಯಿ ಬಳಿ ಕಾರು ಅಪಘಾತ- ಗಂಭೀರ ಗಾಯ – ಆಸ್ಪತ್ರೆಗೆ ದಾಖಲು

ಸುಳ್ಯ ಓಡಬಾಯಿ ಬಳಿ ಅಗ್ನಿಶಾಮಕ ಠಾಣೆ ಮುಂಭಾಗದಲ್ಲಿ ಸುಳ್ಯ ಕಡೆಯಿಂದ ಪುತ್ತೂರಿಗೆ ಚಲಿಸುತ್ತಿದ್ದ ಅಲ್ಟೋ ಕಾರ್ ಡ್ರೈವರ್ ನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಆಗಿದೆ. ಡಿಕ್ಕಿಯ ರಭಸಕ್ಕೆ ಕಾರು ರೋಡಿನಲ್ಲಿ ಮಗುಚಿ ಬಿದ್ದು ಕಾರಿನಲ್ಲಿದ್ದ ಒಬ್ಬ ಮಹಿಳೆಯ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ , ಸ್ಥಳೀಯರು ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ....

ಸುಳ್ಯ ಪೊಲೀಸ್ ಠಾಣೆ ಎರಡು ದಿನ ಸೀಲ್ ಡೌನ್

ಜು.14ರಂದು ಸುಳ್ಯದಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಕ್ ಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಎರಡು ಸೀಲ್ ಡೌನ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಆರೋಪಿ ಬಂಧಿಸುವ ವೇಳೆ ಕರ್ತವ್ಯ ದಲ್ಲಿದ್ದ ಎಸ್.ಐ. ಹರೀಶ್ ಸೇರಿದಂತೆ ಮೂವರು ಪೋಲೀಸ್ ಸಿಬ್ಬಂದಿಗಳು ಹೋಂ ಕ್ವಾರೆಂಟೇನ್ ಗೆ ಈಗಾಗಲೇ ತೆರಳಿದ್ದಾರೆ....
error: Content is protected !!