Ad Widget

ಸುಳ್ಯದಲ್ಲೂ ಪ್ರತಿಷ್ಠಿತ ಕಾರ್ಖಾನೆಗಳು ಲಾಕ್ ಡೌನ್ ನಿಯಮ ಮೀರಿ ಕೆಲಸ ಮಾಡುತ್ತಿರುವುದು ನ್ಯಾಯವೇ – ಧರ್ಮಪಾಲ ಕೊಯಿಂಗಾಜೆ ಹೇಳಿಕೆ

ಸರಕಾರವು ಲಾಕ್ ಡೌನ್ ನಿಯಮ ಜಾರಿಗೆ ತಂದಿರುವುದು ಒಳ್ಳೆಯದಾಗಿದೆ . ಆದರೆ ಈ ನಿಯಮ ಸರಿಯಾಗಿ ಜಾರಿಯಾಗುತ್ತಿದೆಯೇ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ . ಖಂಡಿತವಾಗಿಯೂ ತಾಲೂಕು ಆಡಳಿತ , ಮಾನ್ಯ ಶಾಸಕರು ಲಾಕ್ ಡೌನ್ ನಿಯಮ ಪಾಲಿಸುವಲ್ಲಿ ತೆಗೆದುಕೊಂಡಿರುವ ಕ್ರಮ ಯಶಸ್ವಿಯಾಗಿಲ್ಲ . ತಾಲೂಕಿನ ಪ್ರತಿಷ್ಠಿತ ಕಾರ್ಖಾನೆಗಳು ತನ್ನ ರಾಜಕೀಯ ಪ್ರಭಾವ ಬಳಸಿ ಬೆಳಿಗ್ಗೆಯಿಂದ ಸಂಜೆ...

ನಾಳೆ.(ಜು.18) ಸರ್ಕಾರಿ ಕಚೇರಿಗಳಿಗೆ ರಜೆ

ಕೊರೊನ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಸರ್ಕಾರಿ ರಜೆ ಘೋಷಿಸಿರುವುದರಿಂದ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ನಾಳೆ ರಜೆ ಇರಲಿದೆ. ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ರಜೆ ಇದ್ದು, ಸರಕಾರಿ ಕಾರ್ಯಗಳು ಸೋಮವಾರ ಮುಂದುವರಿಯಲಿವೆ. ಕೊರೊನ ಲಾಕ್ ಡೌನ್ ಮತ್ತು ಅಗತ್ಯ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.
Ad Widget

ಸುಳ್ಯ ಪೊಲೀಸ್ ಠಾಣೆ ಜು.18 ರಿಂದ ಸೀಲ್ ಡೌನ್ ಸಾಧ್ಯತೆ

ಜು.14 ರಂದು ಸುಳ್ಯದಲ್ಲಿ ಬಾರಿ ಸಾಹಸಮಯ ರೀತಿಯಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಕ್ ಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ.ಈ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಜುಲೈ 18ರಿಂದಸೀಲ್ ಡೌನ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಎಸ್.ಐ. ಹರೀಶ್ ಸೇರಿದಂತೆ ಆರೋಪಿಯ ಬಂಧನದಲ್ಲಿ ತೊಡಗಿಸಿಕೊಂಡ ಮೂವರು ಪೋಲೀಸ್...

ಸೇವಾಜೆ ಶಾಲಾ ಬಳಿ ರಸ್ತೆಗೆ ಬಿದ್ದ ಮರ – ತೆರವು

ಎಲಿಮಲೆ ಮಡಪ್ಪಾಡಿ ರಸ್ತೆಗೆ ಸೇವಾಜೆ ಸಮೀಪ ಮರ ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸೇವಾಜೆ ಶ್ರೀ ಕೃಷ್ಣ ಸಾಂಸ್ಕೃತಿಕ ಸಮಿತಿ ಸದಸ್ಯರು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕುಸುಮ ಸಾರಂಗದ ವತಿಯಿಂದ ವಾಟ್ಸಾಪ್ ಮುಖಾಂತರ ವಿವಿಧ ಸ್ಪರ್ಧೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜ್ ಸುಬ್ರಹ್ಮಣ್ಯ ದ ರಂಗ ಘಟಕ ಕುಸುಮ ಸಾರಂಗವೂ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ‌ಕೊರೋನ ಸಂಕಷ್ಟದ ಸಮಯದಲ್ಲಿ ಆಸಕ್ತ ಪ್ರತಿಭೆಗಳಿಗಾಗಿ ಸಾಮಾಜಿಕ ಜಾಲತಾಣದ ಮೂಲಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ನಗದು ಬಹುಮಾನ ಮತ್ತು...

ಆನ್ ಲೈನ್ ದಾಖಲಾತಿ ಆರಂಭಿಸಿದ ಪ್ರಥಮ ದರ್ಜೆ ಕಾಲೇಜು

ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು 2020-21 ನೇ ಸಾಲಿನ ಪ್ರಥಮ ಪದವಿ ವಿಧ್ಯಾರ್ಥಿಗಳಿಗೆ ಆನ್‌ ಲೈನ್ ದಾಖಲಾತಿಗಾಗಿ ಆರಂಭವಾಗಿದ್ದು ಲಾಕ್ ಡೌನ್ ವೇಳೆಯಲ್ಲಿ  ಪ್ರಥಮ ಹೆಜ್ಜೆಯಿರಿಸಿದೆ. ಪ್ರವೇಶಾತಿಯನ್ನು ಬಯಸುವ ಅಭ್ಯರ್ಥಿಗಳು ಇಲ್ಲಿ ನೀಡಿರುವ ಗೂಗಲ್ ಲಿಂಕ್  ಉಪಯೋಗಿಸಿ ಆನ್ ಲೈನ್ ಅರ್ಜಿ  ಭರ್ತಿಗೊಳಿಸುವುದು.  ಭರ್ತಿಗೊಳಿಸಿದ ಮಾತ್ರಕ್ಕೆ ಪ್ರವೇಶಾತಿ ಅಂಗೀಕಾರವಾಗಿದೆ ಎಂದು ಭಾವಿಸತಕ್ಕದ್ದಲ್ಲ. ಈ ಮಾಹಿತಿಯನ್ನು...

ಪಿಯುಸಿಯಲ್ಲಿ 567 ಅಂಕ ಪಡೆದ ಶ್ರದ್ಧಾ ಉಳುವಾರು

ಪಿ.ಯು.ಸಿ ಫಲಿತಾಂಶದದಲ್ಲಿ ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿ ಶ್ರದ್ಧಾ . ಯು ಒಟ್ಟು 567 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ . ಈಕೆ ಉಳುವಾರು ಪುರುಷೋತ್ತಮ ಭಾರತಿ ದಂಪತಿ ಪುತ್ರಿ . ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಕಲಿಕೆಯೊಂದಿಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ .

ಕುಡಿದ ಮತ್ತಿನಲ್ಲಿ ತಾಯಿಯ ಮೇಲೆ ಹಲ್ಲೆ – ವಿಡಿಯೋ ವೈರಲ್

ಬೆಳ್ತಂಗಡಿ ತಾಲೇೂಕಿನ ಸವಣಾಲು ಗ್ರಾಮದ ಹಲಸಿನಕಟ್ಟೆ ಐದುಸೆನ್ಸ್ ನಿವಾಸಿ ವಯೇೂವೃದ್ದ ಮಹಿಳೆ ಶ್ರೀಮತಿ ಅಪ್ಪಿ ಶೆಡ್ತಿಯವರ ಮೇಲೆ ಅವರ ಮೊಮ್ಮಗ ಪ್ರದೀಪ ಶೆಟ್ಟಿ ಹಾಗೂ ಮಗ ಶ್ರೀನಿವಾಸ ಶೆಟ್ಟಿ ಕಂಠಪೂರ್ತಿ ಕುಡಿದು ಅಮಾನೂಷವಾಗಿ ವಯೋವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಒಂದು ಅಮಾನವೀಯ ಘಟನೆ ಇಂದು ನಡೆದಿದ್ದು , ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ...

ಪತಿಯೆಂದು ಸುಳ್ಳು ಹೇಳಿ ಪ್ರಿಯಕರನ ಜೊತೆ ಮಹಿಳಾ ಪೊಲೀಸ್ ಪೇದೆ ಕ್ವಾರಂಟೈನ್

ಮಹಿಳಾ ಕಾನ್ಸ್ಟೇಬಲ್ ಒಬ್ಬರು ಪತಿಯೆಂದು ಸುಳ್ಳು ಹೇಳಿ ತನ್ನ ಪ್ರಿಯಕರನೊಂದಿಗೆ ಕ್ವಾರಂಟೈನ್ ಆದ ಘಟನೆ ನಾಗ್ಪುರ ದಲ್ಲಿ ನಡೆದಿದೆ. ಕೊರೋನಾ ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಕಾರಣ ಮಹಿಳಾ ಕಾನ್ಸ್ಟೇಬಲ್ ನನ್ನು ಕ್ವಾರಂಟೈನ್ ಆಗಲು ಆರೋಗ್ಯ ಅಧಿಕಾರಿಗಳು ಸೂಚಿಸಿದ್ದರು. ಈ ವೇಳೆ ನನ್ನ ಜೊತೆ ನನ್ನ ಪತಿಯನ್ನು ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಮಹಿಳಾ ಕಾನ್ಸ್ಟೇಬಲ್...

ಬೆಂಗಳೂರಿನಿಂದ ಬಂದವರಿಂದಲೇ ಕೊಡಗಿಗೆ ಕಂಟಕ – ಪೀಡಿತರ ಸಂಖ್ಯೆ 252 ಕ್ಕೆ ಏರಿಕೆ

ಬೆಂಗಳೂರಿನಿಂದ ಹಿಂದಿರುಗಿದ್ದವರಿಂದ 9 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇಂದು ಕೊಡಗಿನಲ್ಲಿ ಮತ್ತೆ 13 ಹೊಸ ಪ್ರಕರಣ ದಾಖಲಾಗಿದೆ. 13 ಪ್ರಕರಣಗಳ ಪೈಕಿ 9 ಜನರಿಗೆ ಬೆಂಗಳೂರಿನಿಂದ ಹಿಂದಿರುಗಿದ್ದವರಿಂದಲೇ ಹರಡಿದೆ. ಮಡಿಕೇರಿ ತಾಲ್ಲೂಕಿನ ಮರಗೋಡಿನ ಸೋಂಕಿತನಿಂದ ಐವರಿಗೆ ಸೋಂಕು ಹರಡಿದೆ. ಬೆಂಗಳೂರಿನಿಂದ ಹಿಂದಿರುಗಿದ್ದ ಮತ್ತೊಬ್ಬ ವ್ಯಕ್ತಿಯಿಂದ ಮೂವರಿಗೆ ಸೋಂಕು ತಗುಲಿದೆ. ಬೆಂಗಳೂರಿನಿಂದ ಹಿಂದಿರುಗಿದ್ದ ಮುತ್ತಾರುಮುಡಿ ಗ್ರಾಮದ...
Loading posts...

All posts loaded

No more posts

error: Content is protected !!