Ad Widget

ಕೇರ್ಪಳದ ಮಹಿಳೆಯೊಬ್ಬರಿಗೆ ಪಾಸಿಟಿವ್

ಸುಳ್ಯ ಕೇರ್ಪಳ ದ ನಿವಾಸಿ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ ಹೃದಯಸಂಬಂಧಿ ಸಮಸ್ಯೆ ಗಾಗಿ ಅವರು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದರು.ಅವರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ವರದಿ ಪಾಸಿಟಿವ್ ಬಂದಿದೆ . ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ ಚರ್ಚ್‌ನ ಹಿರಿಯ ಧರ್ಮಗುರುಗಳಿಗೂ ಸೋಂಕು ದೃಢ

ಸುಳ್ಯ ಚರ್ಚ್ ನ ಹಿರಿಯ ಧರ್ಮ ಗುರುಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ .ಕೆಮ್ಮು ಮತ್ತು ಜ್ವರ ಇದ್ದ ಹಿನ್ನಲೆಯಲ್ಲಿ ಅವರು ಕೋವಿಡ್ ಟೆಸ್ಟ್ ಗೆ ಸ್ವಯಂ ಹೋಗಿದ್ದರು . ಅವರ ಜತೆ ಕಿರಿಯ ಧರ್ಮ ಗುರುಗಳು ಕೂಡಾ ಹೋಗಿದ್ದರಿಂದ ಅವರು ಅದೇ ಆಸ್ಪತ್ರೆಯಲ್ಲಿ ಕ್ವಾರೆಂಟೇನ್ ಆಗಿದ್ದಾರೆ...
Ad Widget

ಸಂಡೇ ಲಾಕ್ ಡೌನ್ ವ್ಯರ್ಥಗೊಳಿಸದ ಮೇನಾಲ ವಿಖಾಯ ತಂಡ

ರಾಜ್ಯದಲ್ಲಿ ಇಂದು ಫುಲ್ ಲಾಕ್ ಡೌನ್ ಇದ್ದರೂ ಶ್ರಮ ಸೇವೆಯ ಮೂಲಕ ಬಡ ಕುಟುಂಬವೊಂದಕ್ಕೆ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡ ಸುಳ್ಯ ವಲಯ ಮೇನಾಲ ವಿಖಾಯ ಕಾರ್ಯಕರ್ತರು ಮಾದರಿ ಸೇವೆ ನೀಡಿದರು.ಮೇನಾಲ ನಿವಾಸಿ ಹನೀಫ್ ಎಂಬವರಿಗೆ ನಿರ್ಮಿಸುತ್ತಿರುವ ಮನೆಯ ಫೌಂಡೇಶನ್ ಗೆ ಮಣ್ಣು ತುಂಬಿಸುವ ಕೆಲಸವನ್ನು ಮಾಡಿ ವಿಖಾಯ ತಂಡವು ಲಾಕ್ ಡೌನ್ ಅನ್ನು ಸದುಪಯೋಗಿಸಿಕೊಂಡರು.ಶ್ರಮ ಸೇವೆಯಲ್ಲಿ...

ನಾವೂರು: ನ.ಪಂ ಸದಸ್ಯ ಶರೀಫ್ ಕಂಠಿ ನೇತೃತ್ವದಲ್ಲಿ ರಸ್ತೆ ದುರಸ್ತಿ

ಸುಳ್ಯ ನಾವೂರು ಪರಿಸರದ ರಸ್ತೆಗಳು ಮಳೆಯಿಂದಾಗಿ ಹೊಂಡಗಳಿಂದ ತುಂಬಿದ್ದು ಸ್ಥಳೀಯ ನ.ಪಂ ಸದಸ್ಯ ಶರೀಫ್ ಕಂಠಿ ರವರ ನೇತೃತ್ವದಲ್ಲಿ ಸ್ಥಳೀಯ ಯುವಕರ ಸಹಕಾರದಿಂದ ಜುಲೈ 18ರಂದು ರಸ್ತೆಗಳ ಹೊಂಡ ಮುಚ್ಚುವ ಕಾರ್ಯ ಶ್ರಮದಾನದ ಮೂಲಕ ನಡೆಸಿದರು.

ಕನಕಮಜಲು: ಯುವಕ ಮಂಡಲದಿಂದ ವಿದ್ಯುತ್ ಲೈನ್ ಸ್ವಚ್ಚತಾ ಕಾರ್ಯ

ನೆಹರು ಯುವಕೇಂದ್ರ ಮಂಗಳೂರು,ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ (ರಿ) ಕನಕಮಜಲು ಇದರ ವತಿಯಿಂದ ಗ್ರಾಮ ವ್ಯಾಪ್ತಿಯ ಎಲ್ಲಾ ವಿದ್ಯುತ್ ಲೈನ್ ಗಳ ಅಕ್ಕಪಕ್ಕದಲ್ಲಿರುವ ಗಿಡಮರಗಳ ಗೆಲ್ಲುಗಳನ್ನು ಕಡಿದು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಜುಲೈ 19 ರಂದು ಸುಬ್ರಮಣ್ಯ ಮಾಣಿಕೊಡಿ ಇವರ ಸಂಯೋಜಕತ್ವದಲ್ಲಿ ನಡೆಸಲಾಯಿತು. ಈ ಕಾರ್ಯದಲ್ಲಿ ಎಲ್ಲಾ ಬೈಲುವಾರು ಸದಸ್ಯರುಗಳು ಕೈ ಜೋಡಿಸಿದರು. ಈ ಸಂದರ್ಭದಲ್ಲಿ...

ಆಡು,ಕೋಳಿ,ಹಂದಿ ಮರಿ ಬೇಕಾಗಿದೆ

ಊರು ಕೋಳಿ ಮರಿ ,ಹಂದಿ ಮರಿ, ಊರು ಹಸು, ಮೇಕೆ ಮರಿ ಬೇಕಾಗಿದೆ. ಮಾರಲಿಚ್ಚಿಸುವವರು ಸಂಪರ್ಕಿಸಿ ಮೊ: 9449451328

ಎಲಿಮಲೆ ಸೇವಾಜೆ ರಸ್ತೆ ಬದಿ ಸ್ವಚ್ಛತೆ

ಶ್ರೀಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ಸೇವಾಜೆ ಇದರ ವತಿಯಿಂದ ಸೇವಾಜೆ ಶಾಲಾ ವಠಾರ ಮತ್ತು ಸೇವಾಜೆಯಿಂದ ಎಲಿಮಲೆ ವರೆಗೆ ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿದು ಸ್ವಚ್ಚಗೊಳಿಸುವ ಮೂಲಕ ಶ್ರಮಸೇವ ಇಂದು ಮಾಡಲಾಯಿತು

ಕ್ವಾರಂಟೈನ್ ಉಲ್ಲಂಘನೆ – ಕೆವಿಜಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರೆಂದು ಕೇಸು ದಾಖಲು – ನಮ್ಮ ಸಂಸ್ಥೆಯ ವೈದ್ಯರಲ್ಲ ಕೆವಿಜಿ ಸಂಸ್ಥೆಯಿಂದ ಸ್ಪಷ್ಟನೆ

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರು ಎಂದು ಪರಿಗಣಿಸಿದ ಜಿಲ್ಲಾಡಳಿತ ಸುಳ್ಯ ಪೊಲೀಸ್ ಠಾಣೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.ಮಾಧ್ಯಮ ಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಕೆವಿಜಿ ಸಂಸ್ಥೆಯ ವಕ್ತಾರರು ಮಾಧ್ಯಮ ಗಳಿಗೆ ಸ್ಪಷ್ಟನೆ ನೀಡಿ ನಮ್ಮ ಸಂಸ್ಥೆಯ ವೈದ್ಯರು ಅಲ್ಲ ,ಸಿಬ್ಬಂದಿಯೂ ಅಲ್ಲ ಎಂದಿದೆ. ನಮ್ಮಲ್ಲಿರುವ ಯಾರೂ ಕ್ವಾರೆಂಟೈನ್...

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ಮೊಗರ್ಪಣೆ ಸೇತುವೆಯ ದುರಸ್ತಿ

*ಪೈಚಾರು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸಮಿತಿಯ ಸದಸ್ಯರು ಮೊಗರ್ಪಣೆ ಸೇತುವೆಯ ದುರಸ್ತಿ ಗೊಂಡಿರುವ ಭಾಗವನ್ನು ಕಾಂಕ್ರೀಟ್ ತುಂಬಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟರು*. ಕಳೆದ ಬಾರಿ ಕೆಆರ್ ಡಿಸಿಎಲ್ ವತಿಯಿಂದ ರಸ್ತೆ ಡಾಮರೀಕರಣ ಸಂದರ್ಭದಲ್ಲಿ ಸೇತುವೆಯ ಮೇಲ್ಭಾಗಕ್ಕೆ ಸಂಪೂರ್ಣ ಡಾಮರೀಕರಣ ಗೊಳಿಸಲಾಗಿತ್ತು. ಆದರೆ ದಿನಗಳು ಕಳೆದಂತೆ ಸೇತುವೆಯ ಸಸ್ಪೆನ್ಸನ್ ಜಾಯಿಂಟ್ ಬಳಿ ಡಾಮರು ಬಿಟ್ಟು ಹೋಗಿದ್ದು...
error: Content is protected !!