ಹಿರಿಯ ಪತ್ರಕರ್ತ, ಸುಳ್ಯ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಜೆ.ಕೆ. ರೈ ನಿಧನ

ಸುಳ್ಯ: ಸುಳ್ಯದ ಗಾಂಧಿನಗರ ನಿವಾಸಿ, ಹಿರಿಯ ಪತ್ರಕರ್ತ ಹಾಗೂ ಸುಳ್ಯ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಜೆ.ಕೆ. ರೈ ಅವರು ಅ.31ರಂದು ನಿಧನರಾದರು.

. . . . . . . . .

ನಿವೃತ್ತ ಫಾರೆಸ್ಟರ್ ನಾರಾಯಣ ರೈ ಹಾಗೂ ಡಿ. ಕಮಲ ರೈ ದಂಪತಿಯ ಪುತ್ರರಾದ ಜೆ.ಕೆ. ರೈ ಅವರು ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದ ಅವರನ್ನು ಅ.31ರಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಆಲೆಟ್ಟಿ ನಾರ್ಕೋಡಿನಲ್ಲಿರುವ ಮನೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.

. . . . . . .

ಪಿ.ಯು. ಶಿಕ್ಷಣದ ಬಳಿಕ ವೃತ್ತಿಪರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಬಳಿಕ ‘ಚೈತ್ರ ಡ್ರೈವಿಂಗ್ ಸ್ಕೂಲ್’ ಎಂಬ ವಾಹನ ಚಾಲನಾ ತರಬೇತಿ ಕೇಂದ್ರವನ್ನು ಆರಂಭಿಸಿ ಮುನ್ನಡೆಸಿದ್ದರು. ನಂತರ ಸಂಜೆ ಪತ್ರಿಕೆಯೊಂದರ ವರದಿಗಾರರಾಗಿ ಕಾರ್ಯನಿರ್ವಹಿಸಿದ ಅವರು, ಅಬ್ದುಲ್ ಸತ್ತಾರ್ ಗೋರೆಡ್ಕ ಅವರ ಬಳಿಕ ‘ಪಯಸ್ವಿನಿ’ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

ಸುಳ್ಯದಲ್ಲಿ ಪ್ರಥಮ ಬಾರಿಗೆ ಪತ್ರಕರ್ತರ ಸಂಘ ಸ್ಥಾಪನೆಯಾದಾಗ ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು, ನಂತರ ಸುಳ್ಯ ಪ್ರೆಸ್ ಕ್ಲಬ್ ರಚನೆಯಾದಾಗಲೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದ ಅವರು, ಸುಳ್ಯದ ಪತ್ರಿಕಾ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಜಯಲಕ್ಷ್ಮಿ, ಪುತ್ರಿ ಶಮಿತಾ ರೈ (ಸಾಫ್ಟ್‌ವೇರ್ ಇಂಜಿನಿಯರ್), ಪುತ್ರ ಪ್ರಮಿತ್ ರೈ (ಸೈಂಟ್ ಜೋಸೆಫ್ ಹೈಸ್ಕೂಲ್ 8ನೇ ತರಗತಿ ವಿದ್ಯಾರ್ಥಿ), ತಂದೆ ನಾರಾಯಣ ರೈ, ಸುಳ್ಯ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ರಾಮಕೃಷ್ಣ ರೈ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಹರಿಕೃಷ್ಣ ರೈ ಸೇರಿದಂತೆ ಬಂಧುಮಿತ್ರರನ್ನು ಅಗಲಿದ್ದಾರೆ.

ಜೆ.ಕೆ. ರೈ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನ.1ರಂದು ಬೆಳಗ್ಗೆ 10 ಗಂಟೆಗೆ ಕೊಡಿಯಾಲಬೈಲ್‌ನ ಮುಕ್ತಿಧಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading