Ad Widget

ಕೇಂದ್ರ ಸರಕಾರದಿಂದ ಅನ್ ಲಾಕ್-3 ಹೊಸ ಮಾರ್ಗ ಸೂಚಿ ಪ್ರಕಟ : ಆಗಸ್ಟ್ 31ರವರೆಗೆ ಶಾಲಾರಂಭವಿಲ್ಲ : ಆ. 5 ರಿಂದ ನೂತನ ನಿಯಮ ಜಾರಿ : ಜಿಮ್, ಸ್ವಿಮ್ಮಿಂಗ್, ಯೋಗಕ್ಕೆ ಅನುಮತಿ

ಕೊರೊನಾ ವೈರಸ್ ಭೀತಿಯಿಂದ ಹೇರಿದ್ದ ಲಾಕ್‍ಡೌನ್ ಬಗ್ಗೆ ಕೇಂದ್ರ ಸರಕಾರ ಇದೀಗ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ. ಅನ್ ಲಾಕ್ 3.0 ನಿಯಮಗಳು ಅಗಸ್ಟ್ 1 ರಿಂದ ಜಾರಿಯಾಗಲಿದೆ. ಇದುವರೆಗೆ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ರದ್ದು ಮಾಡಲಾಗಿದೆ. ಆ.31 ರವರೆಗೆ ಶಾಲಾ-ಕಾಲೇಜು ತೆರೆಯುವಂತಿಲ್ಲ. ಆಗಸ್ಟ್ 5 ರಿಂದ ಯೋಗ, ಜಿಮ್, ಸ್ವಿಮ್ಮಿಂಗ್ ಪೂಲ್ ನಡೆಸಲು ಅವಕಾಶ...

ಗುತ್ತಿಗಾರಿನಲ್ಲಿ 109 ಮಂದಿಯ ಉಚಿತ ಕೋವಿಡ್ ಪರೀಕ್ಷೆ – ಎಲ್ಲಾ ವರದಿ ನೆಗೆಟಿವ್

ತಾಲೂಕು ಆರೋಗ್ಯ ಇಲಾಖೆ, ಕೋವಿಡ್ ನಿಗ್ರಹ ದಳ ಮತ್ತು ಗುತ್ತಿಗಾರು ಗ್ರಾಮ ಪಂಚಾಯತ್ ಇವುಗಳ ಸಹಯೋಗದೊಂದಿಗೆ ಉಚಿತ ಕೋವಿಡ್ ಪರೀಕ್ಷೆ ಗುತ್ತಿಗಾರಿನ ಪಂಚಾಯತ್ ಪ. ವರ್ಗದ ಸಭಾಂಗಣದಲ್ಲಿ ಜು.29 ರಂದು ನಡೆಯಿತು.ಗುತ್ತಿಗಾರು ಗ್ರಾ ಪಂ ಮಾಜಿ ಅಧ್ಯಕ್ಷ ಅಚ್ಯುತ ಗುತ್ತಿಗಾರು ಕಾರ್ಯಕ್ರಮ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ...
Ad Widget

ಕಳಂಜ ಗ್ರಾಮದ ವ್ಯಕ್ತಿಗೆ ಕೊರೊನಾ ಪಾಸಿಟಿವ್

ಕಳಂಜ ಗ್ರಾಮದ ಮಣಿಮಜಲಿನ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ಇವರು ಇತ್ತೀಚೆಗೆ ತಮ್ಮ ಮನೆಯಲ್ಲಿ ಕ್ವಾರಂಟೈನ್ಗೆ ಒಳಪಟ್ಟಿದ್ದರು. ಇದೀಗ ವರದಿ ಕೈಸೇರಿದ್ದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮಾಜಿ ಶಾಸಕ ಕೂಜುಗೋಡು ಕಟ್ಟೆಮನೆ ದಿ. ವೆಂಕಟ್ರಮಣ ಗೌಡರ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆ

ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ನೇತೃತ್ವದಲ್ಲಿ ಇಂದು 2 ವಿಶೇಷ ಲಕೋಟೆಗಳು ಬಿಡುಗಡೆಗೊಳಿಸಲ್ಪಟ್ಟಿತು . ಪುತ್ತೂರು ಅಂಚೆ ವಿಭಾಗೀಯ ತರಬೇತಿ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧಾರ್ಮಿಕ ಚಿಂತನಕಾರ , ಸಾಮಾಜಿಕ ಸುಧಾರಕ , ರಾಜಕೀಯ ಹುರಿಯಾಳು ಮದ್ರಾಸು ರಾಜ್ಯದಡಿಯಲ್ಲಿ ಪ್ರಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಅವಿಭಜಿತ ಪುತ್ತೂರು ಕ್ಷೇತ್ರದಿಂದ ಪ್ರಥಮ ಬಾರಿಗೆ...

ಸಂಪುಟ ಪುನರ್ ರಚನೆ ಶೀಘ್ರ : ಸುಳ್ಯ ಶಾಸಕ ಎಸ್.ಅಂಗಾರ ಮಂತ್ರಿ ಸಾಧ್ಯತೆ ಹೆಚ್ಚು

ಬಿ.ಎಸ್ ಯಡಿಯೂರಪ್ಪ ‌ನೇತ್ರತ್ವದ ರಾಜ್ಯ ಸರ್ಕಾರವು ಒಂದು ವರ್ಷದ ಅವಧಿ ಪೂರೈಸಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸುವ ಸಾಧ್ಯತೆ ಇದ್ದು, ಸುಳ್ಯ ಶಾಸಕ ಎಸ್.ಅಂಗಾರರು ಸಚಿವರಾಗುವ ಸಾಧ್ಯತೆ ನಿಚ್ಚಳವಾಗಿದೆ. ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಮುಜುರಾಯಿ ಇಲಾಖೆ ಮಂತ್ರಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕೈ ಬಿಟ್ಟು ಇವರ ಬದಲಿಗೆ ಅಂಗಾರರನ್ನು ಮಂತ್ರಿ ಸ್ಥಾನಕ್ಕೆ...

ಡಿಸಿ ಸಿಂಧು ರೂಪೇಶ್ ಗೆ ಜಾಲತಾಣದಲ್ಲಿ ಕೊಲೆ ಬೆದರಿಕೆಯ ಸಂದೇಶ ಹಾಕಿದ್ದ ಬಜ್ಪೆ ನಿವಾಸಿ ಪೊಲೀಸ್ ವಶಕ್ಕೆ

ಮಂಗಳೂರು: ವಾಟ್ಸ್ ಆಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧು ರೂಪೇಶ್ ಅವರಿಗೆ ಬಹಿರಂಗ ಕೊಲೆ ಬೆದರಿಕೆ ಒಡ್ಡಿದ್ದ ಆರೋಪದಲ್ಲಿ ಮೂಡಬಿದ್ರೆ ಠಾಣಾ ಪೊಲೀಸರು ಬಜ್ಪೆ ನಿವಾಸಿ ರಂಜಿತ್(25) ಎಂಬಾತನನ್ನು ಬಂಧಿಸಿದ್ದಾರೆ. ಮೂಡಬಿದ್ರೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.ಗೋಸಾಗಾಟ ಮಾಡುವ ವ್ಯಾಪಾರಿಗಳಿಗೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧು...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(29.07.2020 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಆಂಟಿಗೆ ಕಿಸ್ ಕೊಡುವ ಚಪಲ – ಅಜ್ಜನಿಗೆ ಅಂಟಿದ ಕೊರೊನ

ಪುತ್ತೂರು : ಕೊರೊನಾ ದಿನದಿಂದ ದಿನಕ್ಕೆ ಎಲ್ಲೆಡೆ ವ್ಯಾಪಿಸುತ್ತಲೇ ಇದೆ . ಕೆಲವು ಕಡೆಗಳಲ್ಲಿ ಜನ ಮನೆಯಿಂದ ಹೊರಗೆ ಬರಲೂ ಭಯಪಡುವ ಸನ್ನಿವೇಶ ಇದೆ . ಇದೆಲ್ಲದರ ನಡುವೆ ಒಳಮೊಗ್ರು ಗ್ರಾಮದ ಪಕ್ಕದ ಗ್ರಾಮದ ಮುದುಕನೊಬ್ಬ ಆಂಟಿಯೊಬ್ಬಳಿಗೆ ಕಿಸ್ ಕೊಟ್ಟಿದ್ದರಿಂದ ಕೊರೊನಾ ಮೈಮೇಲೆ ಮೆತ್ತಿಕೊಂಡಿದ್ದಾರೆ . ರಸಿಕ ಮನೋಭಾವದ ಈ ಮುದುಕ ಚಪಲ ಚೆನ್ನಿಗರಾಯನಾಗಿದ್ದು ,...

ಕನಕಮಜಲು ಯುವಕ ಮಂಡಲದ ವತಿಯಿಂದ ಮನೆ ಮನೆ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ ಕನಕಮಜಲು ಇದರ ಆಶ್ರಯದಲ್ಲಿ ವರ್ಷದಲ್ಲಿ 15 ಮನೆಗಳಿಗೆ ಉತ್ತಮ ತಳಿಯ ಹಣ್ಣಿನ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು. ಯುವಕ ಮಂಡಲದಲ್ಲಿ ಈ ಹಿಂದೆ ಅಧ್ಯಕ್ಷರಾಗಿ ದುಡಿದು ಪೂರ್ವಧ್ಯಕ್ಷರಾಗಿರುವ ಸುರೇಶ ಗೌಡ ಕುದ್ಕುಳಿ, ತೀರ್ಥರಾಮ ಗೌಡ ಸಾರಕೂಟೆಲು, ಶ್ರೀಧರ ಗೌಡ ಕುತ್ಯಾಳ , ಭಾಸ್ಕರ ಗೌಡ ನರಿಯೂರು, ಹೇಮಂತ್ ಮಠ...

ಇಂದು ಭಾರತಕ್ಕೆ ಆಗಮಿಸಲಿವೆ ರಫೇಲ್ ಯುದ್ಧ ವಿಮಾನಗಳು

ಭಾರತದ ವಾಯುಪಡೆಯ ಬಲ ವೃದ್ಧಿಸಲಿರುವ ರಫೇಲ್ ಯುದ್ಧ ವಿಮಾನಗಳ ಮೊದಲ ತಂಡ ಫ್ರಾನ್ಸ್‌ನಿಂದ ಸೋಮವಾರ ಹೊರಟಿವೆ. 36 ವಿಮಾನಗಳ ಪೈಕಿ ಐದು ವಿಮಾನಗಳು ಹರ್ಯಾಣದ ಅಂಬಾಲದಲ್ಲಿರುವ ವಾಯು ನೆಲೆಗೆ ಬುಧವಾರ ಬಂದಿಳಿಯಲಿವೆ. ಈ ಹಿನ್ನೆಲೆಯಲ್ಲಿ ಅಂಬಾಲ ವಾಯು ನೆಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ...
Loading posts...

All posts loaded

No more posts

error: Content is protected !!