Ad Widget

ಸುಳ್ಯ : ಶಾರದಾ ಮಹಿಳಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಕುರಿತು ಉಪನ್ಯಾಸ ; ಪತ್ರಿಕೆ ನಮ್ಮ ಸಮಾಜದ ಕನ್ನಡಿ – ಪತ್ರಕರ್ತ ಸುಧಾಕರ ಸುವರ್ಣ

. . . . . . . . .

ಸಮಾಜ ಹೇಗಿದೆ ನೋಡಲು ಪತ್ರಿಕೆಗಳನ್ನು ನೋಡಬೇಕಿದೆ. ಪತ್ರಿಕೆ ಸಮಾಜದ ಕನ್ನಡಿ ಎಂದು ಹಿರಿಯ ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು.
ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸುಳ್ಯ ಇದರ ವತಿಯಿಂದ ಶಾರದಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪತ್ರಿಕೋದ್ಯಮದ ಕುರಿತು ಉಪನ್ಯಾಸ ನೀಡಿದರು. ಸಹಜವಲ್ಲದ ಘಟನೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳು ಪತ್ರಿಕೆಗಳಲ್ಲಿ ವರದಿಗಳಾಗಿ ಬರುತ್ತದೆ. ಪತ್ರಿಕೆಗಳಿಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜನಸಾಮಾನ್ಯರಿಗೆ ಇರಬೇಕಾಗಿದೆ ಎಂದರು.

. . . . . . .

ಕಾರ್ಯಕ್ರಮದ ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಕೆ. ಮಾತನಾಡಿದರು, ಕಾರ್ಯಕ್ರಮದ ಆದ್ಯಕ್ಷತೆಯನ್ನು ದ.ಕ.ಗೌಡ ವಿದ್ಯಾಸಂಘದ ಪ್ರ.ಕಾರ್ಯದರ್ಶಿ ರೇವತಿ ನಂದನ್, ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್, ಕಾರ್ಯದರ್ಶಿ ತೇಜೆಶ್ವರ ಕುಂದಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ದುರ್ಗಾಕುಮಾರ್ ನಾಯರ್ ಕೆರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.‌ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಗಂಗಾಧರ ಕಲ್ಲಪ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.‌ ದಯಾನಂದ ಕಲ್ನಾರ್ ಸ್ವಾಗತಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading