Ad Widget

ಪೆರುವಾಜೆ : ನೂತನ ಬ್ರಹ್ಮರಥದ ಭೂಮಿ‌ ಸ್ಪರ್ಶ ಕಾರ್ಯಕ್ರಮರಥ ಬೀದಿಯಲ್ಲಿ ಪ್ರಾಯೋಗಿಕ ಸಂಚಾರ : ಭಕ್ತ ವೃಂದ ಪುಳಕ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಸುಮಾರು 100 ವರ್ಷಗಳ ಬಳಿಕ ಬ್ರಹ್ಮರಥ ನಿರ್ಮಾಣಗೊಂಡಿದ್ದು ಜ.19 ರಂದು ಐತಿಹಾಸಿಕ ಬ್ರಹ್ಮರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ನೂತನ ಬ್ರಹ್ಮರಥದ ಭೂಮಿ ಸ್ಪರ್ಶ ಕಾರ್ಯಕ್ರಮವು ಜ.5 ರಂದು ನೆರವೇರಿತು. ಬೆಳಗ್ಗೆ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ...

ಸುಳ್ಯ ;ರಾಮ ಭಜನಾ ಮಂದಿರ ಬ್ರಹ್ಮಕಲಶೋತ್ಸವದ ಮನವಿ ಪತ್ರ ಬಿಡುಗಡೆ

ಫೆ.25 ರಿಂದ 28 ರ ತನಕ ಸುಳ್ಯದ ಶ್ರೀ ರಾಮ ಪೇಟೆಯ ಶ್ರೀ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿದೆ. ಇದರ ಪೂರ್ವಭಾವಿ ಸಿದ್ಧತೆಯ ಅಂಗವಾಗಿ ಜ.5ರಂದು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಮನವಿ ಪತ್ರ ಬಿಡುಗಡೆಗೊಳಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ...
Ad Widget

ಪೆರ್ನಾಜೆ ಕಾಲೇಜಿನಲ್ಲಿ “ಪೆರ್ನಾಜೆ ಪ್ರತಿಭಾಲಾಲಿತ್ಯ 2023-24” ಕಾರ್ಯಕ್ರಮ

ಪೆರ್ನಾಜೆ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನಲ್ಲಿ ಜ.2 ರಂದು "ಪೆರ್ನಾಜೆ ಪ್ರತಿಬಾಲಾಲಿತ್ಯ 2023 24 ರ ಪೆರ್ನಾಜೆ ಶ್ರೀ ದಿ. ಸೀತಾರಾಮ್ ಭಟ್ ವೇದಿಕೆಯಲ್ಲಿ ನಡೆಯಿತು ಕಾರ್ಯಕ್ರಮವನ್ನು ಪರಮಪೂಜ್ಯ ಸಾದ್ವಿ ಶ್ರೀ ಶ್ರೀ ಮಾತಾ ನಂದಮಯೀ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಈ ಸಂಸ್ಥೆ ಉತ್ತರೋತ್ತರ...

ಗುತ್ತಿಗಾರು : ತಾಲೂಕು ಮಟ್ಟದ ಕನ್ನಡ ನಾಡ ಗೀತೆ ಸ್ಪರ್ಧೆ : ಕೆ.ಪಿ.ಎಸ್ ಬೆಳ್ಳಾರೆ ಪ್ರಥಮ – ಬ್ಲೆಸ್ಡ್ ಕುರಿಯಾಕೋಸ್ ಗುತ್ತಿಗಾರು ದ್ವಿತೀಯ

ಸೈಂ ಟ್ ಮೇರಿಸ್ ಚರ್ಚ್ ಗುತ್ತಿಗಾರು, ಹಾಗೂ ಬೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು ,ಕೆ.ಎಸ್.ಎಂ.ಸಿ.ಎ. ಗುತ್ತಿಗಾರು ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ,'ಕರ್ನಾಟಕ ಸಂಭ್ರಮ ೫೦'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಹಾಗೂ ಬೆಳ್ತಂಗಡಿ ಧರ್ಮ ಪ್ರಾಂತ್ಯದ ರಜತ ಮಹೋತ್ಸವ ಪ್ರಯುಕ್ತ ಸುಳ್ಯ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಕನ್ನಡ...

ಬಳ್ಪ : ವಿದ್ಯುತ್ ಶಾಕ್ ಪವರ್ ಮ್ಯಾನ್ ಮೃತ್ಯು

ಮೆಸ್ಕಾಂ ನ ಪಂಜ ಶಾಖೆಯ ಪವರ್ ಮ್ಯಾನ್ ಗೆ ಬಳ್ಪ ಗ್ರಾಮದ ಪಾದೆ ಸಮೀಪ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಮೃತಪಟ್ಟ ಪವರ್ ಮ್ಯಾನ್ ನನ್ನು ಹಾಸನ ಹೊಳೆನರಸಿಪುರ ಮೂಲದ ರಘು (33) ಎಂದು ಗುರುತಿಸಲಾಗಿದೆ. ವಿವಾಹಿತರಾಗಿರುವ ಅವರ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಮೆಸ್ಕಾಂ, ಹಾಗೂ ಪೋಲೀಸ್ ಇಲಾಖೆಯ...

ಬಳ್ಪ : ವಿದ್ಯುತ್ ಶಾಕ್ ಲೈನ್ ಮ್ಯಾನ್ ಗಂಭೀರ

ಮೆಸ್ಕಾಂ ನ ಪಂಜ ಶಾಖೆಯ ಲೈನ್ ಮ್ಯಾನ್ ಗೆ ಬಳ್ಪದಲ್ಲಿ ವಿದ್ಯುತ್ ಶಾಕ್ ಹೊಡೆದು ಗಂಭೀರ ಗಾಯಗೊಂಡ ಘಟನೆ ಇದೀಗ ವರದಿಯಾಗಿದ್ದು, ಗಾಯಗೊಂಡು ಲೈನ್ ಮ್ಯಾನ್ ನನ್ನು ರಘು ಎಂದು ಗುರುತಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಸುಳ್ಯ ಪಯಸ್ವಿನಿ ಜೆಸಿಐ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಜೆಸಿ ಗುರುಪ್ರಸಾದ್ ನಾಯಕ್, ಕಾರ್ಯದರ್ಶಿಯಾಗಿ ಜೆಸಿ ಪ್ರಕಾಶ್ಚಂದ್ರ

ಸುಳ್ಯ ಪಯಸ್ವಿನಿ ಜೆಸಿಐ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜ.3 ರಂದು ನಡೆಸಲಾಯಿತು. ಘಟಕದ ನೂತನ ಅಧ್ಯಕ್ಷರಾಗಿ ಜೆಸಿ ಹೆಚ್ ಫ್ ಗುರುಪ್ರಸಾದ್ ನಾಯಕ್ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ಜೆಸಿ ಪ್ರಕಾಶ್ಚಂದ್ರ , ಕೋಶಾಧಿಕಾರಿಯಾಗಿ ಜೆಸಿ ಶೋಭ ಅಶೋಕ್ ಚೂಂತಾರ್ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿಕಟಪೂರ್ವಾದ್ಯಕ್ಷರಾಗಿ ಜೆಸಿ ನವೀನ್ ಕುಮಾರ್ ಅಜ್ಜಾವರ ಉಪಾಧ್ಯಕ್ಷರಾಗಿ(...

ಮಡಪ್ಪಾಡಿ : ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ

ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ ಹಾಗೂ ಯುವಕ ಮಂಡಲ ಮಡಪ್ಪಾಡಿ ವತಿಯಿಂದ ಪುಣ್ಯಭೂಮಿ ಅಯೋಧ್ಯೆಯಿಂದ ಬಂದ ಪವಿತ್ರ ಮಂತ್ರಾಕ್ಷತೆಯ ವಿತರಿಸುವ ಕಾರ್ಯಕ್ರಮ ಜ.1 ರಿಂದ ಪ್ರಾರಂಭಗೊಂಡಿತು. ಗ್ರಾಮದ ಪ್ರತಿ ಮನೆಗೆ ವಿತರಿಸುವ ಈ ಕಾರ್ಯದಲ್ಲಿ ಭಜನಾ ಮಂಡಳಿ ಹಾಗೂ ಯುವಕ ಮಂಡಲದ ಸದಸ್ಯರು ಹಾಗೂ ಎಲ್ಲಾ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪಿಂಡಿಮನೆ ; ಚಿರತೆ ಪ್ರತ್ಯಕ್ಷ

ಅರಂತೋಡು ಮರ್ಕಂಜ ರಸ್ತೆಯ ಪಿಂಡಿಮನೆ ಬಳಿ ವಾಹನ ಸವಾರರಿಗೆ ಜ.4 ರಂದು ರಾತ್ರಿ 9 ಗಂಟೆ ವೇಳೆಗೆ ರಸ್ತೆ ಬದಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ವಾಹನ‌ ಸವಾರರು ತಿಳಿಸಿದ್ದಾರೆ. ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಬೇಕಾಗಿದೆ.
error: Content is protected !!