Ad Widget

ಫೆ.1,2 : ವಳಲಂಬೆ ಜಾತ್ರೋತ್ಸವ – ಇಂದು ಗೊನೆ ಮುಹೂರ್ತ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವದ ಪ್ರಯುಕ್ತ ದೈವ-ದೇವರುಗಳಿಗೆ ಜ.25ರಂದು ಗೊನೆ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಿ.ಕೆ ಬೆಳ್ಯಪ್ಪ ಗೌಡ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ, ಪ್ರಧಾನ ಅರ್ಚಕರಾದ ಪರಮೇಶ್ವರ ಭಟ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಸೇವಾ ಸಮಿತಿ ಸದಸ್ಯರು...

ವಿಡಿಯೋ ಕಾನ್ಫರೆನ್ಸ್ ಮೂಲಕ ನವಮತದಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಬಿಜೆಪಿ ಯುವ ಮೋರ್ಚಾದ ವತಿಯಿಂದನಮೋ ನವಮತದಾರ ಸಮ್ಮೇಳನ ದ ಕಾರ್ಯಕ್ರಮವು ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯದಲ್ಲಿ ಇಂದು ನಡೆಯಿತು.ಸಮ್ಮೇಳನದ ಸಲುವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ನವಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ...
Ad Widget

ಪ. ಜಾತಿ/ಪ. ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ನಾಮನಿರ್ದೇಶಿತ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

2023-24ನೇ ಸಾಲಿನಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವ ಸಲುವಾಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದ್ದು ಈ ಸಮುದಾಯಗಳಿಗೆ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ನೀಡಲು ಜಿಲ್ಲಾ ಮಟ್ಟದ ಸಮಿತಿಗೆ ನಾಮನಿರ್ದೇಶಿತ ಸದಸ್ಯರ ಅವಶ್ಯಕತೆ ಇರುತ್ತದೆ. ನಾಮನಿರ್ದೇಶಿತ ಸದಸ್ಯರ ಕಾರ್ಯವಧಿಯು 2 ವರ್ಷಗಳಾಗಿರುತ್ತದೆ. ಅದರಂತೆ ಅಲೆಮಾರಿ ಸಮುದಾಯಗಳ...

ಸುಳ್ಯ‌ ವಿಧಾನಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡನೇ ಭಾರಿ ಆಯ್ಕೆಯಾದ ಶಾಫಿ ಕುತ್ತಮೊಟ್ಟೆ

ಶಾಫಿ ಕುತ್ತಮೊಟ್ಟೆಯವರು ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡನೇ ಭಾರಿ ಆಯ್ಕೆಯಾಗಿದ್ದಾರೆ. ಇಂಟೆಕ್ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿಯವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಧ್ಯಕ್ಷರಾದ ಮನೋಹರ್ ಶೆಟ್ಟಿಯವರು ನೇಮಕಗೊಳಿಸಿ ಆದೇಶ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಶಾಫಿಯವರು ಯೂತ್ ಕಾಂಗ್ರೆಸ್ ನಲ್ಲಿ ವಿವಿಧ ಜವಾಬ್ದಾರಿ ಹೊತ್ತು ಕೆಲಸ ಕಾರ್ಯ ನಿರ್ವಹಿಸಿದ್ದರು. 2020ರಲ್ಲಿ...

ಎನ್.ಎಂ.ಸಿ. ಕಾಲೇಜಿನಲ್ಲಿ ‘ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮ’

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಜ.25ರಂದು ‘ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮ’ವನ್ನು ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ಅವರು ‘ರಾಷ್ಟೀಯ ಮತದಾರರ ದಿನಾಚರಣೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಕಾಲೇಜಿನ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿ ಸಮೂಹವು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಪೈಕ ತರವಾಡು ಗೃಹ ಪ್ರವೇಶ, ಧರ್ಮದೈವ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ, ಧರ್ಮನಡಾವಳಿ

ಪೈಕ ಕುಟುಂಬದ ತರವಾಡು ಭಂಡಾರದ ಮನೆಯ ಗೃಹಪ್ರವೇಶ ಹಾಗೂ ಧರ್ಮದೈವ ರುದ್ರಚಾಮುಂಡಿ, ಸಪರಿವಾರ ದೈವಸಾನಿಧ್ಯಗಳ ಪೀಠ ಪ್ರತಿಷ್ಠೆ ಹಾಗೂ ಬಿಂಬ ಸಮರ್ಪಣೆ ಕಾರ್ಯಕ್ರಮ ಜ.22 ರಂದು ಹಾಗೂ ಧರ್ಮನಡಾವಳಿ ಜ. 23 ರಂದು ನಡೆಯಿತು. ಕುಟುಂಬದ ಹಿರಿಯರಾದ ಮೇದಪ್ಪ ಗೌಡ ಪೈಕ ಮತ್ತು ಕುಟುಂಬಸ್ಥರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಸಂಗೀತೋತ್ಸವದಲ್ಲಿ ಭಾಗವಹಿಸಿದ ಸುಳ್ಯದ ಗಣೇಶ್ ಮ್ಯೂಸಿಕಲ್ಸ್ ತಂಡ

ಗಣೇಶ್ ಮ್ಯೂಸಿಕಲ್ಸ್ ತಂಡಮಂಗಳೂರಿನ ಪುರಭವನದಲ್ಲಿ ಜ.21 ರಂದು ನಡೆದ ಕಡಲ ನಾಡ ಸಂಗೀತೋತ್ಸವದಲ್ಲಿ ಗಣೇಶ್ ಮ್ಯೂಸಿಕಲ್ಸ್ ಸುಳ್ಯ, ಪುತ್ತೂರು, ಕಾಸರಗೋಡು, ಮಡಿಕೇರಿ ಶಾಖೆಯ ಸದಸ್ಯರಿಂದ ನಾಡಗೀತೆ ಪ್ರದರ್ಶನಗೊಂಡಿತು. ಸುಳ್ಯದ ಬಿ.ಎಸ್ ಗಣೇಶ್ ಆಚಾರ್ಯ ಇವರ ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬಂದಿತ್ತು. ಈ ತಂಡದಲ್ಲಿ ಕಲಾವಿದರುಗಳಾದ ಡಾ.ಧರ್ಮಸ ಊಮನ್, ಹೋನಪ್ಪ ಮಡಿಕೇರಿ, ಯೂಸುಫ್ ವಿಟ್ಲ, ಗಣಪತಿ ಆಚಾರ್ಯ ಪುತ್ತೂರು...

ಮಂಗಳೂರಿನಲ್ಲಿ ನಡೆದ ಸಂಗೀತೋತ್ಸವದಲ್ಲಿ ಭಾಗವಹಿಸಿದ ಸುಳ್ಯದ ಗಣೇಶ್ ಮ್ಯೂಸಿಕಲ್ಸ್ ತಂಡ

ಮಂಗಳೂರಿನ ಪುರಭವನದಲ್ಲಿ ಜ.21 ರಂದು ನಡೆದ ಕಡಲ ನಾಡ ಸಂಗೀತೋತ್ಸವದಲ್ಲಿ ಗಣೇಶ್ ಮ್ಯೂಸಿಕಲ್ಸ್ ಸುಳ್ಯ, ಪುತ್ತೂರು, ಕಾಸರಗೋಡು, ಮಡಿಕೇರಿ ಶಾಖೆಯ ಸದಸ್ಯರಿಂದ ನಾಡಗೀತೆ ಪ್ರದರ್ಶನಗೊಂಡಿತು. ಸುಳ್ಯದ ಬಿ.ಎಸ್ ಗಣೇಶ್ ಆಚಾರ್ಯ ಇವರ ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬಂದಿತ್ತು. ಈ ತಂಡದಲ್ಲಿ ಕಲಾವಿದರುಗಳಾದ ಡಾ.ಧರ್ಮಸ ಊಮನ್, ಹೋನಪ್ಪ ಮಡಿಕೇರಿ, ಯೂಸುಫ್ ವಿಟ್ಲ, ಗಣಪತಿ ಆಚಾರ್ಯ ಪುತ್ತೂರು , ವಿಜಯ...

ಪರೀಕ್ಷಾ ಪೇ ಚರ್ಚಾ -7 ಕಾರ್ಯಕ್ರಮದಲ್ಲಿ ವೈಜ್ಞಾನಿಕ ಮಾದರಿ ಪ್ರದರ್ಶಿಸಲು ದೆಹಲಿಗೆ ತೆರಳಿದ ಸುಳ್ಯದ ಅಚಲ್ ಬಿಳಿನೆಲೆ

ವಿದ್ಯಾರ್ಥಿಗಳಿಗೆ ಬಹಳ ಪ್ಕಾಮುಖ್ಯತೆಯನ್ನು ನೀಡುವ ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿನೂತನ ಕಾರ್ಯಕ್ರಮಗಳಲ್ಲಿ ಒಂದಾದ “ಪರೀಕ್ಷಾ ಪೇ ಚರ್ಚಾ-7” ಕಾರ್ಯಕ್ರಮದ ಸಂದರ್ಭದಲ್ಲಿ ವೈಜ್ಞಾನಿಕ ಮಾದರಿಯನ್ನು ಪ್ರದರ್ಶಿಸಲು ಜವಾಹರ್ ನವೋದಯ ವಿದ್ಯಾಲಯ ಮುಡಿಪು ಇಲ್ಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆಯಾಗಿದ್ದಾರೆ. ಜನವರಿ 29ರಂದು ನವದೆಹಲಿಯ ಭಾರತ್ ಮಂಟಪ (2023ರ G...
error: Content is protected !!