Ad Widget

ಗ್ರಾಮೀಣ ಭಾಗದಲ್ಲಿ ಸ್ವ ಉದ್ಯೋಗಿಗಳಿಗೆ ಸಲಕರಣೆ ಜೋಡಣೆಗೆ ಸೆಲ್ಕೋದಿಂದ ಶೇ.25 ಅನುದಾನ.

ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಯೋಜನೆಗೆ ಸೆಲ್ಕೋ ಸೋಲಾರ್ ಸಂಸ್ಥೆಯು ಬ್ಯಾಂಕುಗಳ ಆರ್ಥಿಕ ಸಹಕಾರದೊಂದಿಗೆ ಸ್ವ ಉದ್ಯೋಗ ಉಪಕರಣ ಅಳವಡಿಕೆ ಮಾಡುವವರಿಗೆ ಶೇ 25 ರಷ್ಟು ಅನುದಾನ ನೀಡಲಾಗುವುದು ಸೆಲ್ಕೋ ಸಂಸ್ಥೆಯ ಜೀವನೋಪಾಯ ಇಲಾಖೆ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಸಾದ್ ಬಿ ಅವರು ತಿಳಿಸಿದ್ದಾರೆ . ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ನವೀಕರಿಸಬಹುದಾದ...

ದಾರುಲ್ ಹಿಕ್ಮಾ ಶಾಲೆಯಲ್ಲಿ ಮೆಟ್ರಿಕ್ ಮೇಳ – ಸಂಭ್ರಮಿಸಿದ ವಿದ್ಯಾರ್ಥಿಗಳು

ಬೆಳ್ಳಾರೆ: ಇಲ್ಲಿನ‌ ದಾರುಲ್ ಹಿಕ್ಮಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮೆಟ್ರಿಕ್ ಮೇಳ( ಮಕ್ಕಳ ಸಂತೆ) ಬಹಳ ವಿಜ್ರಂಭಣೆಯಿಂದ ನಡೆಯಿತು..ಮೇಳವನ್ನು ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಮಹಮೂದ್ ಬಿ.ಎ ಅವರು ಉದ್ಘಾಟಿಸಿದರು. ಹಿಫಲ್ ವಿದ್ಯಾರ್ಥಿ ಖಾದ್ರಿಲ್ ಔಫ್ ರವರು ಖುರಾನ್ ಪಠಿಸುವುದರ ಮೂಲಕ ಕಾರ್ಯಕ್ರಮಗಳನ್ನು ಚಾಲನೆ ನೀಡಿದರು..ಮುಖ್ಯ ಅಥಿತಿಗಳಾಗಿ ಆಗಮಿಸಿದ ಸುಳ್ಯ ಅಲ್ಪ ಸಂಖ್ಯಾತ ದೊಡ್ಡ ಪ್ರಮಾಣದ...
Ad Widget

ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ಸದಸ್ಯರ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ಸುಳ್ಯ ಶಾಖೆಯ ಸದಸ್ಯರಾದ ರಝಾಕ್ ಯಂ.ಎ. ಇವರ ಡಯಾಲಿಸಿಸ್ ಚಿಕಿತ್ಸೆಗೆ ಸಹಾಯಧನದ ಮೊತ್ತ ರೂ. ಹತ್ತು ಸಾವಿರದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಜ. 17 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಶಾಖೆಯ ಪ್ರಬಂಧಕರಾದ ಕುಂಞoಬು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮಂಡೆಕೋಲು ಪ್ರಾ.ಕೃ.ಪ.ಸ.ಸಂಘದ ಪೇರಾಲು- ಅಂಬ್ರೋಟಿ ನವೀಕೃತ ಶಾಖೆ ಉದ್ಘಾಟನೆ

ಸಹಕಾರಿ ಸಂಘ ರೈತರ ಅಭಿವೃದ್ಧಿಗಾಗಿಯೇ ಹುಟ್ಟಿಕೊಂಡ ಸಂಸ್ಥೆ : ಶಾಸಕಿ ಭಾಗೀರಥಿ ಮುರುಳ್ಯ ಸುಳ್ಯ: ಸಹಕಾರಿ ಸಂಘಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾದ ಸಂಸ್ಥೆ. ಆ ಊರಿನ ರೈತರ ಅಭಿವೃದ್ದಿಗಾಗಿಯೇ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಹುಟ್ಟಿನಿಂದ ಸಾಯುವ ವರೆಗೆ ಕೃಷಿಕರಿಗೆ ಸಕಲ ಸೌಲಭ್ಯಗಳನ್ನು ನೀಡುವ ಬದ್ಧತೆ ಹೊಂದಿರುವ ಸಹಕಾರಿ ಸಂಘವನ್ನು ನಮ್ಮ ಸಂಸ್ಥೆ ಎಂಬ ಪ್ರೀತಿಯಿಂದ ಪ್ರೋತ್ಸಾಹಿಸಿ ಬೆಳೆಸಬೇಕಾದ...

ಸುಳ್ಯ ರೋಟರಿ ಸಿಟಿ ವತಿಯಿಂದ ನಾರ್ಕೋಡ್ ಶಾಲೆಗೆ ನೂತನ ಶೌಚಾಲಯಕ್ಕೆ ಗುದ್ದಲಿ ಪೂಜೆ

ಸುಳ್ಯ ರೋಟರಿ ಸಿಟಿ ವತಿಯಿಂದ ನಾರ್ಕೋಡ್ ಶಾಲೆಗೆ ನೂತನ ಶೌಚಾಲಯಕ್ಕೆ ಗುದ್ದಲಿಪೂಜೆಯನ್ನು ಉದ್ಯಮಿ ರೋ ಹೇಮಂತ ಕಾಮತ್ ನೆರವೇರಿಸಿದರು. ಈ ಸಂಸ್ಥೆಗೆ ರೋಟರಿ ಗವರ್ನರ್ ಭೇಟಿ ಕಾರ್ಯಕ್ರಮದಂದು ಉದ್ಘಾಟನೆ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಹೇಳಿದರು. ರೋ ಗಿರೀಶ್ ನಾರ್ಕೋಡ್ ಗುದ್ದಲಿಪೂಜೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ರೋಟರಿ ಸದಸ್ಯರ ಸಹಕಾರದಿಂದ ಈ ಯೋಜನೆ ರೂಪಿಸಿರುವುದಾಗಿ ಹೇಳಿದರು. ಮುಖ್ಯ...

ಹರಿಹರ,ಕೊಲ್ಲಮೊಗ್ರು ಅವಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ; ಜನವರಿ 21 ರ ಪೂರ್ವಭಾವಿ ಸಭೆಗೆ ಆಹ್ವಾನ

ಎತ್ತ ನೋಡಿದರೂ ಬರೀ ಕಾಡು, ಕಾಡಿನೊಳಗೆ ಬದುಕು ಕಟ್ಟಿಕೊಂಡವರದ್ದು ಹಲವು ಪಾಡು. ಒಂದೊಮ್ಮೆ ಕುಗ್ರಾಮವೆಂಬ ಹಣೆ ಪಟ್ಟಿಕೊಂಡ ಕೊಲ್ಲಮೊಗ್ರು, ಹರಿಹರ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ (ಕಂದಾಯ ಗ್ರಾಮ) ಅಭಿವೃದ್ದಿಯ ಗೆರೆ ಮೂಡಿ ಕುಗ್ರಾಮ ಪಟ್ಟದಿಂದ ಹಳ್ಳಿಗಳು ಕಳಚಿಕೊಂಡಿದೆ. ಈ ಎರಡು ಪಂಚಾಯತ್ ವ್ಯಾಪ್ತಿ ಅಭಿವೃದ್ದಿ ಕಂಡರೂ ಇನ್ನೂ ನಿವಾರಣೆಯಾಗದೆ, ಪರಿಹಾರ ಕಾಣದೆ ಹಲವು ಸಮಸ್ಯೆಗಳು ಬಾಕುಳಿದಿವೆ....

ಮೇನಾಲ ಶ್ರೀ ವಯನಾಟ್ಟ್ ಕುಲವನ್ ದೈವಸ್ಥಾನದಲ್ಲಿ ಭತ್ತ ಅಳೆಯುವ ಮೂಲಕ ದೈವಕಟ್ಟು ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಶ್ರೀ ವಯನಾಟ್ಟ್ ಕುಲವನ್ ದೈವಂಕಟ್ಟು ಮಹೋತ್ಸವದ (ಕೂಂ ಅಳಕ್ಕಲ್) ಭತ್ತ ಅಳೆಯುವ ಕಾರ್ಯಕ್ರಮ ಜ.17ರಂದು ನಡೆಯಿತು. ಇದರೊಂದಿಗೆ ದೈವಕಟ್ಟು ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಬೆಳಗ್ಗೆ 9.57 ರಿಂದ10.40 ರ ಒಳಗೆ (ಕೂಂ ಅಳಕ್ಕಲ್) ಭತ್ತ ಅಳೆಯುವ ಕಾರ್ಯಕ್ರಮ ಮತ್ತು (ಅಡಯಾಳಂ ಕೊಡುಕ್ಕಲ್) ವೀಳ್ಯ ಕೊಡುವ ಕಾರ್ಯಕ್ರಮ ನಡೆದು, ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮತ್ತು ಅನ್ನದಾನ...

ಸುಳ್ಯ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು

ಸುಳ್ಯ ಪೊಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹಲವಾರು ರೀತಿಯಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಇತ್ತ ಸುಳ್ಯದ ಅಜ್ಜಾವರದಲ್ಲಿ ಪೋಕ್ಸೋ ಪ್ರಕರಣ ನಡೆದ ಬಗ್ಗೆ ವರದಿಯಾಗಿದೆ. ಈ ಘಟನೆಯು ಅಜ್ಜಾವರ ಗ್ರಾಮದಲ್ಲಿ ನಡೆದಿದ್ದು ಇಬ್ಬರು ಕೂಡ ಆಪ್ರಾಪ್ತರಾಗಿದ್ದಾರೆ ಎಂದು ತಿಳಿದುಬಂದಿದೆ . ಈ ಕುರಿತಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದ ಸರ ಕಳೆದುಹೋಗಿದೆ, ಸಿಕ್ಕಿದವರು ಹಿಂತುರುಗಿಸಲು ಮನವಿ

ಈ ಫೋಟೋದಲ್ಲಿ ಕಾಣುವ ಚಿನ್ನದ ಸರ ಪೆರಾಜೆ ಜ. ೧೫ ರಂದು ಸುಳ್ಯ ದ ಒಳಗೆ ಕಳೆದು ಹೋಗಿದೆ. ಸಿಕ್ಕಿದವರು ದಯವಿಟ್ಟು ಈ ಕೆಳಗಿನ ನಂಬರನ್ನು ಸಂಪರ್ಕಿಸಿ. ತಂದು ಕೊಟ್ಟ ವರಿಗೆ ಸೂಕ್ತ ಬಹುಮಾನ ಕೊಡ ಲಾಗುವುದು ೯೪೪೮೫ ೦೧೭೦೩ ,೯೯೦೦೪೧೭೧೬೫ ಎಂದು ಪ್ರಗತಿ ಆಂಬುಲೆನ್ಸ್ ಮಾಲಕರಾದ ಅಚ್ಚು ಅಶ್ರಫ್ ತಿಳಿಸಿದ್ದಾರೆ.

ಪೆರುವಾಜೆ ಜಾತ್ರೋತ್ಸವ: ಇಂದು ಶ್ರೀ ದೇವರ ಪೇಟೆ ಸವಾರಿ

ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಇಂದು ಶ್ರೀ ದೇವರ ಪೇಟೆ ಸವಾರಿ ನಡೆಯಲಿದೆ. ಇಂದು ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಗಂಟೆ 5.00ಕ್ಕೆ ಶ್ರೀ ದೇವರ ಬಲಿ...
Loading posts...

All posts loaded

No more posts

error: Content is protected !!