Ad Widget

ಜ.16 : ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ವಿಶೇಷ ಹಸಿರು ಹೊರೆಕಾಣಿಕೆ ಮೆರವಣಿಗೆ

ಪೆರುವಾಜೆ: ಪಂಜ ಸೀಮೆಯ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಜ.16 ರಂದು ಹಸುರು ಹೊರೆಕಾಣಿಕೆ ಮೆರವಣಿಗೆ ವಿಶಿಷ್ಟ ರೀತಿಯಲ್ಲಿ ನೆರವೇರಲಿದೆ. ಜ.16 ರಂದು ಸಂಜೆ 3 ಗಂಟೆಗೆ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯಿಂದ ಮೆರವಣಿಗೆಗೆ ಚಾಲನೆ ಸಿಗಲಿದೆ. ಸುಮಂಗಲಿಯರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ...

ಮಡಪ್ಪಾಡಿ : ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ – ಸನ್ಮಾನ

ಮಡಪ್ಪಾಡಿ ಗ್ರಾಮ ಪಂಚಾಯತ್‌ ಹಾಗೂ ಕೆನರಾ ಬ್ಯಾಂಕ್‌ ಗುತ್ತಿಗಾರು ಇದರ ಜಂಟಿ ಆಶ್ರಯದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಜ. 07ರಂದು ಮಡಪ್ಪಾಡಿ ಯುವಕ ಮಂಡಲ ಸಭಾ ಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಹಾಡಿಕಲ್ಲುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂ ವಿ ವಂದಿತ್‌ ಮಡಪ್ಪಾಡಿ, ಚರಿಶ್ಯ ಗಟ್ಟಿಗಾರು, ಪ್ರಮೀಳ ಬಳ್ಳಡ್ಕ ಇವರನ್ನು...
Ad Widget

ಗೂನಡ್ಕ : ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ – ಸನ್ಮಾನ

ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ ಇದರ 18 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಬ್ಲೋಸಮ್ 2024 ಸಮಾರಂಭವು ಜ.7 ರಂದು ತೆಕ್ಕಿಲ್ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪಾರ್ಮೇಡ್ ಗ್ರೂಪ್ ನ ಹಿರಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಡಾ| ಉಮ್ಮರ್ ಬೀಜದ ಕಟ್ಟೆ ಮಾತನಾಡಿ ಮಕ್ಕಳು ವಿದ್ಯಾಭಾಸದ ಕಡೆ ಗಮನ ಹರಿಸಿ...

ಐವರ್ನಾಡು : ಸ್ವಚ್ಛತಾ ಕಾರ್ಯಕ್ರಮ ಹಾಗೂ ಮ್ಯಾರಥಾನ್

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ದೇರಾಜೆ ಗೆಳೆಯರ ಬಳಗ (ರಿ)ಐವರ್ನಾಡಿನ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಪಂಚಾಯತ್ ವಠಾರ ಹಾಗೂ ಮುಖ್ಯ ರಸ್ತೆ ಯ ಬದಿಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ವಠಾರ ದಿಂದ ಬಾಂಜಿಕೋಡಿವರೆಗೆ ನಡೆಯಿತು. ಸ್ವಚ್ಛತಾ ಕಾರ್ಯಕ್ರಮದ ನಂತರ ದೇರಾಜೆ ಗೆಳೆಯರ ಬಳಗದ ವತಿಯಿಂದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ...

ಮಂಡೆಕೋಲು ಬೈಲು ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ಮಂಡೆಕೋಲು ಗ್ರಾಮದ ಮಂಡೆಕೋಲು ಬೈಲು ರಸ್ತೆ ಗೆ ಶಾಸಕರ ವಿಶೇಷ ಅನುದಾನ ರೂ. 10 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು

ಸುಬ್ರಹ್ಮಣ್ಯ : ಕೆ.ಎಸ್.ಎಸ್.ಕಾಲೇಜಿನ ವಿದ್ಯಾರ್ಥಿ ವಿನೀತ್ ದೇಹದಾಢ್ಯ ಸ್ಪರ್ಧೆಯಲ್ಲಿ ದ್ವಿತೀಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಪ್ರಥಮ ಬಿಬಿಎ ವಿದ್ಯಾರ್ಥಿ ವಿನೀತ್ ಕೆ ಇವರು ಎಸ್ಎಂಎಸ್ ಕಾಲೇಜ್ ಬ್ರಹ್ಮಾವರದಲ್ಲಿ ಜ.7ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜ್ ಮಟ್ಟದ ದೇಹದಾಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಇವರು ಪುತ್ತೂರಿನ ನೆಹರು ನಗರದ ನರೇಶ್ ಕೆ ಹಾಗೂ ಶ್ರೀಮತಿ ಸುಮಿತ್ರ ಇವರ ಪುತ್ರರಾಗಿರುತ್ತಾರೆ.

ಡಾ. ರೇಣುಕಾಪ್ರಸಾದ್‌ರಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಮಂಜೂರು

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಡಾ. ರೇಣುಕಾಪ್ರಸಾದ್ ಕೆ.ವಿ.ಯವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ನಾಳೆ ಬಿಡುಗಡೆ ಸಾಧ್ಯತೆ ಇದೆ. ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿದ್ದ ಪ್ರೊಫೆಸರ್ ಎ.ಎಸ್. ರಾಮಕೃಷ್ಣರವರ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಶಿಕ್ಷೆಗೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಇದೀಗ ಸುಪ್ರೀಂ ಕೋರ್ಟ್ ಇಂದು...

ಎಡಮಂಗಲ: ಅಸ್ತಿ ಪಂಜರ ಪತ್ತೆ

ಎಡಮಂಗಲ ಗ್ರಾಮದ ನಡುಮನೆ ಎಂಬಲ್ಲಿ ಅಸ್ತಿ ಪಂಜರ ಪತ್ತೆ ಯಾಗಿದೆ. ಸ್ಥಳೀಯ ಮನೆಯ ಕೆಲಸದ ಆಳುಗಳು ಸೊಪ್ಪು ತರಲು ಹೋದಾಗ ಮನುಷ್ಯನ ಅಸ್ತಿ ಪಂಜರ ಕಂಡು ವಿಷಯ ತಿಳಿಸಿದರೆನ್ನಲಾಗಿದೆ. ವಿಷಯ ತಿಳಿದ ಮನೆಯವರು ಬೆಳ್ಳಾರೆ ಪೋಲೀಸ್ ಇಲಾಖೆಗೆ ಮಾಹಿತಿ ತಿಳಿಸಿ, ಪೋಲೀಸರು ಆಗಮಿಸಿ ಅನಾಥ ಅಸ್ತಿ ಪಂಜರ ತನಿಖೆ ನಡೆಸುತ್ತಿದ್ದಾರೆ. ಮರದಲ್ಲಿ ಕತ್ತಿ ಕಂಡುಬಂದಿದ್ದು, ಸುಮಾರು...

ಅಡ್ಪಂಗಾಯದಲ್ಲಿ ಭವ್ಯವಾದ ಮೆರವಣಿಗೆ ಭಜನೆ ಮೂಲಕ ಮನೆಮನೆಗೆ ಅಕ್ಷತೆ ಆಮಂತ್ರಣ ತಲುಪಿಸಿದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲ

ರಾಷ್ಟ್ರದಾದ್ಯಂತ ಸಂಭ್ರಮದಲ್ಲಿ ಅಯೋಧ್ಯಪುರ ವಾಸಿ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಟೆಯು ಜನವರಿ ೨೨ ರಂದು ನಡೆಯಲಿದ್ದು ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಪ್ರತಿ ಮನೆಗೆ ಅಕ್ಷತೆ ಮತ್ತು ಆಮಂತ್ರಣ ಪತ್ರಿಕೆಯನ್ನು ನಿರಂತರವಾಗಿ ೧ ತಿಂಗಳುಗಳ ಕಾಲ ಪೂಜಿಸಿ ಮನೆಮನೆಗೆ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲ ಇದರ ನೇತೃತ್ವದಲ್ಲಿ ನೀಡಲಾಯಿತು. https://youtu.be/NvM7qbDRUJo?feature=shared ಈ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯೋಗಜಾಗೃತಿಗಾಗಿ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕಾರ್ಯಕ್ರಮ

  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯಿಂದ ದಿನಾಂಕ 07-01-2024  ಭಾನುವಾರ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಮೊಹನ್ ರಾಮ್ ಎಸ್ ಸುಳ್ಳಿ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ  ಮತ್ತು ,ಗಣೇಶಪ್ರಸಾದ ಅನುಗ್ರಹ ಎಜುಕೇಶನ್ ಟ್ರಸ್ಟ್ ಸುಬ್ರºÀätå , ಯೋಗೀಶ್ ಆಚಾರ್ಯ, ಎಸ್.ಪಿ.ವೈ.ಎಸ್.ಎಸ್  ತಾಲೂಕು ಸಂಚಾಲಕರು ಪುತ್ತೂರು,  ಶ್ರೀಮತಿ ನಯನಾ ತಾಲೂಕು...
Loading posts...

All posts loaded

No more posts

error: Content is protected !!