ಮಂಗಳೂರು: ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದಿಂದ ಜು.26ರಂದು ಆಟಿ ಆಷಾಡ ಸಂತೋಷ ಕೂಟ-2026

ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ.), ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು ಇದರ ವತಿಯಿಂದ ಜು. 26ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಬೆಂದೂರಿನ ಸೈಂಟ್ ಸೆಬಾಸ್ಟಿನ್ ಪ್ಲಾಟಿನಂ ಜ್ಯುಬಿಲಿ ಆಡಿಟೋರಿಯಂ (ಸೈಂಟ್ ಆಗ್ನೆಸ್ ಕಾಲೇಜು ಸಮೀಪ)ದಲ್ಲಿ “ಆಟಿ ಆಷಾಡ ಸಂತೋಷ ಕೂಟ-2026” ಕಾರ್ಯಕ್ರಮ ಆಯೋಜಿಸಲಾಗಿದೆ.

. . . . . . . . .

ಸಂಘದ ಅಧ್ಯಕ್ಷ ಕಿರಣ್ ಬುಡ್ಡೆಗುತ್ತು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಉದ್ಘಾಟಿಸಲಿದ್ದು, ಉಪನ್ಯಾಸ ನೀಡಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯದ ಪ್ರಧಾನ ಕಾರ್ಯದರ್ಶಿ ಅರ್. ಅಕ್ಷಯ್ ಕೆ.ಸಿ. ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.

. . . . . . .

ಕಾರ್ಯಕ್ರಮದಲ್ಲಿ ಶ್ರೀ ವಾಣಿ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಪದ್ಮ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತೆ ಬಿಂದುಶ್ರೀ ಘನ ಉಪಸ್ಥಿತಿ ವಹಿಸಲಿದ್ದಾರೆ. ಯುವ ಸಂಶೋಧಕ ಹಾಗೂ ವೈಯಕ್ತಿಕ ನಾವಿನ್ಯಕಾರ ದೀಪಕ್ ಎ.ಎಸ್. ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಪೂರ್ವಾಹ್ನ 11 ಗಂಟೆಯೊಳಗೆ ಸಭಾ ಕಾರ್ಯಕ್ರಮಕ್ಕೆ ಆಗಮಿಸಿ ಹೆಸರು ನೋಂದಾಯಿಸಿದವರಿಗೆ ಮಾತ್ರ 5 ಆಕರ್ಷಕ ಬಹುಮಾನಗಳ ಅದೃಷ್ಟ ಚೀಟಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸಂಘದ ವತಿಯಿಂದ ಸಮಾಜ ಬಾಂಧವರು ತಮ್ಮ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಧ್ಯಕ್ಷ ಕಿರಣ್ ಬುಡ್ಡೆಗುತ್ತು, ಉಪಾಧ್ಯಕ್ಷ ಆನಂದ್ ಪಿ.ಎಚ್., ಕಾರ್ಯದರ್ಶಿ ನವೀನ್‌ಚಂದ್ರ ಭೋಜಾರ, ಖಜಾಂಚಿ ಜಯಶ್ರೀ ಪಿ., ಜತೆ ಕಾರ್ಯದರ್ಶಿ ಡಾ. ಪುರುಷೋತ್ತಮ ಕೆ.ವಿ., ಮಹಿಳಾ ಘಟಕ ಹಾಗೂ ಯುವ ಘಟಕದ ಪದಾಧಿಕಾರಿಗಳು ಮತ್ತು ನಿರ್ದೇಶಕ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading