ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳ ನೇಮಕ – ಅಧ್ಯಕ್ಷರಾಗಿ ಅಬ್ದುಲ್ ಗಪೂರ್ ಕಲ್ಮಡ್ಕ, ಉಪಾಧ್ಯಕ್ಷರುಗಳಾಗಿ ಪರಶುರಾಮ ಚಿಲ್ತಡ್ಕ ಹಾಗೂ ಕರುಣಾಕರ ಅಡ್ಡಂಗಾಯ, ಖಜಾಂಜಿಯಾಗಿ ರಜಿತ್ ಭಟ್ ಪಂಜಬೀಡು

ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್‌ರವರ ಸೂಚನೆಯಂತೆ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯಕುಮಾರ್ ಸೊರಕೆಯವರ ಆದೇಶದಂತೆ, ದ.ಕ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಸ್ತುವಾರಿಗಳಾದ ಸುಧೀರ್ ಕುಮಾರ್ ಮರೋಳಿಯವರೊಂದಿಗೆ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರೊಂದಿಗೆ ಸಮಾಲೋಚಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳನ್ನು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ(ಗ್ರಾಮಾಂತರ) ಇದರ ಅಧ್ಯಕ್ಷರಾದ.ಹೆಚ್ ಮಹಮ್ಮದ್ ಆಲಿಯವರು ನೇಮಕಾತಿ ಮಾಡಿ ಆದೇಶ ಮಾಡಿರುತ್ತಾರೆ.

. . . . . . . . .

ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಅಬ್ದುಲ್ ಗಪೂರ್ ಕಲ್ಮಡ್ಕರವರನ್ನು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಈಗಾಗಲೇ ನೇಮಕ ಮಾಡಿದ್ದು, ಉಪಾಧ್ಯಕ್ಷರುಗಳನ್ನಾಗಿ ಪರಶುರಾಮ ಚಿಲ್ತಡ್ಕ, ಕರುಣಾಕರ ಅಡ್ಪಂಗಾಯ, ಖಜಾಂಜಿಯಾಗಿ ರಜಿತ್ ಕೆ ಭಟ್ ಪಂಜಬೀಡು, ಬ್ಲಾಕ್ ಸಂಯೋಜಕರುಗಳಾಗಿ ಮುಸ್ತಫಾ ಬೆಳ್ಳಾರೆ, ಪರಮೇಶ್ವರ ಕೆಂಬಾರೆ, ಅಬೂಸಾಲಿ ಗೂನಡ್ಕ, ರಾಧೇಶ್ ಕೆಮ್ಮಿಂಜೆ, ಸಿ.ಎಂ ಮಹಮ್ಮದ್ ರಫೀಕ್ ಐವತ್ತೊಕ್ಲು, ಬ್ಲಾಕ್ ಜಂಟಿ ಸಂಯೋಜಕರುಗಳಾಗಿ, ಶ್ರೀಮತಿ ಪವಿತ್ರ ಗೋಳ್ಯಾಡಿ, ಹರ್ಷಿತ್ ಅಂಬೆಕಲ್ಲು, ಆನಂದ ನಾಗಪಟ್ಟಣ, ದಯಾನಂದ ಬೊಳ್ಳೂಡಿ, ಬ್ಲಾಕ್ ಕಾರ್ಯಕಾರಿಣಿ ಸದಸ್ಯರಾಗಿ ಸದಾನಂದ ಅಡ್ತಲೆ, ಶ್ರೀಮತಿ ವಸಂತಿ ಕೊಡಪಾಲ, ಲಕ್ಷ್ಮಣ ಆಚಾರಿ ಎಲಿಮಲೆ, ಕರುಣಾಕರ ಆಳ್ವ ಕೊಡಿಯಾಲ, ಕಂದಸ್ವಾಮಿ ದಖಾಸ್ತು, ರಾಧಾಕೃಷ್ಣ ಬಿಲ್ಲರಮಜಲು ಕಲ್ಮಕಾರು, ಅಶ್ವತ್ ಜೆ ಐವರ್ನಾಡು, ಭಾಸ್ಕರ ಪೂಜಾರಿ ಬಾಜಿನಡ್ಕ, ಲೂಕಾಸ್ ಕಲ್ಲುಗುಂಡಿ, ಭವಾನಿ ಮೂರ್ಜೆ, ತಿರುಮಲೇಶ್ವರಿ ಅಡ್ಯಾರು, ಕರುಣಾಕರ ಪಳ್ಳತ್ತಡ್ಕ ಇವರನ್ನು ನೇಮಕ ಮಾಡಲಾಗಿದೆ.

. . . . . . .

ಸದರಿ ಸಮಿತಿಯ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಕೂಡಲೇ ವಹಿಸಿಕೊಂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರುಗಳ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷದ ಇತಿಹಾಸ, ಸಿದ್ದಾಂತ, ಕಾರ್ಯಕ್ರಮಗಳ ಬಗ್ಗೆ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸಗಳ ಅರಿವು ಮೂಡಿಸುವ ಮತ್ತು ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಪ್ರಚುರ ಪಡಿಸಲು ಕಾರ್ಯಯೋಜನೆಗಳನ್ನು ಹಾಕಿಕೊಂಡು ಪಕ್ಷ ಸಂಘಟನೆಯನ್ನು ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಗಫೂರ್ ಕಲ್ಮಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading