Ad Widget

ಮಂಗಳೂರು : ಗೌಡ ಒಕ್ಕಲಿಗರ ಸಂಘದ ಯುವಘಟಕದ ವತಿಯಿಂದ ಗಾಂಧಿಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

ಒಕ್ಕಲಿಗರ ಗೌಡರ ಯುವಘಟಕ ಮಂಗಳೂರು ಇವರ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ ಅವರ 151 ನೆ ಜನ್ಮದಿನಾಚರಣೆ ಅಂಗವಾಗಿ ಕದ್ರಿ ಪದವು ಶಾಲಾ ಹೊರ & ಒಳ ಆವರಣದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

. . . . . . . . .

ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಯುವ ಘಟಕದ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಮಾತನಾಡಿ ಗಾಂಧೀಜಿಯವರ ಸರಳತೆ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಮತ್ತು ಅವರ ಪರಿಕಲ್ಪನೆಗೆ ಪೂರಕವಾಗಿರುವ ಸ್ವಚ್ಛತಾ ಕಾರ್ಯಕ್ರಮ ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡಿಸಿದದಂತಾಗುತ್ತದೆ ಎಂದರು. ದಕ್ಷಿಣಕನ್ನಡ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ಲೋಕಯ್ಯ ಗೌಡರು ಯುವಕರ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಪ್ರೋತ್ಸಾಹದ ಮಾತನಾಡಿ ಮಹಾತ್ಮ ಗಾಂಧೀಜಿಯವರ ಕಾರ್ಯವನ್ನು ಯುವಕರಿಗೆ ತಿಳಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಡಾ. ದಾಮೋದರ ನಾರಾಲು ಮಾತನಾಡಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

. . . . . . .

ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಮಣ್ಣ ಗೌಡ, ಜ್ಞಾನರತ್ನ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ ಗೌಡ ದೇವಸ್ಯ ಹಾಗೂ ಒಕ್ಕಲಿಗ ಗೌಡ ಮಾತೃಸಂಘದ ಡೈರೆಕ್ಟರ್ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಯೋಜನಾಧಿಕಾರಿ ಬಾಲಕೃಷ್ಣ ಗೌಡ. ಉಪಾಧ್ಯಕ್ಷ ಪುಂಡರಿಕ ಡಿಪಿ , ವಾಸುದೇವ ಗೌಡ ,ಪದ್ಮನಾಭ ಗೌಡ, ಪುರುಷೋತ್ತಮ ದೇವಸ್ಯ ,ನಿಂಗಯ್ಯ ರವರು ಭಾಗವಹಿಸಿದ್ದರು ಮತ್ತು ಯುವ ಘಟಕದ ಸಕ್ರೀಯ ಪದಾಧಿಕಾರಿಗಳಾದ ರಾಘವೇಂದ್ರ, ಚಂದ್ರಶೇಕರ್, ನಾಗೇಶ್ ಕೆ, ಪ್ರಕಾಶ್, ಶಾಂತಪ್ಪ , ಸುಂದರ್ ಜಿ.ಹೆಚ್‌, ಯತೀಶ್ ಕಜ್ಜೋಡಿ , ಶಿವಪ್ರಕಾಶ್ , ಚೇತನ್ ಕೆಂಗುಡೇಲು, ರಕ್ಷಿತ್ ಪುತ್ತಿಲ, ಸುನಿಲ್ ಕೇನಡ್ಕ, ನಿತಿನ್ ಕೂಜುಕೋಡು,
ಹೇಮಲತಾ ಗೌಡ , ಸೌಮ್ಯಸುರೇಶ್ ಬೈಲು, ಗಣೇಶ್ ಕಲಾಯಿ, ಕಿರಣ್ ಹೋಸೋಳಿಕೆ, ದೀನೆಂದ್ರ ಉಳುವಾರು, ಪದ್ಮನಾಭ ಮೇರ್ಕಜೆ, ಮಹೇಶ್ ಮೋಂಟಡ್ಕ, ಮಹೇಶ್ ನಡುತೋಟ, ಸುಜಯಕುಮಾರ್ , ಮನೋಜ್ ಕುಮಾರ್ ಆಮೆ, ಅಶ್ವಥ್ ಎಂ.ಎಸ್. ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಮತ್ತು ಸಮಾಜದ ಹಲವು ಯುವಕರು , ಯುವತಿಯರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading