Ad Widget

ಅಕ್ಟೋಬರ್ 29(ರಬೀಉಲ್ ಅವ್ವಲ್ 12): ಅಕ್ಟೋಬರ್ 18 ಭಾನುವಾರ ರಬೀಉಲ್ ಅವ್ವಲ್ ತಿಂಗಳು ಪ್ರಾರಂಭ

ಮುಸಲ್ಮಾನ ಬಾಂಧವರ ಪೈಗಂಬರ್ ಮುಹಮ್ಮದ್ ಸ.ಅ.ರವರ ಜನ್ಮ ದಿನದ ಆಚರಣೆಯ ರಬೀಉಲ್ ಅವ್ವಲ್ ತಿಂಗಳ ಚಂದ್ರದರ್ಶನ ವಾಗಿದ್ದು, ಭಾನುವಾರ (ಅ. 18) ರಬೀಉಲ್ ಅವ್ವಲ್ ಚಾಂದ್ 1 ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಗಳು ಘೋಷಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 29 (ರಬೀಉಲ್ ಅವ್ವಲ್ 12) ರ ಮೀಲಾದುನ್ನಬಿ (ಈದ್ ಮಿಲಾದ್)ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ...

ಕಸ್ತೂರಿರಂಗನ್ ವರದಿ ಅವೈಜ್ಞಾನಿಕ : ಸರಕಾರ ಜನರ ಅಭಿಪ್ರಾಯ ಪಡೆಯಬೇಕು – ರೈತರ ಉಳಿವಿಗಾಗಿ ಜನಾಂದೋಲನದ ಎಚ್ಚರಿಕೆ ನೀಡಿದ ಮಲೆನಾಡು ಜಂಟಿ ಕ್ರಿಯಾ ಸಮಿತಿ

ಕಸ್ತೂರಿರಂಗನ್ ವರದಿ ಜಾರಿಗೂ ಮೊದಲು ರೈತರ, ಜನರ ಅಭಿಪ್ರಾಯ ವನ್ನು ಸರಕಾರಗಳು ಪಡೆಯಬೇಕು. ಒಂದು ವೇಳೆ ಅಭಿಪ್ರಾಯ ಪಡೆಯದೇ ಜಾರಿಗೊಂಡರೆ ಮಲೆನಾಡು ಜಂಟಿ ಕ್ರಿಯಾ ಸಮಿತಿ ಜನಾಂದೋಲನ ಕೈಗೊಂಡು ಹೋರಾಟ ನಡೆಸಲಿದೆ ಎಂದು ಮಲೆನಾಡು ಜಂಟಿ ಕ್ರಿಯಾಯ ಸಂಚಾಲಕ ಪ್ರದೀಪ್ ಕೆ.ಎಲ್. ಹಾಗೂ ಅಶೋಕ್ ಎಡಮಲೆ ತಿಳಿಸಿದ್ದಾರೆ. ಅ.17 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ...
Ad Widget

ಗಾಂಧಿನಗರ : ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮೇಲುಸ್ತುವಾರಿ ಸಮಿತಿ ಸಭೆ

ಗಾಂಧಿನಗರ ಸುಳ್ಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮೇಲುಸ್ತುವಾರಿ ಸಮಿತಿ ಸಭೆ ಗಾಂಧಿನಗರ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಸಕ ಅಂಗಾರ ವಹಿಸಿದ್ದರು. ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ.,ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ನಾಯಕ್ ಸುಳ್ಯ,ಶಾಲಾ ಸಮಿತಿಯ ಹಿರಿಯ ಸಲಹೆಗಾರರು ಎಂ ವೆಂಕಪ್ಪ ಗೌಡ, ಎನ್...

ಕಲ್ಮಕಾರು : ಯುವಕ ಆತ್ಮಹತ್ಯೆ

ಕಲ್ಮಕಾರು ಗ್ರಾಮದ ಪಡ್ಪು ವಸಂತ ರವರ ಪುತ್ರ ಲೋಹಿತ್ (24) ಇಂದು ಮಧ್ಯಾಹ್ನ ಮನೆಯ ಸಮೀಪದ ಮಾವಿನಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತ ಲೋಹಿತ್ ತಂದೆ,ಹಾಗೂ ತಂಗಿಯನ್ನು ಅಗಲಿದ್ದಾರೆ.

ಲಕ್ಷ್ಮೀ ಪಟಾಕಿ ಸುಡುವುದು ಸರಿಯೇ?! – ದೇವರ ಚಿತ್ರವಿರುವ ಪಟಾಕಿಗಳನ್ನು ಖರೀದಿಸದಿರೋಣ, ಸುಡದಿರೋಣ

ಯಾವ್ದೋ ಒಂದು ಮದುವೆ ಕಾಗದದಲ್ಲಿ ಅಚ್ಚಾಗುವ ದೇವರ ಭಾವಚಿತ್ರವನ್ನು ಕತ್ತರಿಸಿಟ್ಟು ಪೂಜಿಸುವಷ್ಟು ದೇವರ ಮೇಲೆ ನಂಬಿಕೆಯಿಟ್ಟಿರುವ ನಾವು. ಒಂದೊಮ್ಮೆ ದೇವರ ಭಾವಚಿತ್ರಕ್ಕೆ ಗೊತ್ತಿಲ್ಲದೆ ತುಳಿದರೂ ಮುಂದೇನು ಅನಾಹುತವಾದಿತೆಂದು ನೂರೊಂದು ಬಾರಿ ದೇವರನ್ನು ಜಪಿಸುವ ನಾವು. ಲಕ್ಷ್ಮೀ ದೇವಿಯ ಭಾವಚಿತ್ರವನ್ನು ಸುಟ್ಟು ಸಂಭ್ರಮಿಸುವುದು ಸಾಧುವೇ..?ದೀಪಾವಳಿ ಎಂದಾಕ್ಷಣ ನಮಗೆ ತಕ್ಷಣ ನಮಗೆಪಟಾಕಿಗಳೇ! ಅದೂ ಹಬ್ಬದ ಸಂಭ್ರಮದ ತೀವ್ರತೆಯನ್ನು ಅಳತೆ...

ಜಾಲುಮನೆ ಕಿರುಸೇತುವೆ ಕುಸಿತ- ಮಾಜಿ ತಾ.ಪಂ.ಸದಸ್ಯ ಪಿ.ಸಿ.ಜಯರಾಮ ಸ್ಪಂದನೆ

ಕೊಲ್ಲಮೊಗ್ರು ಗ್ರಾಮದ ಜಾಲುಮನೆ ಸಂಪರ್ಕಿಸುವ ಜಾಲುಮನೆ ಕಿರು ಸೇತುವೆ ಭಾರಿ ಮಳೆಗೆ ಕುಸಿತಗೊಂಡಿದೆ. ಸಂಪರ್ಕ ಕಡಿತಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ನೀಡಿದ ಮಾಜಿ ತಾಪಂ ಸದಸ್ಯ ಪಿ ಸಿ ಜಯರಾಮ್ ಸೇತುವೆ ವೀಕ್ಷಿಸಿ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.ಈ ಬಗ್ಗೆ ಅವರು ಕೂಡಲೇ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸೇತುವೆ ಕುಸಿತದಿಂದ ಸುಮಾರು...

ಪೈಚಾರ್: ಈದ್ ಮಿಲಾದ್ ಸಮಿತಿ ರಚನೆ

ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಈದ್ ಮಿಲಾದ್ ಆಚರಣೆ ಅಂಗವಾಗಿ ಪೈಚಾರ್ ಈದ್ ಮಿಲಾದ್ ಸಮಿತಿ ರಚನೆ ಅ. 16. ರಂದು ಪೈಚಾರ್ ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ. ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಮಿಲಾದ್ ಸಮಿತಿ ಪೈಚಾರ್ ಅಧ್ಯಕ್ಷರಾದ ಆಶ್ರಫ್ ಪೈಚಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಪಿ ಉಪಸ್ಥಿತರಿದ್ದರು. ಕೊರೋನಾ ವೈರಸ್...

ಮೈಸೂರು ಸರಳ ದಸರಾಕ್ಕೆ ಚಾಲನೆ

ಜಗವಿಖ್ಯಾತ ಮೈಸೂರು ದಸರಾಕ್ಕೆ ವೈಭವಕ್ಕೆ ಇಂದು ಚಾಲನೆ ದೊರೆತಿದೆ. ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ ರವರು ಬೆಳಿಗ್ಗೆ 7.40ರ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಬಿ.ಎಸ್.ಯಡಿಯೂರಪ್ಪ, ಡಿ.ಸಿ.ಯಂ. ಅಶ್ವತ್ಥ್ ನಾರಾಯಣ, ಶಾಸಕರಾದ ರಾಮದಾಸ್, ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು....

ಶಿರಾ ವಿಧಾನಸಭಾ ಕ್ಷೇತ್ರದ ಜಾಲತಾಣದ ಉಸ್ತುವಾರಿಯಾಗಿ ಸೂರಜ್ ಹೊಸೂರು

ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ ನಡೆಸುವ ಜವಾಬ್ದಾರಿಯನ್ನು ಸೂರಜ್ ಹೊಸೂರು ಅವರನ್ನು ಕೆಪಿಸಿಸಿ ನೇಮಕ ಮಾಡಿದೆ. ಇವರಿಗೆ ನಾದೂರು ಜಿ.ಪಂ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಚೆಂಬು ಗ್ರಾಮದ ಹೊಸೂರಿನವರಾದ ಇವರು ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾಗಿ ಶ್ರಮಿಸುತ್ತಿದ್ದಾರೆ.
error: Content is protected !!